ನವದೆಹಲಿ(ಅ. 28): ಲಡಾಖ್ ಪ್ರದೇಶವನ್ನು ಚೀನಾದ ಭಾಗವಾಗಿ ತೋರಿಸಿದ್ದ ಟ್ವಿಟ್ಟರ್ ಇಂಡಿಯಾ ಸಂಸ್ಥೆ ಬಳಿ ಕೇಂದ್ರ ಸರ್ಕಾರದ ಸಂಸದರ ಸಮಿತಿ ವಿವರಣೆ ಕೇಳಿದೆ. ಆದರೆ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನೇತೃತ್ವದ ಸಂಸದೀಯ ಜಂಟಿ ಸಮಿತಿಗೆ ಸೋಷಿಯಲ್ ಮೀಡಿಯಾ ಸಂಸ್ಥೆಯ ವಿವರಣೆ ಸಮಾಧಾನ ತರಲಿಲ್ಲ. ಡಾಟಾ ರಕ್ಷಣೆಯ ಸಂಸದೀಯ ಸಮಿತಿ ಇಂದು ಟ್ವಿಟ್ಟರ್ ಇಂಡಿಯಾದ ಪ್ರತಿನಿಧಿಗಳನ್ನ ಕರೆಸಿ ಲಡಾಖ್ ವಿವಾದದ ಬಗ್ಗೆ ವಿಚಾರಣೆ ನಡೆಸಿತು. ಈ ವೇಳೆ, ಭಾರತದ ಸಂವೇದನೆಗಳನ್ನ ತಮ್ಮ ಸಂಸ್ಥೆ ಗೌರವಿಸುತ್ತದೆ ಎಂದು ಟ್ವಿಟ್ಟರ್ ನೀಡಿದ ಸಮಾಧಾನವು ಸಮರ್ಪಕವಾಗಿಲ್ಲ ಎಂದು ಸಂಸದೀಯ ಸಮಿತಿ ಹೇಳಿದೆ.
ಚೀನಾದ ಭಾಗವಾಗಿ ಲಡಾಕ್ ಅನ್ನು ತೋರಿಸಿರುವುದು ಏಳು ವರ್ಷಗಳವರೆಗೆ ಜೈಲುಶಿಕ್ಷೆಯಾಗುವಂಥ ಕ್ರಿಮಿನಲ್ ಅಪರಾಧವಾಗಿದೆ. ಭಾರತದ ಸಂವೇದನೆಗಳನ್ನ ಗೌರವಿಸುವುದಾಗಿ ಟ್ವಿಟ್ಟರ್ ಹೇಳುತ್ತಿದೆ. ಆದರೆ, ಇದು ಸಮರ್ಪಕವಲ್ಲ. ಇದು ಸಂವೇದನೆಯ ಪ್ರಶ್ನೆ ಮಾತ್ರ ಅಲ್ಲ. ಇದು ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ವಿರುದ್ಧವಾದುದು ಎಂದು ಮೀನಾಕ್ಷಿ ಲೇಖಿ ತರಾಟೆಗೆ ತೆಗೆದುಕೊಂಡಿದ್ಧಾರೆ.
ಇದನ್ನೂ ಓದಿ: ವಿವಾದಗಳ ಬಳಿಕ ಸ್ಥಾನದಿಂದ ಕೆಳಗಿಳಿದ ಫೇಸ್ಬುಕ್ ಇಂಡಿಯಾ ಅಧಿಕಾರಿ ಅಂಕಿದಾಸ್
ಟ್ವಿಟ್ಟರ್ ಇಂಡಿಯಾದ ಪ್ರತಿನಿಧಿಗಳಾಗಿ ಸಂಸ್ಥೆಯ ಹಿರಿಯ ಮ್ಯಾನೇಜರ್ ಶಗುಫ್ತಾ ಕಮ್ರಾನ್, ಕಾನೂನು ಸಲಹೆಗಾರ್ತಿ ಆಯುಷಿ ಕಪೂರ್, ಪಾಲಿಸಿ ಕಮ್ಯೂನಿಕೇಶನ್ಸ್ ಅಧಿಕಾರಿ ಪಲ್ಲವಿ ವಾಲಾ, ಕಾರ್ಪೊರೇಟ್ ಸೆಕ್ಯೂರಿಟಿ ಮನ್ವಿಂದರ್ ಬಾಲಿ ಮೊದಲಾದವರು ಈ ಸಂಸದೀಯ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಟ್ವಿಟ್ಟರ್ ಸಮಜಾಯಿಷಿ ಏನು?
ಚೀನಾದ ಮ್ಯಾಪ್ನಲ್ಲಿ ಲಡಾಖ್ ಅನ್ನು ಒಳಗೊಂಡಿರುವುದು ತಾಂತ್ರಿಕ ದೋಷ ಎಂದು ಟ್ವಿಟ್ಟರ್ ಸ್ಪಷ್ಟಪಡಿಸಿದೆ. “ಭಾನುವಾರ ಈ ತಾಂತ್ರಿಕ ದೋಷದ ಬಗ್ಗೆ ತಿಳಿಯಿತು. ಭಾರತದ ಸಂವೇದನೆಗಳು ನಮಗೆ ಅರ್ಥವಾಗುತ್ತದೆ. ನಾವದನ್ನ ಗೌರವಿಸುತ್ತೇವೆ. ಈ ಜಿಯೋಟ್ಯಾಗ್ ಸಮಸ್ಯೆಯನ್ನ ಪತ್ತೆಹಚ್ಚಿ ಬಗೆಹರಿಸಲು ನಮ್ಮ ತಂಡಗಳು ಕ್ಷಿಪ್ರವಾಗಿ ಕಾರ್ಯವಹಿಸಿವೆ” ಎಂದು ಟ್ವಿಟ್ಟರ್ ಇಂಡಿಯಾದ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಭ್ರಷ್ಟಾಚಾರ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದಿದೆ: ಸೋನಿಯಾ ಗಾಂಧಿಗೆ ಟಾಂಗ್ ನೀಡಿದ ಪ್ರಧಾನಿ ಮೋದಿ
ಇದೇ ವೇಳೆ, ಸೋಷಿಯಲ್ ಮೀಡಿಯಾದಲ್ಲಿ ಟ್ವಿಟ್ಟರ್ ಸಂಸ್ಥೆಯ ವಿರುದ್ಧ ಟೀಕಾ ಪ್ರಹಾರ ನಡೆಯುತ್ತಿದೆ. ಟ್ವಿಟ್ಟರ್ ಸಂಸ್ಥೆ ಭೂಭಾಗವನ್ನೇ ಮಾರ್ಪಡಿಸಿ ಜಮ್ಮು ಕಾಶ್ಮೀರವನ್ನು ಚೀನಾದ ಭಾಗವಾಗಿ ಘೋಷಿಸುತ್ತದೆ. ಇದು ಭಾರತದ ಕಾನೂನುಗಳ ಉಲ್ಲಂಘನೆ ಅಲ್ಲದೇ ಹೋದರೆ ಮತ್ತಿನ್ನೇನು? ಇದಕ್ಕಿಂತ ತೀರಾ ಕಡಿಮೆ ಮಟ್ಟದ ಅಪರಾಧಗಳಿಗೆ ಭಾರತೀಯ ಪ್ರಜೆಗಳು ಶಿಕ್ಷೆಗೊಳಪಡುಸತ್ತಾರೆ. ಆದರೆ, ಅಮೆರಿಕದ ಈ ಸಂಸ್ಥೆ ಕಾನೂನಿಗಿಂತ ದೊಡ್ಡದೇ ಎಂದು ಕಾಂಚನ್ ಗುಪ್ತಾ ಅವರು ಟ್ವೀಟ್ ಮಾಡಿದ್ದಾರೆ. ಹಾಗೆಯೇ, ಇದು ಟ್ವಿಟ್ಟರ್ನಿಂದ ಆದ ಆಕಸ್ಮಿಕ ತಪ್ಪಲ್ಲ ಎಂದು ಹೇಳುವ ಮೂಲಕ ಟ್ವಿಟ್ಟರ್ ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದೆ ಎಂದು ಹಲವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಜಾತಿ, ನಿರುದ್ಯೋಗ, ಬ್ಲಾಕ್ ಮ್ಯಾಜಿಕ್; ಇಲ್ಲಿದೆ ಮೊದಲ ಹಂತದ ಬಿಹಾರ ಚುನಾವಣೆಯ ನಿರ್ಣಾಯಕ ಅಂಶಗಳ ನಿರೂಪಣೆ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ