IPL 2020: ಅವಾಚ್ಯ ಪದ ಬಳಕೆ: RCB ಆರಂಭಿಕನ ತಲೆದಂಡ ಸಾಧ್ಯತೆ..!

KL Rahul: ಇತ್ತೀಚೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಸಹ ಆಟಗಾರನಿಗೆ ಕನ್ನಡದಲ್ಲಿ ಆಡಿದ ಮಾತು ಮೈಕ್‌ನಲ್ಲಿ ಸ್ಪಷ್ಟವಾಗಿ ಕೇಳಿಸಿತ್ತು.

rcb

rcb

 • Share this:
  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯ ಹಲವು ರೀತಿಯಲ್ಲಿ ಗಮನ ಸೆಳೆಯಿತು. ಒಂದೆಡೆ ಎಬಿ ಡಿವಿಲಿಯರ್ಸ್ ಆರ್ಭಟವಾದರೆ, ಮತ್ತೊಂದೆಡೆ ಆರ್​ಸಿಬಿ 82 ರನ್​ಗಳ ಭರ್ಜರಿ ಜಯ. ಇನ್ನೊಂದೆಡೆ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಎರಡು ದಾಖಲೆಗಳನ್ನು ಮುರಿದು ಎಬಿಡಿ ಹೊಸ ಇತಿಹಾಸ ಬರೆದರು. ಹೀಗೆ ನಾನಾ ರೀತಿಯಲ್ಲಿ ರಸದೌತಣ ಒದಗಿಸಿದ್ದ ಪಂದ್ಯದಲ್ಲಿ ಒಂದು ಅಹಿತಕರ ಘಟನೆ ಕೂಡ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

  ಕೆಕೆಆರ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಹೊರತಾಗಿ ಮಿಂಚಿದ್ದು ಆರಂಭಿಕ ಆಟಗಾರ ಆರೋನ್ ಫಿಂಚ್. 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ ಫಿಂಚ್ 47 ರನ್ ಬಾರಿಸಿದ್ದರು. ಇದರ ನಡುವೆ ಆಂಡ್ರೆ ರಸೆಲ್ ಬೌಲಿಂಗ್ ವೇಳೆ ಬಳಸಿದ ಅವಾಚ್ಯ ಪದವೊಂದು ಸ್ಟಂಪ್ ಮೈಕ್​ನಲ್ಲಿ ದಾಖಲಾಗಿದೆ.

  ಪಂದ್ಯ 6ನೇ ಓವರ್​ನಲ್ಲಿ ಬೌಲಿಂಗ್ ಮಾಡಿದ ರಸೆಲ್ ಅವರ 4ನೇ ಎಸೆತಕ್ಕೆ ಮರುತ್ತರ ನೀಡಲು ಫಿಂಚ್ ಎಡವಿದ್ದರು. ನಿಧಾನಗತಿಯಲ್ಲಿ ಬಂದ ಬಾಲ್ ಮಿಸ್ ಆಗುತ್ತಿದ್ದಂತೆ ಫಿಂಚ್ “ಓ, ಯು ಬಾ**ರ್ಡ್” ಎಂದಿರುವುದು ಮೈಕ್​ನಲ್ಲಿ ದಾಖಲಾಗಿತ್ತು. ಆದರೆ ಇಲ್ಲಿ ಫಿಂಚ್ ಹತಾಶೆಯಿಂದ ಹೇಳಿದ ಮಾತನ್ನು ಅತ್ತ ಕಮೆಂಟರರ್​ಗಳು ವಿವರಿಸಲು ಆರಂಭಿಸಿದ್ದರು. ಇದರಿಂದ ಇದೀಗ ಫಿಂಚ್ ಹೇಳಿದ ಅವಾಚ್ಯ ಶಬ್ದ ಚರ್ಚೆಗೀಡಾಗಿದೆ. ಅಲ್ಲದೆ ಅದರ ಬಗ್ಗೆ ವಿವರಣೆ ನೀಡಲು ಮುಂದಾದ ಕಮೆಂಟೇಟರ್​ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.


  ಫಿಂಚ್ ಆಡಿರುವ ಈ ಮಾತಿನ ಬಗ್ಗೆ ಕೆಕೆಆರ್ ಗಂಭೀರವಾಗಿ ಪರಿಗಣಿಸಿ ಮ್ಯಾಚ್ ರೆಫರಿಗೆ ದೂರು ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಈಗಾಗಲೇ ಸುನೀಲ್ ನರೈನ್ ಬೌಲಿಂಗ್ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಆರ್​ಸಿಬಿ ವಿರುದ್ಧ ಅವರು ಕಣಕ್ಕಿಳಿದಿರಲಿಲ್ಲ. ಇದೀಗ ಬೌಲರ್ ವಿರುದ್ಧ ಅವಾಚ್ಯ ಶಬ್ದ ಬಳಸಿರುವ ಬಗ್ಗೆ ದೂರು ದಾಖಲಾದರೆ ದಂಡ ಅಥವಾ ಒಂದು ಪಂದ್ಯಕ್ಕೆ ನಿಷೇಧ ಹೇರಬಹುದು.

  ಈ ಬಾರಿ ವೀಕ್ಷಕರ ಅನುಪಸ್ಥಿತಿಯಲ್ಲಿ ಟೂರ್ನಿ ನಡೆಯುತ್ತಿದ್ದು, ಹೀಗಾಗಿ ಸ್ಟೇಡಿಯಂನಲ್ಲಿ ಯಾವುದೇ ಗದ್ದಲಗಳಿಲ್ಲ. ಇದರಿಂದ ಆಟಗಾರರು ಆಡುವ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತದೆ. ಇತ್ತೀಚೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಸಹ ಆಟಗಾರನಿಗೆ ಕನ್ನಡದಲ್ಲಿ ಆಡಿದ ಮಾತು ಮೈಕ್‌ನಲ್ಲಿ ಸ್ಪಷ್ಟವಾಗಿ ಕೇಳಿಸಿತ್ತು. ಇದೀಗ ಫಿಂಚ್ ಸರದಿ. ಇನ್ನು ಕೆಕೆಆರ್ ಈ ಮಾತನ್ನು ಹತಾಶೆಯ ನುಡಿ ಎಂದು ಪರಿಗಣಿಸಿದ್ರೆ ಆರ್​ಸಿಬಿ ಆರಂಭಿಕ ದಂಡದಿಂದ ಪಾರಾಗಲಿದ್ದಾರೆ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ:IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?
  Published by:zahir
  First published: