Ban on Chinese Apps: ಭಾರತ ಬೆನ್ನಲ್ಲೀಗ ಚೀನಾ ಆ್ಯಪ್ಸ್​ ಬ್ಯಾನ್​ ಮಾಡಲು ಅಮೆರಿಕಾ, ಆಸ್ಟ್ರೇಲಿಯಾ ಚಿಂತನೆ

ಭಾರತದ ಬ್ಯಾನ್‌ ಬೆನ್ನಲ್ಲೇ ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಪ್ರಮುಖ ರಾಜಕೀಯ ನಾಯಕರು ಕೂಡ ಚೀನಾದ ಆ್ಯಪ್​ಗಳನ್ನು ಬ್ಯಾನ್​ ಮಾಡುವಂತೆ ಸ್ಥಳೀಯ ಸರ್ಕಾರಕ್ಕೆ ಒತ್ತಾಯಿಸಿವೆ. ಈಗಾಗಲೇ ಚೀನಾ ಹಾಗೂ ಅಮೆರಿಕದ ನಡುವೆ ಹಲವು ಬಾರಿ ರಾಜಕೀಯ ಮುಸುಕಿನ ಗುದ್ದಾಟ ಮುಂದುವರಿದಿರುವ ಕಾರಣ ಈ ಆ್ಯಪ್​ಗಳ ನಿಷೇಧ ಹೇರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಜು.07): ಭಾರತದ ಬೆನ್ನಲ್ಲೀಗ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಚೀನಿ ಆ್ಯಪ್​​ಗಳ ನಿಷೇಧಕ್ಕೆ ಚಿಂತನೆ ನಡೆಸಿವೆ ಎಂದು ವರದಿಯಾಗಿದೆ. ಚೀನಾ ಮೂಲದ ಟಿಕ್​​ಟಾಕ್ ಸೇರಿದಂತೆ ಎಲ್ಲಾ ಆ್ಯಪ್​​ಗಳನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಉಭಯ ದೇಶಗಳು ಹೇಳಿಕೆ ನೀಡಿವೆ. ಒಂದು ವೇಳೆ ಭಾರತದಂತೆಯೇ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಕೂಡ ತನ್ನ ದೇಶದ ಅಪ್ಲಿಕೇಶನ್​​ಗಳನ್ನು ನಿಷೇಧಿಸಿದರೆ ಮುಂದೇನು? ಎಂಬ ಆತಂಕ ಚೀನಾಗೀಗ ಶುರುವಾಗಿದೆ.

  ಈ ಸಂಬಂಧ ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಅಧಿಕೃತ ಹೇಳಿಕೆ ನೀಡಿರುವ ಅಮರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೀಗೊಂದು ಸುಳಿವು ಕೊಟ್ಟಿದ್ದಾರೆ. ಹಲವು ಕಾರಣಾಂತರಗಳಿಂದ ಚೀನಾದ ಆ್ಯಪ್​​ಗಳನ್ನು ಬ್ಯಾನ್​​ ಮಾಡುವ ಪ್ರಸ್ತಾಪ ನಮ್ಮ ಮುಂದಿದೆ ಎಂದಿದ್ದಾರೆ. ಈ ಎನ್ನುವ ಮೂಲಕ ಚೀನಾಗೆ ಮತ್ತೊಂದು ಸಂಕಷ್ಟ ತಂದೊಡಿದ್ಧಾರೆ.

  ಇತ್ತೀಚೆಗೆ ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ತೊಂದರೆಯಾಗಬಹುದು ಎಂಬ ಕಾರಣಕ್ಕಾಗಿ ಚೀನಾದ 59 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಲಡಾಖ್ ಗಡಿಯಲ್ಲಿ ಚೀನಾ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡ ಕಾರಣ ಲಕ್ಷಾಂತರ ಜನರು ತಮ್ಮ ಮೊಬೈಲ್​ನಲ್ಲಿರುವ ಚೀನಾ ಆ್ಯಪ್​ಗಳನ್ನು ಡಿಲೀಟ್ ಮಾಡಿದ್ದಾರೆ. ಈ 59 ಚೀನೀ ಆ್ಯಪ್​ಗಳು ಭಾರತೀಯ ಮೊಬೈಲ್ ಬಳಕೆದಾರರ ಡೇಟಾವನ್ನು ಅನಧಿಕೃತವಾಗಿ ಭಾರತದ ಹೊರಗಿರುವ ಸರ್ವರ್​ಗಳಿಗೆ ರವಾನಿಸುತ್ತಿವೆ ಎಂಬ ದೂರುಗಳು ಬಂದಿತ್ತು. ಹೀಗಾಗಿ ಈ ಆ್ಯಪ್​ಗಳನ್ನು ಬ್ಯಾನ್ ಮಾಡುತ್ತಿರುವುದಾಗಿ ಸರ್ಕಾರ ತಿಳಿಸಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಟಿಕ್​ಟಾಕ್, ನಾವು ನಮ್ಮ ಬಳಕೆದಾರರ ಯಾವುದೇ ಡೇಟಾವನ್ನು ಚೀನಾ ಸರ್ಕಾರಕ್ಕೆ ನೀಡಿಲ್ಲ ಎಂದು ತಿಳಿಸಿತ್ತು.

  ಇದನ್ನೂ ಓದಿ: Covid-19 test: ಕಳೆದ 24 ಗಂಟೆಯಲ್ಲಿ 2.41 ಲಕ್ಷ ಮಂದಿಗೆ ಕೋವಿಡ್​-19 ಟೆಸ್ಟ್​ - ಐಸಿಎಂಆರ್‌

  ಭಾರತದ ಬ್ಯಾನ್‌ ಬೆನ್ನಲ್ಲೇ ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಪ್ರಮುಖ ರಾಜಕೀಯ ನಾಯಕರು ಕೂಡ ಚೀನಾದ ಆ್ಯಪ್​ಗಳನ್ನು ಬ್ಯಾನ್​ ಮಾಡುವಂತೆ ಸ್ಥಳೀಯ ಸರ್ಕಾರಕ್ಕೆ ಒತ್ತಾಯಿಸಿವೆ. ಈಗಾಗಲೇ ಚೀನಾ ಹಾಗೂ ಅಮೆರಿಕದ ನಡುವೆ ಹಲವು ಬಾರಿ ರಾಜಕೀಯ ಮುಸುಕಿನ ಗುದ್ದಾಟ ಮುಂದುವರಿದಿರುವ ಕಾರಣ ಈ ಆ್ಯಪ್​ಗಳ ನಿಷೇಧ ಹೇರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ.
  Published by:Ganesh Nachikethu
  First published: