ನವದೆಹಲಿ(ಜೂ.19): ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದ ಮೇಲೆ ಚೀನಾ ನಡೆಸಿದ ಹಿಂಸಾತ್ಮಕ ದಾಳಿಯಲ್ಲಿ ದೇಶದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಸುಮಾರು ಐದು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚೀನಾ ಮೋಸದ ದಾಳಿಯಿಂದಾಗಿ ಗಡಿಯಲ್ಲಿ ಭಾರತ ಯೋಧರ ಸಾವುನೋವುಗಳು ವರದಿಯಾಗಿವೆ.
ಇನ್ನು, ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಭಾಗವಾಗಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ದೇಶದ ವಿವಿಧ ಭಾಗಗಳಿಂದ ಚೀನಾ ವಸ್ತುಗಳ ಬಳಕೆ ಮಾಡಬೇಡಿ ಎಂದು ಒತ್ತಾಯಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರವೂ ಈ ವಿಚಾರದಲ್ಲಿ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.
ಹೀಗಾಗಿಯೇ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್)ಗೆ ಇನ್ಮುಂದೆ 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಸೂಚನೆ ನೀಡಿದೆ. ಆದ್ದರಿಂದ ಟೆಲಿಕಾಮ್ ಇಲಾಖೆ ಚೀನಾ ವಸ್ತುಗಳ ಬಹಿಷ್ಕಾರ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.
ಹೀಗಿರುವಾಗಲೇ ನೆಟ್ವರ್ಕ್-18 ಸುದ್ದಿಸಂಸ್ಥೆಯಿಂದ ಈಗ ಚೀನಾ ಮೋಸದಿಂದ ಭಾರತದ ಯೋಧರ ಮೇಲೆ ದಾಳಿ ಮಾಡಿದ ಬಗ್ಗೆ ಪೋಲ್ ಕ್ರಿಯೇಟ್ ಮಾಡಿದ್ದೇವೆ. ಚೀನಾದ ಹಿಂಸಾತ್ಮಕ ಆಕ್ರಮಣಕಾರಿ ದಾಳಿ ಬಗ್ಗೆ ಈ ಪೋಲ್ ಮೂಲಕ ಜನಾಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ನ್ಯೂಸ್-18 ಪಬ್ಲಿಕ್ ಸೆಂಟಿಮೀಟರ್ ಎಂಬ ಹ್ಯಾಷ್ ಟ್ಯಾಗ್ ಜತೆಗೆ ಈ ಪೋಲ್ ಕ್ರಿಯೇಟ್ ಮಾಡಲಾಗಿದೆ. ಇದರಲ್ಲಿ ನೀವು ನ್ಯೂಸ್-18 ಕೇಳಲಾದ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ