ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ಸಹೋದರಿ ವತ್ಸಲಾ ಕೃಷ್ಣಮೂರ್ತಿ ಅವರು ಕೊರೋನಾ ಸೋಂಕಿನಿಂದ ಮೃತಪಪಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕೊರೋನಾದಿಂದ ತಾಯಿಯನ್ನು ಕಳೆದುಕೊಂಡಿದ್ದ ವೇದಾ ಕೃಷ್ಣಮೂರ್ತಿ, ಇದೀಗ ಸಹೋದರಿಯನ್ನೂ ಕಳೆದುಕೊಂಡಿದ್ದಾರೆ.
ವತ್ಸಲಾ ಅವರನ್ನು ಈ ಹಿಂದೆ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿಸಿತ್ತು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ತಿಳಿದುಬಂದಿದೆ. ವೇದಾ ಕೃಷ್ಣಮೂರ್ತಿ ಅವರ ಕುಟುಂಬಸ್ಥರಲ್ಲಿ ಇನ್ನೂ ಕೆಲವರು ಕೂಡ ಸೋಂಕಿಗೆ ತುತ್ತಾಗಿದ್ದು, ಇದೀಗ ಮನೆಯವರಲ್ಲಿ ಆತಂಕ ಎದುರಾಗಿದೆ. ಸದ್ಯ ವತ್ಸಲಾ ಅವರ ಅಂತ್ಯಕ್ರಿಯೆಯನ್ನು ಕಡೂರಿನ ಜಮೀನಿನಲ್ಲಿ ನೆರವೇರಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಭಾರತದಲ್ಲಿ ಪ್ರತಿದಿನ 3 ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಕ್ಯೂ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ನಿನ್ನೆಯಷ್ಟೇ ಕರ್ನಾಟಕದಲ್ಲೇ 50 ಸಾವಿರಕ್ಕೂ ಅಧಿಕ ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿತ್ತು. ಇದೀಗ ದೇಶಾದ್ಯಂತ ಕೊರೋನಾಂತಕ ಮನೆಮಾಡಿದ್ದು, ಮತ್ತೊಮ್ಮೆ ಭಾರತ ಸಂಪೂರ್ಣ ಲಾಕ್ಡೌನ್ ಆಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ