HOME » NEWS » Ipl » A LOOK AT TOP FIVE CONTROVERSIES IN IPL HISTORY STG ZP

ಕೂಲ್​ ಧೋನಿ ಟೆಂಪರ್​ ಲಾಸ್​ನಿಂದ ವಾಂಖೆಡೆಗೆ ಶಾರುಖ್​ ಬ್ಯಾನ್​ವರೆಗೆ ಐಪಿಎಲ್​ ವಿವಾದಗಳ ಝಲಕ್​ ಇಲ್ಲಿದೆ..!

ಈ ಮಾತಿನಿಂದ ಬೇಸರಗೊಂಡು ಮಿ. ಗವಾಸ್ಕರ್ ಅವರೇ ನಿಮ್ಮ ಮಾತು ಅಸಹ್ಯಕರವಾಗಿದೆ. ನಿಮ್ಮ ಮಾತು ನನ್ನ ಮನಸ್ಸಿಗೆ ಬೇಸರ ತಂದಿದೆ. ಕ್ರಿಕೆಟ್​ಗೆ ನನ್ನ ಹೆಸರು ಎಳೆದು ತರುವುದು ಎಂದು ನಿಲ್ಲುತ್ತದೆ ಎಂದು ಅನುಷ್ಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

news18-kannada
Updated:April 5, 2021, 10:16 PM IST
ಕೂಲ್​ ಧೋನಿ ಟೆಂಪರ್​ ಲಾಸ್​ನಿಂದ ವಾಂಖೆಡೆಗೆ ಶಾರುಖ್​ ಬ್ಯಾನ್​ವರೆಗೆ ಐಪಿಎಲ್​ ವಿವಾದಗಳ ಝಲಕ್​ ಇಲ್ಲಿದೆ..!
ipl
  • Share this:
2021 ಐಪಿಎಲ್​ ಓಪನಿಂಗ್​​ಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಐಪಿಎಲ್​ ಬಗ್ಗೆ ಹೆಚ್ಚೆಚ್ಚು ವಿಷಯಗಳನ್ನು ಗೂಗಲ್ ಮಾಡಲಾಗುತ್ತಿದೆ. ಐಪಿಎಲ್​ ಪ್ರಸಿದ್ಧಿಯ ಜೊತೆಗೆ ಕೆಲವೊಂದು ವಿವಾದಗಳು ಕೂಡ ಓದುಗರನ್ನು ಸೆಳೆಯುತ್ತಿದೆ. 2008 ರಿಂದ ಪ್ರಾರಂಭವಾದ ಐಪಿಎಲ್​​ ಪಂದ್ಯಾವಳಿಯ ಕೆಲವೊಂದು ದೊಡ್ಡ ವಿವಾದಗಳ ಝಲಕ್ ಇಲ್ಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದೇಶಿಯ ಕ್ರಿಕೆಟ್​ ಅದ್ಧೂರಿ ಉತ್ಸವವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಐಪಿಎಲ್​ ಕ್ರಿಕೆಟ್​ ಆಟಗಾರರ ಜೊತೆಗೆ ಬಾಲಿವುಡ್​​ ಸೆಲೆಬ್ರಿಟಿಗಳ ಬಾಂಧವ್ಯದಿಂದ ಹಿಡಿದು ಅವರ ಫ್ರ್ಯಾಂಚೈಸಿಗಳವರೆಗೆ ಹಲವಾರು ಪ್ರತಿಭಾನ್ವಿತರು ಮನೆ ಮಾತಾಗಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್ ಜಗತ್ತಿನಲ್ಲಿ ಆಟಗಾರರು ತಮ್ಮ ಮೌಲ್ಯವನ್ನು ವೃದ್ಧಿಸಿಕೊಳ್ಳಲು ಐಪಿಎಲ್​ ಮಹತ್ವದ ಪಾತ್ರ ವಹಿಸುತ್ತಿದೆ. ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಬಾಂಧವ್ಯ ಮದುವೆಗೆ ಮಾತ್ರ ಸೀಮಿತವಾಗಿರದೇ, 2008 ರ ಐಪಿಎಲ್ ಪಂದ್ಯಾವಳಿ ಪ್ರಾರಂಭವಾದ ದಿನದಿಂದಲೂ ಹಲವಾರು ವಿವಾದಗಳಿಗೆ ಸಾಕ್ಷಿಯಾಗುವ ಮೂಲಕ ಮಾಧ್ಯಮಗಳಲ್ಲಿ ಹೆಡ್​ಲೈನ್ಸ್ ಅನ್ನೂ ಕ್ರಿಯೆಟ್ ಮಾಡಿದೆ.

ಐಪಿಎಲ್ ನ ಉದ್ಘಾಟನಾ ಸಮಯದಲ್ಲಿ ಕ್ಯಾಶ್​ ರಿಚ್​ ಲೀಗ್​ ನಲ್ಲೇ ಮೊದಲ ವಿವಾದ ಭುಗಿಲೆದ್ದಿದ್ದು ಇಂದಿಗೂ ಕ್ರಿಕೆಟ್​ ಪ್ರೇಮಿಗಳ ನೆನಪಿನಲ್ಲಿದೆ. ಮುಂಬೈ ಮತ್ತು ಪಂಜಾಬ್ ನಡುವಿನ ಪಂದ್ಯದ ವೇಳೆ ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಎಸ್.ಶ್ರೀಶಾಂತ್ ಅವರ ಕೆನ್ನೆಗೆ ಹೊಡೆದರು ಎನ್ನುವುದರಿಂದ ಮೊದಲ ವಿವಾದಕ್ಕೆ ಐಪಿಎಲ್ ತೆರೆದುಕೊಂಡಿತು.

ಈ ವಿವಾದದ ಬಳಿಕ ಎರಡು ವರ್ಷಗಳ ನಂತರ ಆರ್ಥಿಕ ಅಕ್ರಮಗಳ ಕಾರಣಗಳಿಗಾಗಿ ಟಿ 20 ಲೀಗ್‌ನ ಮಾಜಿ ಆಯುಕ್ತ ಲಲಿತ್ ಮೋದಿ ಅವರನ್ನು ವಜಾಗೊಳಿಸಲಾಯಿತು. ಐಪಿಎಲ್ ಫ್ರ್ಯಾಂಚೈಸ್ ಕೊಚ್ಚಿ ಟಸ್ಕರ್ಸ್ ಕೇರಳವನ್ನು 2010 ರಲ್ಲಿ ವಜಾಗೊಳಿಸಲಾಯಿತು. ಅಷ್ಟೇ ಅಲ್ಲದೇ 2012 ಮತ್ತು 2013 ರಲ್ಲಿ ಸ್ಪಾಟ್​ ಫಿಕ್ಸಿಂಗ್ ಹಗರಣಗಳಿಂದ ಐಪಿಎಲ್​ ಮತ್ತೆ ಸುದ್ದಿಯಲ್ಲಿತ್ತು. ಕ್ಯಾಶ್​ ರಿಚ್​ ಲೀಗ್ ಗಲಾಟೆ ಮತ್ತು ವಿವಾದಕ್ಕೆ ಸಾಕ್ಷಿಯಾಗಿರುವುದು ಹೊಸದೇನಲ್ಲ. ಆದ್ದರಿಂದ ಈ ಬಗ್ಗೆ ಅಷ್ಟು ಚಿಂತಿಸುವ ಅಗತ್ಯವಿಲ್ಲ. ಆದರೆ ಐಪಿಎಲ್​ನಲ್ಲಿ ಕೆಲವೊಂದು ಸದ್ದಿಲ್ಲದೇ ಸೈಲೆಂಟ್​ ಆಗಿ ಸೈಡಿಗೆ ಸರಿದ ಕೆಲವು ವಿವಾದಗಳನ್ನು ಗಮನಿಸೋಣ.

ಗಂಭೀರ್ ಮತ್ತು ಕೊಹ್ಲಿ ಗಲಾಟೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಐಪಿಎಲ್ 2013ರ ಪಂದ್ಯದ ವೇಳೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಮೈದಾನದಲ್ಲೇ ಮಾತಿನ ಚಕಮಕಿ ಆರಂಭವಾಗಿತ್ತು. ಈ ಇಬ್ಬರು ಆಟಗಾರರು ಪರಸ್ಪರ ಎದುರಾಳಿಗಳಾದಾಗ ಭಾರತೀಯ ಕ್ರಿಕೆಟಿಗ ರಜತ್ ಭಾಟಿಯಾ ಇಬ್ಬರ ಜಗಳವನ್ನು ಬಿಡಿಸಿದರು. ಈ ಘಟನೆ ಐಪಿಎಲ್​ನಲ್ಲಿ ಕಪ್ಪುಚುಕ್ಕೆಯಾಗಿಯೇ ಉಳಿಯಿತು.

ವಾಂಖೆಡೆಯಿಂದ ಶಾರುಖ್ ಖಾನ್​ ಬ್ಯಾನ್ಬಾಲಿವುಡ್ ಲೆಜೆಂಡ್​ ಶಾರುಖ್ ಖಾನ್ ಕೋಲ್ಕತಾ ನೈಟ್ ರೈಡರ್ಸ್ ಫ್ರ್ಯಾಂಚೈಸ್‌ನ ಮೂಲ ಶಕ್ತಿ. ಶಾರೂಖ್ ಎರಡು ಬಾರಿ ಐಪಿಎಲ್​ನಲ್ಲಿ ವಿಜೇತರಾದ ಟೀಂನ ಸಹ ಮಾಲೀಕರು ಹೌದು. ಆದರೆ 2012 ರಲ್ಲಿ ಶಾರೂಖ್​ಗೆ ವಿವಾದವೊಂದು ಸುತ್ತುಹಾಕಿಕೊಂಡಿತ್ತು. ಬುಧವಾರ ರಾತ್ರಿ ಪಂದ್ಯದ ನಂತರ ಅಲ್ಲಿನ ಸಿಬ್ಬಂದಿಗಳೊಂದಿಗೆ ಶಾರುಖ್ ಜಗಳವಾಡಿದ್ದರು ಎನ್ನುವ ಆರೋಪವಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾರುಖ್ ತನ್ನೊಂದಿಗೆ ಬಂದಿದ್ದ ಮಕ್ಕಳನ್ನು ಮೈ ಮುಟ್ಟುತ್ತಾ ತಳ್ಳಾಡಿ ಮ್ಯಾನ್​ ಹ್ಯಾಂಡಲಿಂಗ್ ಮಾಡಿದ್ದರು ಎಂದು ಸಮರ್ಥನೆ ನೀಡಿದ್ದರು. ಆ ನಂತರ ವಿಚಾರಣೆಯ ಬಳಿಕ ಶಾರುಖ್​ ವರ್ತನೆಗೆ ಬೇಸತ್ತು ವಾಂಖೆಡೆ ಸ್ಟೇಡಿಯಂ ಪ್ರವೇಶಕ್ಕೆ 5 ವರ್ಷ ಬ್ಯಾನ್​​ ಮಾಡಲಾಗಿತ್ತು.

ಕೂಲ್ ನಾಯಕ ಟೆಂಪರ್ ಕಳೆದುಕೊಂಡ್ರು
ಧೋನಿಯವರ ಸಮಚಿತ್ತ ಕ್ರಿಕೆಟ್​​ ಲೋಕಕ್ಕೆ ಒಂದು ದೊಡ್ಡ ಬೆರಗು. ಕ್ಯಾಪ್ಟನ್​ ಧೋನಿಯವರು ಸಹ ಒಮ್ಮೆ ತಮ್ಮ ಸಹನೆಯನ್ನು ಕಳೆದುಕೊಂಡಿದ್ದ ಘಟನೆ 2019ರ ಐಪಿಎಲ್​ನಲ್ಲಿ ನಡೆದಿತ್ತು. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್​ ಆರ್) ನಡುವಿನ ಹೈ-ವೋಲ್ಟೇಜ್ ಜಗಳದಲ್ಲಿ ಧೋನಿ ತಮ್ಮ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರು. ಅಂಪೈರಿಂಗ್ ನಿರ್ಧಾರದಿಂದಾಗಿ ತಮ್ಮ ಮೇಲೆ ಹಿಡಿತವನ್ನು ಸಂಪೂರ್ಣವಾಗಿ ಕಳೆದುಕೊಡಿದ್ದ ಧೋನಿ, ಆ ನಂತರ ಪಂದ್ಯದ ಅಂಪೈರ್‌ಗಳನ್ನು ಎದುರಿಸಲು ಪಿಚ್‌ಗೆ ನುಗ್ಗಿದರು. ಆ ನಂತರ ಐಪಿಎಲ್ ನ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದರ ಪರಿಣಾಮವನ್ನು ಎದುರಿಸಬೇಕಾಯಿತು. ಸಿಎಸ್​​ಕೆ ಟೀಂ ಕ್ಯಾಪ್ಟನ್​ಗೆ ಅವರ ಪಂದ್ಯದ ಶುಲ್ಕದ ಶೇಕಡಾ 50% ದಂಡ ವಿಧಿಸಲಾಯಿತು.

ಅಶ್ವಿನ್ ಅವರ 'ಮಂಕಾಡ್​' ಸ್ಟೈಲ್
ಆಧುನಿಕ ಯುಗದ ಕ್ರಿಕೆಟ್​ ಲೋಕದಲ್ಲಿ ಅತ್ಯಂತ ಯಶಸ್ವಿ ಸ್ಪಿನ್ನರ್​ಗಳಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್​ ಐಪಿಎಲ್ ಇತಿಹಾಸದಲ್ಲೇ ಎಲ್ಲರ ಚಿತ್ತದಲ್ಲೂ ನೆಲೆಯಾಗುವಂತಹ ಘಟನೆಗೆ ಸಾಕ್ಷಿಯಾಗಿದ್ದರು. ಮಾಜಿ ಪಂಜಾಬ್ ಕಿಂಗ್ಸ್ ನಾಯಕ 'ಮಂಕಾಡ್' ಶೈಲಿಯಲ್ಲಿ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್​ ಅವರನ್ನು ಔಟ್​ ಮಾಡಿದ ಘಟನೆ ಕ್ರಿಕೆಟ್ ಲೋಕದಲ್ಲಿ ಇಂದಿಗೂ ಅವರ ಏಕಾಗ್ರತೆ ಮತ್ತು ಚಾಕಚಕ್ಯತೆಗೆ ಸಾಕ್ಷಿಯಾಗಿದೆ. ಅಶ್ವಿನ್ ಇಂಗ್ಲೆಂಡ್‌ನ ಸ್ಟಾರ್‌ಮ್ಯಾನ್ ಜೋಸ್ ಬಟ್ಲರ್ ಅವರನ್ನು ರನ್​ ಔಟ್​ ಮಾಡುವುದರಲ್ಲಿ ಯಶಸ್ವಿ ಆದರು. ಆದರೆ ರಾಜಸ್ಥಾನ್ ರಾಯಲ್ಸ್​​ನ ಬ್ಯಾಟ್ಸ್​ಮನ್​ನನ್ನು ಹೊರಹಾಕಿದ ನಂತರ ವಿವಾದ ಭುಗಿಲೆದ್ದಿತು.

'ಮಿಸ್ಟರ್ ಗವಾಸ್ಕರ್ ನಿಮ್ಮ ಮಾತು ಅಸಹ್ಯಕರವಾಗಿದೆ' ಎಂದ ಅನುಷ್ಕಾ ಶರ್ಮಾ
ಐಪಿಎಲ್ 2020 ರಲ್ಲಿ ವಿರಾಟ್ ಕೊಹ್ಲಿ ಅವರ ಸೋಲಿನ ಬಗ್ಗೆ ಸುನಿಲ್ ಗವಾಸ್ಕರ್ ಅವರ ಹೇಳಿಕೆಗಳು ಭಾರಿ ವಿವಾದಕ್ಕೆ ನಾಂದಿ ಹಾಡಿದವು. ಆರ್‌ಸಿಬಿ ನಾಯಕರ ಮಡದಿ ಹಾಗೂ ನಟಿ ಅನುಷ್ಕಾ ಶರ್ಮಾ ಈ ವಿವಾದದ ಕೇಂದ್ರ ಬಿಂದುವಾಗಿದ್ದರು.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಂಟಿಂಗ್​ನಲ್ಲಿ ಸೋಲನ್ನು ಅನುಭವಿಸಿದ್ದರು. ಕಿಂಗ್ಸ್​ ಇಲವೆನ್ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್‌ಗೆ ಔಟ್ ಆದರು. ಈ ಕಾರಣದಿಂದ ಆರ್​ ಸಿ ಬಿ ತಂಡ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ 97 ರನ್​ಗಳ ಹೀನಾಯ ಸೋಲನ್ನು ಅನುಭವಿಸಿತ್ತು. ಈ ಸಂದರ್ಭದಲ್ಲಿ ವೀಕ್ಷಕ ವಿವರಣೆ ನೀಡುವ ವೇಳೆ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ದ ಗವಾಸ್ಕರ್ ಅವರು 'ಟೀಂ ಇಂಡಿಯಾ ನಾಯಕ ನೆಟ್​ನಲ್ಲಿ ಇನ್ನೂ ಹೆಚ್ಚು ಅಭ್ಯಾಸ ಮಾಡಬೇಕು. ಲಾಕ್​ಡೌನ್ ಸಮಯದಲ್ಲಿ ಅನುಷ್ಕಾ ಶರ್ಮಾ ಬೌಲಿಂಗ್ ಎದುರು ಮಾತ್ರ ಆಡಿದ್ದಾರೆ. ಇದು ಯಾವ ಪ್ರಯೋಜನಕ್ಕೂ ಬಾರದು' ಎಂದಿದ್ದರು. ನಂತರ ಸೋಶಿಯಲ್ ಮೀಡಿಯಾದಲ್ಲಿ ಈ ಹೇಳಿಕೆ ಅಸಭ್ಯ ಅರ್ಥ ಪಡೆದುಕೊಂಡಿತು.

ಇನ್ನು ಅನುಷ್ಕಾ ಶರ್ಮಾ ಈ ಮಾತಿನಿಂದ ಬೇಸರಗೊಂಡು 'ಮಿ. ಗವಾಸ್ಕರ್ ಅವರೇ ನಿಮ್ಮ ಮಾತು ಅಸಹ್ಯಕರವಾಗಿದೆ. ನಿಮ್ಮ ಮಾತು ನನ್ನ ಮನಸ್ಸಿಗೆ ಬೇಸರ ತಂದಿದೆ. ಕ್ರಿಕೆಟ್​ಗೆ ನನ್ನ ಹೆಸರು ಎಳೆದು ತರುವುದು ಎಂದು ನಿಲ್ಲುತ್ತದೆ' ಎಂದು ಅನುಷ್ಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಆ ನಂತರ ಗವಾಸ್ಕರ್ ಅವರು ಅನುಷ್ಕಾ ಮತ್ತು ವಿರಾಟ್​ ಕೊಹ್ಲಿಯವರು ಕ್ರಿಕೆಟ್ ಆಡಿದ್ದ ವೀಡಿಯೋ ವೈರಲ್ ಆಗಿದ್ದರ ಬಗ್ಗೆ ಮಾತನಾಡಿದ್ದಾಗಿ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.
First published: April 5, 2021, 10:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories