HOME » NEWS » India-china » UP BJP CHIE SAYS PM HAS DECIDED DATE OF WAR WITH CHINA PAK

ಚೀನಾ, ಪಾಕ್​ನೊಂದಿಗೆ ಯುದ್ಧಕ್ಕೆ ದಿನಾಂಕ ನಿಗದಿ; ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ

ಉತ್ತರ ಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥ ಸ್ವತಂತ್ರ ದೇವ್​ ಸಿಂಗ್​ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಯುದ್ಧ ಮಾಡುವ ಕುರಿತು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ದಿನಾಂಕ ನಿಗದಿಗೊಳಿಸಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಗಮನಸೆಳೆದಿದ್ದಾರೆ.

news18-kannada
Updated:October 25, 2020, 5:27 PM IST
ಚೀನಾ, ಪಾಕ್​ನೊಂದಿಗೆ ಯುದ್ಧಕ್ಕೆ ದಿನಾಂಕ ನಿಗದಿ; ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ
ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್​ ಸಿಂಗ್​​
  • Share this:
ಲಕ್ನೋ (ಅ.25): ವಿಜಯ ದಶಮಿಯಂದು ಚೀನಾ ಗಡಿ ಸಂಘರ್ಷದ ಕುರಿತು ಮಾತನಾಡಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​, ಚೀನಾ ಆಕ್ರಮಣತೆ ಜಗತ್ತಿಗೆ ಗೊತ್ತಾಗಿದೆ. ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಇಂದು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಚೀನಾ ಸಂಘರ್ಷ ಕುರಿತು ಮಾತನಾಡಿರುವ ಉತ್ತರ ಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥ ಸ್ವತಂತ್ರ ದೇವ್​ ಸಿಂಗ್​ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಯುದ್ಧ ಮಾಡುವ ಕುರಿತು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ದಿನಾಂಕ ನಿಗದಿಗೊಳಿಸಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಗಮನಸೆಳೆದಿದ್ದಾರೆ. ಭಾರತ ಮತ್ತು ಚೀನಾ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಬಿಜೆಪಿ ನಾಯಕರು ಈ ರೀತಿ ಹೇಳಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್​ ತೀರ್ಪಿನ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಬ ಮತ್ತು ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಕುರಿತು ಹೇಳಿಕೆ ಜೊತೆ ಈ ಸಂಘರ್ಷದ ಕುರಿತು ಅವರು ಮಾತನಾಡಿದರು.

ವಿಧಿ 370 ಹಾಗೂ ರಾಮ ಮಂದಿರ ನಿರ್ಮಾಣ ಕುರಿತಂತಎ ಪ್ರಧಾನಿಗಳು ನಿರ್ಧಾರ ತೆಗೆದುಕೊಂಡ ರೀತಿಯಲ್ಲಿಯೇ ಈ ಪಾಕಿಸ್ತಾನ ಮತ್ತು ಚೀನಾ ನಡುವೆ ಯುದ್ಧದ ಕುರಿತು ನಿರ್ಧಾರಿಸಿದ್ದಾರೆ ಎಂಬ ತಿಳಿಸಿದ್ದಾರೆ . ಈ ಕುರಿತು ದಿನಾಂಕವನ್ನು ನಿರ್ಧಾರಿಸಲಾಗಿದೆ ಎಂಬ ವಿಡಿಯೋ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನು ಓದಿ: ಚೀನಾ ಕುರಿತು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಭಾಷಣ; ಸತ್ಯ ತಿಳಿಸಿ ಎಂದ ರಾಹುಲ್​ ಗಾಂಧಿ

ಬಿಜೆಪಿ ಶಾಸಕ ಸಂಜಯ್​ ಯಾದವ್​ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಸಿಂಗ್​ ಈ ರೀತಿ ಹೇಳಿಕೆ ನೀಡಿರುವ ವಿಡಿಯೋ ಕಂಡು ಬಂದಿದೆ, ಇದೇ ವೇಳೆ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಸಂಸದ ರವೀಂದ್ರ ಕುಶ್ವಾಹ , ಪಕ್ಷದ ಅಧ್ಯಕ್ಷರು ಕಾರ್ಯಕರ್ತರ ಸ್ಥೈರ್ಯವನ್ನು ಹೆಚ್ಚಿಸಲು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಸಮಾಜಾಯಿಷಿ ನೀಡಿದ್ದಾರೆ.
Published by: Seema R
First published: October 25, 2020, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories