• Home
 • »
 • News
 • »
 • ipl
 • »
 • ಆರ್‌ಸಿಬಿ ತಂಡ ಸೇರಿದ ಎಬಿ ಡಿವಿಲಿಯರ್ಸ್; ಸನ್ ರೈಸರ್ಸ್ ತಂಡ ಸೇರಿದ ಕೇನ್ ವಿಲಿಯಮ್ಸನ್​

ಆರ್‌ಸಿಬಿ ತಂಡ ಸೇರಿದ ಎಬಿ ಡಿವಿಲಿಯರ್ಸ್; ಸನ್ ರೈಸರ್ಸ್ ತಂಡ ಸೇರಿದ ಕೇನ್ ವಿಲಿಯಮ್ಸನ್​

ಎಬಿಡಿ ಫೈಲ್​ ಫೋಟೊ

ಎಬಿಡಿ ಫೈಲ್​ ಫೋಟೊ

IPL 2021 Latest Updates: ಆರ್‌ಸಿಬಿ ಪ್ರಸ್ತುತ 8 ತಂಡ ಪಾಯಿಂಟ್‌ಗಳ ಪಟ್ಟಿಯಲ್ಲಿ 10 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಮೂರನೇ ಸ್ಥಾನದಲ್ಲಿದೆ ಹಾಗೂ ಎರಡನೇ ಸೀಸನ್‌ಗೆ ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆಯಲು ಉತ್ತಮವಾಗಿದೆ.

 • Trending Desk
 • 4-MIN READ
 • Last Updated :
 • Share this:

  ಇಂಡಿಯನ್ ಪ್ರೀಮಿಯರ್ ಪುನರಾರಂಭಗೊಳ್ಳುವ (Indian Premier League 2021) ಮುನ್ನವೇ ಎಬಿ ಡಿ ವಿಲಿಯರ್ಸ್ (AB De Villiers) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಬಾಂಗ್ಲಾದೇಶ ಪ್ರವಾಸವನ್ನು ಕೈಬಿಟ್ಟಿರುವ ಕೇನ್ ವಿಲಿಯಮ್ಸನ್ (Cane Williamson) ಕೂಡ ಸನ್ ರೈಸರ್ಸ್ ಹೈದ್ರಾಬಾದ್ (Sun Raisers Hyderabad) ತಂಡವನ್ನು ಸೇರಲು ಯುಎಇ (IPL UAE) ತಲುಪಿದ್ದಾರೆ.


  ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್ ಆಗಿರುವ ಎಬಿಡಿ ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಲು ದುಬೈಗೆ ತಲುಪಿರುವುದಾಗಿ ತಂಡವು ಈಗಾಗಲೇ ಘೋಷಣೆ ಮಾಡಿದೆ. ಇಂಗ್ಲೆಂಡ್ ಟೆಸ್ಟ್ ಮುಗಿದೊಡನೆಯೇ ವಿರಾಟ್ ಕೊಹ್ಲಿಯೊಂದಿಗೆ (RCB Captain Virat Kohli) ತಂಡದ ಇತರ ಆಟಗಾರರನ್ನು ಸೇರಲಿರುವ ದಕ್ಷಿಣ ಆಫ್ರಿಕಾದ ಸ್ಟಾರ್ ವಿಲಿಯರ್ಸ್ ಫೋಟೋವನ್ನು ತಂಡ ಹಂಚಿಕೊಂಡಿದೆ. 37 ರ ಹರೆಯದ ವಿಲಿಯರ್ಸ್ ಮೇಲೆ ತಂಡವು ಹೆಚ್ಚಿನ ನಿರೀಕ್ಷೆ ಹೊಂದಿದ್ದು ವಿಲಿಯರ್ಸ್ ಅವರು ಕೂಡ ಮೇ ತಿಂಗಳ ನಂತರ ಯಾವುದೇ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡದೇ ಇರುವುದರಿಂದ ತಂಡದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂಬುದು ಖಾತ್ರಿಯಾಗಿದೆ.


  ಆರ್‌ಸಿಬಿ ಮುಖ್ಯ ಕೋಚ್ ಹಾಗೂ ಕ್ರಿಕೆಟ್ ನಿರ್ದೇಶಕರಾಗಿರುವ (RCB Coach Mike Hessor) ಮೈಕ್ ಹೆಸ್ಸನ್, ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glen Maxwel) ಕೂಡ ತಂಡವನ್ನು ಸೇರಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ನ್ಯೂಜಿಲ್ಯಾಂಡ್ ತಂಡದ ಆಲ್‌ರೌಂಡರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಟಾರ್, ಕೈಲ್ ಜೇಮಿಸನ್ ಯುಎಇಯಲ್ಲಿ ತಂಡವನ್ನು ಸೇರಿಕೊಳ್ಳುವುದು ಖಾತ್ರಿಯಾಗಿದೆ.


  ಆರ್‌ಸಿಬಿ ಪ್ರಸ್ತುತ 8 ತಂಡ ಪಾಯಿಂಟ್‌ಗಳ ಪಟ್ಟಿಯಲ್ಲಿ 10 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಮೂರನೇ ಸ್ಥಾನದಲ್ಲಿದೆ ಹಾಗೂ ಎರಡನೇ ಸೀಸನ್‌ಗೆ ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆಯಲು ಉತ್ತಮವಾಗಿದೆ. ಆರ್‌ಸಿಬಿ ಬದಲಿ ಆಟಗಾರರನ್ನು ಘೋಷಣೆ ಮಾಡಿದೆ ವನಿದು ಹಸರಂಗ, ದುಷ್ಮಂತ ಚಮೀರಾ ಮತ್ತು ಟಿಮ್ ಡೇವಿಡ್ ಉಳಿಸ ಸೀಸನ್‌ನಲ್ಲಿ ಆಡಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knite Riders) ವಿರುದ್ಧ ತಮ್ಮ ಅಭಿಯಾನವನ್ನು ಪುನರಾರಂಭಿಸುತ್ತಾರೆ.


  ಸನ್ ರೈಸರ್ಸ್ ಹೈದ್ರಾಬಾದ್ ತಂಡವು ತಮ್ಮ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಸೇರಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬಾಂಗ್ಲದೇಶ ವಿರುದ್ಧದ ಟಿ20ಐ ನ 5 ನಡೆಯುತ್ತಿರುವ ಪಂದ್ಯದಲ್ಲಿ ವಿಲಿಯಮ್ಸ್‌ನ್ ನ್ಯೂಜಿಲ್ಯಾಂಡ್ ತಂಡದ ಭಾಗವಾಗಿಲ್ಲ.


  ವಿಲಿಯಮ್ಸನ್ 3 ಪಂದ್ಯಗಳ ಏಕದಿನ ಮತ್ತು 5 ಪಂದ್ಯಗಳ ಟಿ 20 ಪಂದ್ಯದಲ್ಲಿ ಭಾಗವಾಗಿರುವುದಿಲ್ಲ ಏಕೆಂದರೆ ನ್ಯೂಜಿಲ್ಯಾಂಡ್ ಪಾಕಿಸ್ತಾನದ ವಿರುದ್ಧ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 3 ರವರೆಗೆ ಪಾಕಿಸ್ತಾನದಲ್ಲಿ ಆಡಲಿದೆ.


  ಇದನ್ನೂ ಓದಿ: ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ರಾಜೀವ್ ಸೇಥಿ ಕೇಳಿದ ಪ್ರಶ್ನೆಗೆ ಟ್ವಿಟ್ಟರ್‌ನಲ್ಲಿ ಕಟು ಟೀಕೆ!


  ಗಮನಾರ್ಹವಾಗಿ, ಕ್ಯಾಪ್ಟನ್ ಡೇವಿಡ್ ವಾರ್ನರ್ ಬದಲಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಕೇನ್​ ವಿಲಿಯಮ್ಸನ್​ರಿಗೆ ನೀಡಲಾಯಿತು. ನಂತರ ಕೊರೋನಾ ಪ್ರಕರಣಗಳು ಹೆಚ್ಚಾದಾಗ ಐಪಿಎಲ್ 2021 ಅಮಾನತುಗೊಂಡಿತು. ಎಬಿಡಿ ವಿಲಿಯರ್ಸ್ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದು ಸೆಪ್ಟೆಂಬರ್ 20 ರಂದು ಕೋಲ್ಕತ್ತಾ ನೈಟ್ ರೈಡರ್ಸ್‌ನೊಂದಿಗೆ ತಮ್ಮ ಅಭಿಯಾನವನ್ನು ಪುನರಾರಂಭಿಸಲಿದ್ದಾರೆ. ಬಾಂಗ್ಲಾದೇಶ ಪ್ರಯಾಣವನ್ನು ತಪ್ಪಿಸಿಕೊಂಡಿದ್ದ ಕೇನ್ ವಿಲಿಯಮ್ಸನ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಲಿದ್ದಾರೆ.


  ಇದನ್ನೂ ಓದಿ: ಸುಸ್ಥಿತಿಯಲ್ಲಿ ಭಾರತ, ಅನಿಲ್ ಕುಂಬ್ಳೆ ಬಳಿಕ ಓವಲ್ ಅಂಗಳದಲ್ಲಿ ಹೊಸ ಇತಿಹಾಸ!


  ಐಪಿಎಲ್​ ಪ್ರಶಸ್ತಿ ಗೆಲ್ಲುವ ಇಷ್ಟು ವರ್ಷಗಳ ಕನಸು ಈ ಬಾರಿಯಾದರೂ ನನಸಾಗಲಿದೆಯಾ ಎಂದು ಆರ್​ಸಿಬಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿರಾಟ್​ ಕೊಹ್ಲಿ ಕೂಡ ಕಳಪೆ ಫಾರ್ಮ್​ ಮುಂದುವರೆಸಿದ್ದು, ಕಡೆಯ ಟೆಸ್ಟ್​ನಲ್ಲಾದರೂ ಲಯಕ್ಕೆ ಮರಳಲಿ ಎಂದು ಆರ್​ಸಿಬಿ ತಂಡ ನಿರೀಕ್ಷಿಸುತ್ತಿದೆ. ಆರ್​ಸಿಬಿ ಓಪನರ್​ ದೇವದತ್​ ಪಡಿಕ್ಕಲ್​ ಸೀಸನ್​ನ ಆರಂಭದಲ್ಲೇ ಶತಕ ಬಾರಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಅವರೂ ಕೂಡ ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದಾರೆ. ಆ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ತವಕದಲ್ಲಿದ್ದಾರೆ.

  Published by:Sharath Sharma Kalagaru
  First published: