‘ಚೀನಾ, ಆರ್ಥಿಕ, ಕೊರೋನಾ ಎಲ್ಲಾ ಸಮಸ್ಯೆಗಳಿಗೂ ಮೋದಿ ಸರ್ಕಾರದ ತಪ್ಪು ನಡೆಗಳೇ ಕಾರಣ‘ - ಸೋನಿಯಾ ಗಾಂಧಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಗಣನೀಯ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಿದೆ. ಇದು ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು ಸೋನಿಯಾ ಗಾಂಧಿ.

news18india
Updated:June 23, 2020, 2:11 PM IST
‘ಚೀನಾ, ಆರ್ಥಿಕ, ಕೊರೋನಾ ಎಲ್ಲಾ ಸಮಸ್ಯೆಗಳಿಗೂ ಮೋದಿ ಸರ್ಕಾರದ ತಪ್ಪು ನಡೆಗಳೇ ಕಾರಣ‘ - ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
  • Share this:
ನವದೆಹಲಿ(ಜೂ.23): ಭಾರತ ಸದ್ಯ ಗಂಭೀರವಾದ ಗಡಿ ಸಮಸ್ಯೆ ಎದುರಿಸುತ್ತಿದೆ. ಆತಂಕಕಾರಿಯಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮಾರಕ ರೋಗ ಕೊರೋನಾ ನಿಯಂತ್ರಿಸಲು ಸಾಧ್ಯವಾಗದೆ ಕಂಗಾಲಾಗಿದೆ. ಇದೆಲ್ಲದಕ್ಕೂ ನರೇಂದ್ರ ಮೋದಿ ಸರ್ಕಾರ ಅಧಿಕಾರದ ದುರುಪಯೋಗ ಹಾಗೂ ತಪ್ಪು ನೀತಿಗಳು ಕಾರಣ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಆರೋಪಿಸಿದರು.

ಮಂಗಳವಾರ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ,  ಸದ್ಯ‌ ‌ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ನರೇಂದ್ರ ಮೋದಿ ಸರ್ಕಾರದ ಆಡಳಿತ ವೈಖರಿಯೇ ಕಾರಣ ವಾಗ್ದಾಳಿ ನಡೆಸಿದರು. ಚೀನಾದೊಂದಿಗೆ ಗಡಿಯಲ್ಲಿ ಬಿಕ್ಕಟ್ಟು ಆರಂಭವಾಗಿದೆ. ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಆದಷ್ಟು ಬೇಗ ಸಮರ್ಥವಾಗಿ ನಿಭಾಯಿಸುತ್ತದೆ ಮತ್ತು ದೇಶದ ಸಮಗ್ರತೆ ಕಾಪಡುತ್ತದೆ ಎಂದು ಆಶಿಸುತ್ತೇನೆ ಎಂದರು.

ಲಾಕ್​ಡೌನ್​​ ಮತ್ತು ಕೊರೋನಾ ಕಷ್ಟಕ್ಕೆಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ಪ್ಯಾಕೇಜ್ ನಲ್ಲಿ ಏನೇನೂ ಇಲ್ಲ. ಜನರ ಕೈಗೆ ಹಣ ನೀಡಬೇಕಾಗಿತ್ತು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ನೆರವಾಗಬೇಕಿತ್ತು.‌ ಬೇಡಿಕೆ ಹೆಚ್ಚಿಸುವ ಪ್ರಯತ್ನ ಮಾಡಬೇಕಿತ್ತು. ಆದರೆ ಯಾವ ರೀತಿಯಲ್ಲೂ ಉಪಯೋಗಕ್ಕೆ ಬಾರದ ನಾಮಕಾವಸ್ತೆ ಪ್ಯಾಕೇಜ್ ಮಾಡಲಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ‘ಗಾಲ್ವಾನ್​​ ಕಣಿವೆಯಲ್ಲಿ ಭಾರತ ಯೋಧರ ಮೇಲೆ ದಾಳಿ ಮಾಡುವಂತೆ ಚೀನಾ ಆದೇಶಿಸಿತ್ತು‘ - ಅಮೆರಿಕ ಗುಪ್ತಚರ ಇಲಾಖೆ

ಕೇಂದ್ರ ಸರ್ಕಾರ ಅಧಿಕಾರವನ್ನು ಕೇಂದ್ರೀಕರಿಸಿಕೊಂಡಿದೆ.‌ ರಾಜ್ಯ ಸರ್ಕಾರಗಳಿಗೆ ಅಧಿಕಾರ ಮತ್ತು ಹಣ ಎರಡನ್ನೂ ನೀಡುತ್ತಿಲ್ಲ. ಜನರನ್ನು ಕೊರೋನಾ ರೋಗದ ಜೊತೆ ಬಿಟ್ಟು ನಿಮ್ಮನ್ನು ನೀವೇ ಕಾಪಾಡಿ ಕೊಳ್ಳಿ ಎಂದು ಹೇಳುತ್ತಿದೆ. ಇದು ತಪ್ಪು ನಿರ್ವಹಣೆ ಮತ್ತು ವಿನಾಶಕಾರಿ ನಿರ್ಧಾರ.‌ ಇದರಲ್ಲಿ ಮೋದಿಯವರ ಕೇಂದ್ರ ಸರ್ಕಾರದ ವೈಫಲ್ಯಗಳು ಎದ್ದು ಕಾಣುತ್ತಿವೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಗಣನೀಯ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಿದೆ. ಇದು ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
First published: June 23, 2020, 2:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading