ಚೀನಾ ತಂಟೆಕೋರತನ ಹತ್ತಿಕ್ಕಲು ಭಾರತೀಯ ಸೇನೆಗೆ ಪೂರ್ಣ ಸ್ವಾತಂತ್ರ್ಯ: ಮೂಲಗಳ ಸ್ಪಷ್ಟನೆ

3,500 ಕಿಮೀ ಉದ್ದದ ಚೀನಾ ಗಡಿಯಾದ್ಯಂತ ನಿಯೋಜನೆಗೊಂಡಿರುವ ಭಾರತೀಯ ಸೇನಾ ಪಡೆಗಳು ಯಾವುದೇ ಚೀನೀ ಅನುಚಿತ ವರ್ತನೆಯನ್ನು ಎದುರಿಸಲು ಪೂರ್ಣ ಸ್ವಾತಂತ್ರ್ಯ ಪಡೆದಿವೆ ಎಂದು ಮೂಲಗಳು ಹೇಳಿವೆ.

ಭಾರತ ಮತ್ತು ಚೀನಾ ಗಡಿ

ಭಾರತ ಮತ್ತು ಚೀನಾ ಗಡಿ

 • News18
 • Last Updated :
 • Share this:
  ನವದೆಹಲಿ(ಜೂನ್ 21): ಚೀನಾದೊಂದಿಗೆ ಇರುವ 3,500 ಕಿಮೀ ಗಡಿ ಉದ್ದಕ್ಕೂ ನಿಯೋಜನೆಯೊಂಡಿರುವ ಭಾರತೀಯ ಸೇನೆಗೆ ಮುಕ್ತ ಹಸ್ತ ನೀಡಲಾಗಿದೆ. ಚೀನಾದ ಆಕ್ರಮಣಕಾರಿ ವರ್ತನೆಯನ್ನು ಅಲ್ಲಲ್ಲೇ ತಿರುಗಿಸಿ ನೀಡಲು ಅನುವಾಗುವಂತೆ ಏನೇ ಕ್ರಮ ಕೈಗೊಳ್ಳಲು ಸೇನೆಗೆ ಈಗ ಸ್ವಾತಂತ್ರ್ಯ ನೀಡಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಿಲಿಟರಿ ಪಡೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳುತ್ತಿವೆ.

  ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ, ನೌಕಾ ಪಡೆ ಮುಖ್ಯಸ್ಥ ಅಡ್ವಿರಲ್ ಕರಂಬೀರ್ ಸಿಂಗ್ ಮತ್ತು ವಾಯುಪಡೆ ಮುಖ್ಯಸ್ಥ ಮಾರ್ಷಲ್ ಆರ್.ಕೆ.ಎಸ್. ಭದೂರಿಯಾ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಭೂಗಡಿಭಾಗದಲ್ಲಿ, ವಾಯು ಸೀಮೆ, ಸಮುದ್ರ ಮಾರ್ಗಗಳಲ್ಲಿ ಚೀನೀಯರ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಟ್ಟಿರಬೇಕು. ಚೀನೀ ಪಡೆಗಳು ಯಾವುದೇ ಕುಕೃತ್ಯಕ್ಕೆ ಮುಂದಾದರೂ ಕಠಿಣ ಕ್ರಮ ಅನುಸರಿಸಿ ಎಂದು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಮಿಲಟರಿ ಮುಖ್ಯಸ್ಥರಿಗೆ ಸೂಚನೆ ನೀಡಿದರೆನ್ನಲಾಗಿದೆ.

  ಲಡಾಖ್ ಗಡಿಭಾಗದಲ್ಲಿ ಚೀನೀ ಸೈನಿಕರು ಭಾರತದ ಭಾಗವನ್ನು ಅತಿಕ್ರಮಣ ಮಾಡಲು ಯತ್ನಿಸಿದರು. ಭಾರತೀಯ ಸೇನಾ ಪಡೆಯ ಪ್ರತಿರೋಧದಿಂದ ಅವರ ಯತ್ನ ವಿಫಲವಾಗಿದೆ. ಇದೇ ವೇಳೆ, ಚೀನೀ ಸೈನಿಕರ ಅಮಾನುಷ ದಾಳಿಯಲ್ಲಿ 20 ಭಾರತೀಯ ಸೈನಿಕರು ಬಲಿಯಾಗಬೇಕಾಯಿತು. ಇದು ದೇಶದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಚೀನೀ ಸೈನಿಕರೆಲ್ಲರವನ್ನೂ ಹಿಮ್ಮೆಟ್ಟಿಸಲಾಗಿದೆ ಎಂದು ಸೇನಾ ಮೂಲಗಳು ಹೇಳುತ್ತಿವೆ. ಪ್ರಧಾನಿ ಮೋದಿ ಕೂಡ ಭಾರತದ ಗಡಿಭಾಗದಲ್ಲಿ ಯಾವ ಚೀನೀ ಸೈನಿಕರೂ ಇಲ್ಲ. ಭಾರತದ ಯಾವ ಭಾಗವೂ ಅತಿಕ್ರಮಣವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಇದನ್ನೂ ಓದಿ: ಚೀನಾ ಗಡಿತಂಟೆ ಬಗ್ಗೆ ಮೋದಿ ನೀಡಿದ ಹೇಳಿಕೆಯನ್ನ ತಿರುಚಲಾಗುತ್ತಿದೆ: ಪ್ರಧಾನಿ ಕಚೇರಿ ಸ್ಪಷ್ಟನೆ

  ಈ ಬೆಳವಣಿಗೆ ನಂತರ ಚೀನಾ ಗಡಿಯುದ್ಧಕ್ಕೂ ಸೇನಾ ನೆಲೆಗಳನ್ನ ಸಕ್ರಿಯ ಸ್ಥಿತಿಯಲ್ಲಿಡಲಾಗಿದೆ. ಲಡಾಖ್ ಭಾಗದಲ್ಲಿ ಭಾರತೀಯ ವಾಯುಸೇನೆಯ ಪಡೆಗಳನ್ನ ಆಯಕಟ್ಟಿನ ಜಾಗಗಳಲ್ಲಿ ನಿಯೋಜಿಸಲಾಗಿದೆ. ಎಂಥದ್ದೇ ಸಂದರ್ಭಕ್ಕೂ ವಾಯುಪಡೆ ಸನ್ನದ್ಧವಾಗಿದ ಎಂದು ಏರ್ ಮಾರ್ಷಲ್ ಭದೂರಿಯಾ ಸ್ಪಷ್ಟಪಡಿಸಿದ್ದಾರೆ.  ಇನ್ನು, ಉನ್ನತ ಮಿಲಿಟರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಾಜನಾಥ್ ಸಿಂಗ್ ಅವರು ಇದೀಗ ರಷ್ಯಾದ ಮಾಸ್ಕೋದಲ್ಲಿ ಮಿಲಿಟರಿ ಪೆರೇಡ್​ಗೆ ಸಾಕ್ಷಿಯಾಗಲಿದ್ದಾರೆ. ಹಿಂದಿನ ಸೋವಿಯತ್ ರಷ್ಯಾ ನಾಜಿ ಜರ್ಮನಿ ವಿರುದ್ಧ ಎರಡನೇ ಮಹಾಯುದ್ಧದಲ್ಲಿ ಗೆಲುವು ಸಾಧಿಸಿದ 75 ವರ್ಷವಾಗಿದೆ. ಅದೇ ನೆನಪಿಗೆ ಮಾಸ್ಕೋದಲ್ಲಿ ಭರ್ಜರಿ ಮಿಲಿಟರಿ ಪೆರೇಡ್ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ರಾಜನಾಥ್ ಸಿಂಗ್ ಅವರೊಂದಿಗೆ ರಷ್ಯಾ ಪ್ರಧಾನಿ ಚೀನಾ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆಗೆ ಪ್ರಯತ್ನಿಸಬಹುದು. ಭಾರತ ಮತ್ತು ಚೀನಾ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ಶಮನಗೊಳಿಸಲು ತಾನು ಮಧ್ಯಪ್ರವೇಶಿಸಲು ಸಿದ್ಧವಿರುವುದಾಗಿ ರಷ್ಯಾ ಹೇಳುತ್ತಿದೆ.
  First published: