ABD - Virat Kohli: ವಿರಾಟ್ ಹರ್ಷೋದ್ಗಾರದ ಭಂಗಿಗಳನ್ನು ತಮ್ಮದೇ ಶೈಲಿಯಲ್ಲಿ ಅನುಕರಿಸಿದ ಎಬಿಡಿ; ನಗೆಗಡಲಲ್ಲಿ ತೇಲಾಡಿದ ತಂಡ

AB de Villers mimics Virat Kohli: ಎಬಿಡಿ ವಿಲಿಯರ್ಸ್ ವಿರಾಟ್ ಅವರ ಹರ್ಷೋದ್ಗಾರದ ಕೆಲವೊಂದು ಭಂಗಿಗಗಳನ್ನು ತಮ್ಮದೇ ಶೈಲಿಯಲ್ಲಿ ಅನುಕರಿಸಿ ತಂಡದಲ್ಲಿ ಇನ್ನಷ್ಟು ಹಾಸ್ಯವನ್ನುಂಟು ಮಾಡಿದರು. ಶಾಂತರಾಗಿ ಗೆಳೆಯರೇ, ಇದು ಒಂದು ಪಂದ್ಯ ಮಾತ್ರವಾಗಿದೆ ಎಂದು ಇದೇ ಸಮಯದಲ್ಲಿ ಎಬಿಡಿ ತಂಡಕ್ಕೆ ಎಚ್ಚರಿಕೆ ಕೂಡ ನೀಡಿದ್ದಾರೆ

ಎ ಬಿ ಡೆವಿಲಿಯರ್ಸ್​ ಮತ್ತು ವಿರಾಟ್​ ಕೊಹ್ಲಿ ಸಾಂದರ್ಭಿಕ ಚಿತ್ರ

ಎ ಬಿ ಡೆವಿಲಿಯರ್ಸ್​ ಮತ್ತು ವಿರಾಟ್​ ಕೊಹ್ಲಿ ಸಾಂದರ್ಭಿಕ ಚಿತ್ರ

 • Share this:
  IPL 2021 Updates: ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧದ ಪಂದ್ಯದಲ್ಲಿ ವಿರಾಟ್ ಹಾಗೂ ಎಬಿಡಿ ವಿಲಿಯರ್ಸ್ (Virat Kohli - AB de Villers) ಜೊತೆಯಾಟದ ಮೂಲಕ ತಂಡವು ಗೆಲುವನ್ನು ಸಾಧಿಸಿದ್ದು ಪ್ಲೇ-ಆಫ್ ತಲುಪುವ ಕನಸನ್ನು ಉಜ್ವಲಗೊಳಿಸಿದ್ದಾರೆ. ಇದರಿಂದ ತಂಡಕ್ಕೆ ಇನ್ನಷ್ಟು ಹುರುಪು ಬಂದಂತಾಗಿದೆ. ಆರ್‌ಸಿಬಿ ತಂಡದಲ್ಲಿ ಇನ್ನಷ್ಟು ಸಂತಸ ಕೇಕೆಗಳ ಉದ್ಗಾರ ಮೊಳಗಿದ್ದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ 54 ರನ್‌ಗಳ ಭರ್ಜರಿ ಗೆಲುವನ್ನು ತನ್ನ ಮುಡಿಗೇರಿಸಿಕೊಂಡಿದೆ.

  ಈ ಸಮಯದಲ್ಲಿ ತಂಡದ ನಾಯಕಾರದ Virat Kohli ತಂಡದ ಗೆಲುವು ಪುನಃ ನಮ್ಮನ್ನು ಐಪಿಎಲ್-2021 ರ ಪ್ಲೇ-ಆಫ್‌ಗಾಗಿ ಅದೇ ಟ್ರ್ಯಾಕಿನಲ್ಲಿ ಹಿಂತಿರುಗುವತ್ತ ಮಾಡುತ್ತಿದೆ ಎಂದು ಹರ್ಷ ಪ್ರಕಟಿಸಿದ್ದಾರೆ. ಈ ಸಂದರ್ಭದಲ್ಲಿ ಎಬಿಡಿ ವಿಲಿಯರ್ಸ್ ವಿರಾಟ್ ಅವರ ಹರ್ಷೋದ್ಗಾರದ ಕೆಲವೊಂದು ಭಂಗಿಗಗಳನ್ನು ತಮ್ಮದೇ ಶೈಲಿಯಲ್ಲಿ ಅನುಕರಿಸಿ ತಂಡದಲ್ಲಿ ಇನ್ನಷ್ಟು ಹಾಸ್ಯವನ್ನುಂಟು ಮಾಡಿದರು. ಶಾಂತರಾಗಿ ಗೆಳೆಯರೇ, ಇದು ಒಂದು ಪಂದ್ಯ ಮಾತ್ರವಾಗಿದೆ ಎಂದು ಇದೇ ಸಮಯದಲ್ಲಿ ಎಬಿಡಿ ತಂಡಕ್ಕೆ ಎಚ್ಚರಿಕೆ ಕೂಡ ನೀಡಿದ್ದಾರೆ. ಇದೇ ಸಮಯದಲ್ಲಿ ಎಬಿಡಿ ಮಾತುಗಳನ್ನು ಪುನರುಚ್ಛರಿಸಿದ ವಿರಾಟ್ ದೊಡ್ಡ ಗೆಲುವನ್ನು ಸಾಧಿಸುವವರೆಗೆ ನಮ್ಮ ಪ್ರಯತ್ನಗಳು ಹೀಗಿಯೇ ಇರಬೇಕು ಎಂದು ತಿಳಿಸಿದ್ದಾರೆ. 10 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಜಯಿಸುವ ಮೂಲಕ ಮಾಜಿ ಫೈನಲಿಸ್ಟ್‌ಗಳು ಮೂರನೇ ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದಾರೆ. ಎರಡನೇ ವಿಜಯಿ ವರ್ಷಕ್ಕಾಗಿ ಪ್ಲೇ-ಆಫ್‌ಗಳಲ್ಲಿ ಕಾಣಿಸಿಕೊಳ್ಳಲು ಆರ್‌ಸಿಬಿಗೆ ಇನ್ನೂ ಒಂದೆರಡು ಗೆಲುವುಗಳ ಅಗತ್ಯವಿದೆ.

  ಎಬಿ ಹೇಳಿದಂತೆಯೇ ಗೆಲುವಿನ ಉತ್ಸಾಹದಲ್ಲಿ ನಾವು ಮೈಮರೆಯಬಾರದು, ಸ್ಥಿರವಾಗಿರಬೇಕು ಎಂದು ಕೊಹ್ಲಿ ತಂಡಕ್ಕೆ ಕಿವಿಮಾತು ಹೇಳಿದ್ದಾರೆ. ಆಟದ ಮೈದಾನದಲ್ಲಿ ಆರ್‌ಸಿಬಿ ಧನಾತ್ಮಕವಾಗಿ ಕಾಣುತ್ತಿದೆ ಕೆಎಸ್ ಭರತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಟಿಂಗ್ ವೈಖರಿಯಿಂದಲೇ ಮುಂಬೈ ಇಂಡಿಯನ್ಸ್ ವಿರುದ್ಧ ತಂಡವು ಜಯಗಳಿಸಲು ಸಾಧ್ಯವಾಯಿತು ಎಂದು ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: RR vs SRH- ಟಾಸ್ ಗೆದ್ದ ಸ್ಯಾಮ್ಸನ್; ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್

  ಮುಂಬೈನಂತಹ ಘಟಾನುಘಟಿ ತಂಡದ ವಿರುದ್ಧ ಸಾಧಿಸಿದ ಗೆಲುವು ಸುಲಭವಾಗಿ ಬಂದಿರುವಂತಹದ್ದಲ್ಲ. ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೇವೆ. ಕೊನೆಯಲ್ಲಿ 36 ಓವರ್‌ಗಳಲ್ಲಿ ನಾವು ಹಾಕಿದ ಎಲ್ಲಾ ಕಠಿಣ ಪರಿಶ್ರಮಗಳು ಜಯದ ಸ್ಥಾನಕ್ಕೇರಲು ನೆರವು ನೀಡಿತು ಎಂದು ಹೇಳಿದ್ದಾರೆ. ಸಣ್ಣ ಸಣ್ಣ ವಿಷಯಗಳು ಕೂಡ ದೊಡ್ಡ ಗೆಲುವಿಗೆ ಸಾಧ್ಯ ಎಂಬುದನ್ನು ವಿರಾಟ್ ಇಲ್ಲಿ ಹೇಳಿದ್ದಾರೆ. ಕೆಎಸ್ ಭರತ್ ಬ್ಯಾಟಿಂಗ್ ಮಾಡಹೊರಟಾಗ ಅವರು ಬ್ಯಾಟಿಂಗ್‌ನತ್ತ ತೋರಿದ ಇಂಗಿತ ಹಾಗೂ ಮ್ಯಾಕ್ಸ್‌ವೆಲ್ ಚೆಂಡಿನ ಸಂಪೂರ್ಣ ಸದುಪಯೋಗವನ್ನು ಮಾಡಿ ಉತ್ತಮ ರನ್‌ಗಳನ್ನು ಕಲೆಹಾಕುವಲ್ಲಿ ಸಾಥ್ ನೀಡಿದ್ದು ಇಂತಹ ಅನುಭವವನ್ನು ನಾನು ಎಲ್ಲಿಯೂ ಅನುಭವಿಸಿಲ್ಲ. ಇದೇ ಪರಿಶ್ರಮವನ್ನು ನಾವು ಇನ್ನುಮುಂದೆಯೂ ಆಟದಲ್ಲಿ ತೋರಿಸಬೇಕು ಎಂದು ವಿರಾಟ್ ತಂಡವನ್ನು ಹುರಿದುಂಬಿಸಿದ್ದಾರೆ.

  ಇಂದಿನ ಒಂದು ಜಯ ಮುಂದಿನ ನಮ್ಮ ಎಲ್ಲಾ ಪಂದ್ಯಗಳಿಗೆ ಉತ್ತಮ ಅಡಿಪಾಯವಾಗಿದ್ದು ನಾವು ಕೊಂಚ ಕೂಡ ಮೈಮರೆಯಬಾರದು ಎಂದು ತಂಡಕ್ಕೆ ತಿಳಿಹೇಳಿದ್ದಾರೆ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಆರ್​ಸಿಬಿ ಈಗಾಗಲೇ ಪ್ಲೇ ಆಫ್​ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ. ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅಂಕ ಪಟ್ಟಿಯಲ್ಲಿ ಇನ್ನೂ ಮೇಲೆ ಹೋಗಬಹುದು. ಎಬಿ ಡೆವಿಲಿಯರ್ಸ್​, ಮ್ಯಾಕ್ಸ್​ವೆಲ್​, ವಿರಾಟ್​ ಕೊಹ್ಲಿ ಫಾರ್ಮ್​ಗೆ ಮರಳಿರುವುದು ತಂಡಕ್ಕೆ ಆಶಾದಾಯಕವಾಗಿದೆ. ಜತೆಗೆ ದೇವದತ್​ ಪಡಿಕ್ಕಲ್​ ಕೂಡ ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ಉತ್ತಮ ಆರಂಭ ಸಿಗುವಂತೆ ಮಾಡಿದೆ. ಆರ್​ಸಿಬಿ ಬೆಂಬಲಿಗರು ವಿರಾಟ್​ ಕೊಹ್ಲಿ ನಾಯಕನಾಗಿ ಆಡುತ್ತಿರುವ ಕಡೆಯ ಐಪಿಎಲ್​ನಲ್ಲಾದರೂ ಕಪ್​ ಸಿಗಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಆರ್​ಸಿಬಿ ಈ ಬಾರಿಯಾದರೂ ಫ್ಯಾನ್ಸ್​ ಕನಸನ್ನು ನನಸು ಮಾಡುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
  Published by:Sharath Sharma Kalagaru
  First published: