ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಉದ್ವಿಘ್ನ: ಭಾರತ-ಚೀನಾ ಗಡಿಯಲ್ಲಿ ರೈಲು ಸಂಚಾರ ರದ್ದು

ಇನ್ನು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂಜಾಗೃತ ಕ್ರಮವಾಗಿ ಈ ನಿಲುವು ತಾಳಿದೆ. ಯಾರಿಗೂ ತೊಂದರೆಯಾಗಬಾರದೆಂದು ಭಾರತ ಮತ್ತು ಚೀನಾದ ಗಡಿಯಲ್ಲಿ ರೈಲು ಸಂಚಾರ ರದ್ದುಗೊಳಿಸಿ ಆದೇಶಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಜೂ.17): ಭಾರತ ಮತ್ತು ಚೀನಾ ನಡುವೆ ಕಾಳಗ ಏರ್ಪಟ್ಟಿದೆ. ಇಲ್ಲಿನ ಪೂರ್ವ ಲಡಾಕ್​​​ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಉಭಯ ರಾಷ್ಟ್ರಗಳ ನಡುವಿನ ಘರ್ಷಣೆಯಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಹಾಗೆಯೇ ಭಾರತ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ 43 ಸೈನಿಕರು ಹತರಾಗಿದ್ದಾರೆ.

  ಇನ್ನು, ಗಾಲ್ವಾನ್​​​ ಕಣಿವೆಯಲ್ಲಿ ನಡುವಿನ ಘರ್ಷಣೆಯಿಂದಾಗಿ ಎರಡು ದೇಶಗಳ ನಡುವೆ ಪ್ರಕ್ಷುಬ್ದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದಲೇ ಭಾರತ ಮತ್ತು ಚೀನಾದ ಗಡಿಯಲ್ಲಿ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಉಭಯ ರಾಷ್ಟ್ರಗಳ ಗಡಿಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿರುವುದರಿಂದಲೇ ರೈಲು ಸಂಚಾರ ರದ್ದು ಮಾಡಲಾಗಿದೆ.

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂಜಾಗೃತ ಕ್ರಮವಾಗಿ ಈ ನಿಲುವು ತಾಳಿದೆ. ಯಾರಿಗೂ ತೊಂದರೆಯಾಗಬಾರದೆಂದು ಭಾರತ ಮತ್ತು ಚೀನಾದ ಗಡಿಯಲ್ಲಿ ರೈಲು ಸಂಚಾರ ರದ್ದುಗೊಳಿಸಿ ಆದೇಶಿಸಲಾಗಿದೆ.

  ಈ ಮಧ್ಯೆ ಭಾರತ-ಚೀನಾ ಗಡಿಭಾಗದಲ್ಲಿ ಆಗುತ್ತಿರುವ ಸಾವು-ನೋವಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕಾ, ಸಾಧ್ಯವಾದಷ್ಟು ಹಿಂಸಾಚಾರ ನಿಲ್ಲಿಸುವಂತೆ ಎರಡು ದೇಶಗಳಿಗೆ ಮನವಿ ಮಾಡಿದೆ. ಶಾಂತಿಯುತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದೆ.

  ಇದನ್ನೂ ಓದಿ: Indo-China Conflict: 40 ವರ್ಷಗಳಲ್ಲೇ ಇದು ಅತಿ ಭಯಾನಕ ಪರಿಸ್ಥಿತಿ ಎಂದು ಬಣ್ಣಿಸಿದ ಅಮೆರಿಕ ಪತ್ರಿಕೆಗಳು
  First published: