‘ಗಾಲ್ವಾನ್​​ ಕಣಿವೆಯಲ್ಲಿ ಭಾರತ ಯೋಧರ ಮೇಲೆ ದಾಳಿ ಮಾಡುವಂತೆ ಚೀನಾ ಆದೇಶಿಸಿತ್ತು‘ - ಅಮೆರಿಕ ಗುಪ್ತಚರ ಇಲಾಖೆ

ಇನ್ನು, ಅಮೆರಿಕ ಗುಪ್ತಚರ ಇಲಾಖೆ ಪ್ರಕಾರ ಗಾಲ್ವಾನ್​​​ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ದಾಳಿಯಲ್ಲಿ ಭಾರತದ 20 ಮಂದಿ, ಚೀನಾದ 35 ಮಂದಿ ಸೈನಿಕರು ಸಾವನ್ನಪ್ಪಿದ್ಧಾರೆ ಎಂದು ಹೇಳಿದೆ.

ಗಾಲ್ವಾನ್​​ ಗಡಿ ಪ್ರದೇಶ

ಗಾಲ್ವಾನ್​​ ಗಡಿ ಪ್ರದೇಶ

 • Share this:
  ನವದೆಹಲಿ(ಜೂ.23): ಪೂರ್ವ ಲಡಾಖ್​​​ನ ಗಾಲ್ವಾನ್ ಕಣಿವೆಯಲ್ಲಿನ ಭಾರತೀಯ ಸೈನಿಕರ ಮೇಲೆ ಚೀನಾ ನಡೆಸಿದ ದಾಳಿ ಪೂರ್ವಭಾವಿ ದಾಳಿ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ. ಉದ್ದೇಶಪೂರ್ವಕವಾಗಿಯೇ ಭಾರತದ ಯೋಧರ ಮೇಲೆ ದಾಳಿ ನಡೆಸುವಂತೆ ತನ್ನ ದೇಶದ ಸೈನಿಕರಿಗೆ ಚೀನಾ ಅನುಮತಿ ನೀಡಿದ ಪರಿಣಾಮ ಈ ಹಿಂಸಾಚಾರ ಸಂಭವಿಸಿದೆ ಎಂದು ಇಲಾಖೆ ವರದಿ ತಿಳಿಸಿದೆ.

  ಚೀನಾದ ವೆಸ್ಟೆರ್ನ್​​ ಥಿಯೇಟರ್​​ ಕಮಾಂಡ್​​ ಮುಖ್ಯಸ್ಥ ಜನರಲ್​​​ ಜಾವೋ ಜೋಂಗ್ಕಿ ಎಂಬಾತ ಇನ್ನೂ ಪೀಪಲ್ಸ್​ ಲಿಬರೇಷನ್​​ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಈತ ಹಲವು ವರ್ಷಗಳಿಂದ ಚೀನಾ-ಭಾರತದ ನಡುವಿನ ಗಡಿ ವಿವಾದವನ್ನು ನೋಡಿಕೊಂಡು ಬಂದಿದ್ದ. ಗಡಿ ವಿಚಾರದಲ್ಲಿ ಭಾರತಕ್ಕೆ ಪಾಠ ಕಲಿಸಲೇಬೇಕು ಎಂದು ಹೇಳುತ್ತಿದ್ದ. ಹೀಗಾಗಿ ಜಿಯೋ ಆದೇಶದ ಮೇರೆಗೆ ಚೀನಾ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತ ಯೋಧರು ಹುತಾತ್ಮರಾಗಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

  ಇನ್ನು, ಅಮೆರಿಕ ಗುಪ್ತಚರ ಇಲಾಖೆ ಪ್ರಕಾರ ಗಾಲ್ವಾನ್​​​ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ದಾಳಿಯಲ್ಲಿ ಭಾರತದ 20 ಮಂದಿ, ಚೀನಾದ 35 ಮಂದಿ ಸೈನಿಕರು ಸಾವನ್ನಪ್ಪಿದ್ಧಾರೆ ಎಂದು ಹೇಳಿದೆ.

  ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಲಡಾಖ್​ನ ಎಲ್​ಎಸಿ ಗಡಿಭಾಗದಲ್ಲಿ ಸಂಘರ್ಷ ನಡೆದ ಬೆನ್ನಲ್ಲೇ ಭಾರತೀಯ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭಡೋರಿಯಾ ಪ್ರತಿಕ್ರಿಯಿಸಿದ್ದು, ಗಡಿಭಾಗದಲ್ಲಿ ತಮ್ಮ ಪಡೆಗಳನ್ನ ನಿಯೋಜಿಸಲಾಗಿದ್ದು, ಯಾವುದೇ ಪರಿಸ್ಥಿತಿಗೂ ಸನ್ನದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ. ಇಲ್ಲಿ ಸೇನೆಯ ತೇರ್ಗಡೆ ಸಮಾರಂಭ (Passing out Ceremony)ದಲ್ಲಿ ಮಾತನಾಡುತ್ತಿದ್ದ ವಾಯುಸೇನೆ ಮುಖ್ಯಸ್ಥರು, “ನಾವು ಯಾವುದೇ ಪರಿಸ್ಥಿತಿಗೂ ಸಿದ್ಧವಾಗಿದ್ದು, ವಾಯುಪಡೆಗಳನ್ನ ಅಣಿಗೊಳಿಸಿದ್ದೇವೆ. ನಾವು ಎಂಥ ಕ್ರಮ ಕೈಗೊಳ್ಳಲು ಬದ್ಧವಾಗಿದ್ದು, ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲವೆಂದು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ” ಎಂದು ಪಣತೊಟ್ಟಿದ್ಧಾರೆ.

  ಇದನ್ನೂ ಓದಿ: ಭಾರತ-ಚೀನಾ ಗಡಿಬಿಕ್ಕಟ್ಟು: ಎಂಥ ಪರಿಸ್ಥಿಗೂ ನಾವು ಸಿದ್ಧ: ಭಾರತೀಯ ವಾಯುಪಡೆ ಮುಖ್ಯಸ್ಥರ ಹೇಳಿಕೆ

  ಕಳೆದ ವಾರ ಚೀನೀ ಸೇನೆ ಅಮಾನುಷ ಹಲ್ಲೆ ನಡೆಸಿ 20 ಸೈನಿಕರನ್ನು ಬಲಿತೆಗೆದುಕೊಂಡ ಬೆನ್ನಲ್ಲೇ ಬುಧರವಾ ಮತ್ತು ಗುರುವಾರದಂದು ವಾಯುಸೇನೆ ಮುಖ್ಯಸ್ಥ ಭಡೋರಿಯಾ ಅವರು ಲಡಾಖ್ ಮತ್ತು ಕಾಶ್ಮೀರದಲ್ಲಿರುವ ಸೇನಾ ನೆಲೆಗಳಿಗೆ ಭೇಟಿ ನೀಡಿ ಕಾರ್ಯಾಚರಣೆಯ ಸಿದ್ಧತೆಗಳನ್ನ ಪರಿಶೀಲಿಸಿದರು. ಚೀನಾಗೆ ಎದುರಾಗಿರುವ ಫಾರ್ವರ್ಡ್ ಬೇಸ್​ಗಳಿಗೆ ಭಾರತೀಯ ವಾಯುಸೇನೆಯ ಸುಖೋಯ್-30ಎಂಕೆಐ, ಮಿಗ್-29 ಮತ್ತು ಜಾಗ್ವರ್ ಮೊದಲಾದ ಫ್ರಂಟ್​ಲೈನ್ ಫೈಟರ್ ವಿಮಾನಗಳು ಮತ್ತು ಹೆಲಿಕಾಪ್ಟರ್​ಗಳನ್ನ ನಿಯೋಜಿಸಲಾಗಿದೆ. ಅದೇ ವೇಳೆ, ಹೊಸದಾಗಿ ಖರೀದಿಸಲಾಗಿರುವ ಅಪಾಚೆ ಮತ್ತು ಚಿನೂಕ್ ಯುದ್ಧ ಹೆಲಿಕಾಪ್ಟರ್​ಗಳೂ ಕೂಡ ಲಡಾಖ್ ಭಾಗದಲ್ಲಿ ಹಾರುತ್ತಿದ್ದುದು ಕಂಡುಬಂತು.

  ಅಮೆರಿಕದ ಬೋಯಿಂಗ್ ಸಂಸ್ಥೆ ನಿರ್ಮಿತ ಅಪಾಚೆ ಹೆಲಿಕಾಪ್ಟರ್​ನಿಂದ ಕ್ಷಿಪಣಿ ಮತ್ತು ರಾಕೆಟ್ ದಾಳಿ ನಡೆಸಬಹುದಾಗಿದೆ. ಎದುರಾಳಿ ಪಡೆಗಳ ಟ್ಯಾಂಕ್​ಗಳನ್ನ ಹೊಡೆದುರುಳಿಸಲು ಇದು ಸಮರ್ಥವಾಗಿದೆ. ಭಾರತ ಸೇರಿದಂತೆ 15-20 ದೇಶಗಳಲ್ಲಿ ಈ ಹೆಲಿಕಾಪ್ಟರ್ ಇದೆ. ಇನ್ನು, ಅಮೆರಿಕದ ವೆರ್ಟೋಲ್ ಸಂಸ್ಥೆ ಅಭಿವೃದ್ಧಿಪಡಿಸಿದ ಚಿನೂಕ್ ಹೆಲಿಕಾಪ್ಟರ್​ಗಳು ಅತಿ ಭಾರದ ವಸ್ತುಗಳನ್ನ ಹೊತ್ತೊಯ್ಯಬಲ್ಲಷ್ಟು ಸಮರ್ಥವಾಗಿವೆ. ಸೈನಿಕರನ್ನು ಮತ್ತು ಆರ್ಟಿಲರಿ ಶಸ್ತ್ರಗಳನ್ನ ದುರ್ಗಮ ಸ್ಥಳಗಳಿಗೆ ಸಾಗಿಸಲು ಈ ಚಿನೂಕ್ ಕಾಪ್ಟರ್​ಗಳು ನೆರವಾಗುತ್ತವೆ.

  ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ದೊಡ್ಡ ಘರ್ಷಣೆಯೇ ನಡೆದಿತ್ತು. ಮದ್ದು ಗುಂಡುಗಳಿಲ್ಲದೇ ಸೈನಿಕರು ಕೈ ಕೈ ಮಿಲಾಯಿಸಲಾಯಿಸಿದ್ದರು. ಕಬ್ಬಿಣದ ರಾಡ್, ಮೊಳೆಗಳಿರುವ ದೊಣ್ಣೆಗಳಿಂದ ಚೀನೀಯರು ಅಮಾನುಷವಾಗಿ ದಾಳಿ ಮಾಡಿದ್ದರು. ಈ ಘಟನೆಯಲ್ಲಿ 20 ಭಾರತೀಯರು ಹುತಾತ್ಮರಾದರು. ಚೀನಾ ಕಡೆ ಎಷ್ಟು ಜನ ಸತ್ತರೆಂದು ಸ್ಪಷ್ಟವಾಗಿಲ್ಲ.

  ಈ ಘಟನೆ ನಂತರ ಲೆಹ್​ನಿಂದ ಹಶಿಮಾರಾದವರೆಗೆ ಚೀನಾದ ಗಡಿ ಭಾಗದುದ್ದಕ್ಕೂ ಇರುವ ಭಾರತೀಯ ವಾಯುನೆಲೆಗಳನ್ನ ಜಾಗೃತ ಸ್ಥಿತಿಯಲ್ಲಿಡಲಾಗಿದೆ. ಅದೇ ಗಡಿಯುದ್ಧಕ್ಕೂ ಇರುವ ಚೀನಾ ವಾಯುನೆಲೆಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ.
  First published: