ಭಾರತದಲ್ಲಿ ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಚೀನಾದಲ್ಲಿ ಮೋದಿ ಅವರ ವೇಬೋ ಖಾತೆಯ ಪೋಸ್ಟ್​​ಗಳು ಡಿಲೀಟ್

10 ದಿನಗಳ ಹಿಂದೆ ಚೀನಾ ವೀಚ್ಯಾಟ್ ಮತ್ತು ವೇಬೋದಲ್ಲಿ ಭಾರತೀಯ ರಾಯಭಾರಿ ಕಚೇರಿ ಹೊಂದಿದ್ದ ಖಾತೆಗಳಲ್ಲೂ ಕೆಲವು ಪೋಸ್ಟ್ಗಳು ಡಿಲೀಟ್ ಆಗಿದ್ದವು. ಪ್ರಧಾನಿ ಮೋದಿ ಅವರದ್ದು ಸೇರಿ ಭಾರತದ ಮೂರು ಅಧಿಕೃತ ಹೇಳಿಕೆಗಳನ್ನ ವಿಚ್ಯಾಟ್ ಅಕೌಂಟ್ನಿಂದ ಡಿಲೀಟ್ ಮಾಡಲಾಗಿತ್ತು.

ನರೇಂದ್ರ ಮೋದಿ

ನರೇಂದ್ರ ಮೋದಿ

 • News18
 • Last Updated :
 • Share this:
  ನವದೆಹಲಿ(ಜುಲೈ 01): ಭಾರತದಲ್ಲಿ 59 ಚೀನೀ ಆ್ಯಪ್​ಗಳನ್ನ ನಿಷೇಧಿಸುವ ಕ್ರಮ ಜಾರಿಯಾದ ಬೆನ್ನಲ್ಲೇ ಇವತ್ತು ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಹೊಂದಿದ್ದ ಖಾತೆಗಳಲ್ಲಿ ಪೋಸ್ಟ್​ಗಳು ಡಿಲೀಟ್ ಆಗಿವೆ. ಟ್ವಿಟ್ಟರ್ ರೀತಿಯ ಮೈಕ್ರೋಸೋಷಿಯಲ್ ಮೀಡಿಯಾ ತಾಣವಾಗಿರುವ ಚೀನಾದ ವೇಬೋದಲ್ಲಿ ಪ್ರಧಾನಿ ಮೋದಿ ಹೊಂದಿದ್ದ ಖಾತೆಯಲ್ಲಿನ ಎಲ್ಲಾ ಪೋಸ್ಟ್​​ಗಳೂ ಅಳಿಸಿಹೋಗಿವೆ. ಅವರ ಪ್ರೊಫೈಲ್ ಫೋಟೋ, ಕಮೆಂಟ್ ಇತ್ಯಾದಿಗಳನ್ನ ತೆಗೆದುಹಾಕಲಾಗಿದೆ.

  10 ದಿನಗಳ ಹಿಂದೆ ಚೀನಾ ವೀಚ್ಯಾಟ್ ಮತ್ತು ವೇಬೋದಲ್ಲಿ ಭಾರತೀಯ ರಾಯಭಾರಿ ಕಚೇರಿ ಹೊಂದಿದ್ದ ಖಾತೆಗಳಲ್ಲೂ ಕೆಲವು ಪೋಸ್ಟ್​ಗಳು ಡಿಲೀಟ್ ಆಗಿದ್ದವು. ಪ್ರಧಾನಿ ಮೋದಿ ಅವರದ್ದು ಸೇರಿ ಭಾರತದ ಮೂರು ಅಧಿಕೃತ ಹೇಳಿಕೆಗಳನ್ನ ವಿಚ್ಯಾಟ್ ಅಕೌಂಟ್​ನಿಂದ ಡಿಲೀಟ್ ಮಾಡಲಾಗಿತ್ತು.

  Modi's weibo account
  ಪೋಸ್ಟ್ ಡಿಲೀಟ್ ಆದ ಬಳಿಕ ಮೋದಿ ಅವರ ವೇಬೋ ಅಕೌಂಟ್


   

   

   

  ಇದೀಗ ಮೋದಿ ಅವರ ವೇಬೋ ಅಕೌಂಟ್​ ಶೂನ್ಯಾವಸ್ತೆಯಲ್ಲಿದೆ. ಆದರೆ, ಚೀನಾ ಸರ್ಕಾರ ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದೆಯಾ ಎಂಬುದು ದೃಢಪಟ್ಟಿಲ್ಲ. ಚೀನಾದಲ್ಲಿರುವ ಭಾರತದ ರಾಯಭಾರಿ ಕಚೇರಿಯು ವೇಬೋ ಖಾತೆಯಿಂದ ಹೊರಬೀಳುವ ನಿರ್ಧಾರದ ಬಗ್ಗೆ ಯೋಜಿಸಿದೆ.

  Modi weibo account
  ಪೋಸ್ಟ್ ಡಿಲೀಟ್ ಆಗುವ ಮುನ್ನ ಇದ್ದ ಮೋದಿ ಅವರ ವೇಬೋ ಅಕೌಂಟ್


  ಇದನ್ನೂ ಓದಿ: ಚೀನೀ ಉತ್ಪನ್ನಕ್ಕೆ ಸರ್ಕಾರದ ನಕಾರ ಹಿನ್ನೆಲೆ, ಬಿಎಸ್ಸೆನ್ನೆಲ್, ಎಂಟಿಎನ್ನೆಲ್ 4ಜಿ ಟೆಂಡರ್ ರದ್ದು  2015ರಲ್ಲಿ ಪ್ರಧಾನಿ ಮೋದಿ ಅವರು ವೇಬೋದಲ್ಲಿ ಖಾತೆ ಪ್ರಾರಂಭಿಸಿದ್ದರು. ಚೀನಾದ ಮಂದಾರಿನ್ ಭಾಷೆಯಲ್ಲಿ ಅವರು ಟ್ವೀಟ್ ಮಾಡುತ್ತಿದ್ದರು. ಸುಮಾರು 2.5 ಲಕ್ಷ ಫಾಲೋಯರ್ಸ್​ಗಳನ್ನೂ ಸಂಪಾದಿಸಿದ್ದರು. 2015ರಿಂದ 2019ರವರೆಗೆ ಚೀನೀ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರ ಪ್ರತಿ ಜನ್ಮದಿನಕ್ಕೂ ಶುಭ ಹಾರೈಸುತ್ತಿದ್ದ ಮೋದಿ ಅವರು ಈ ವರ್ಷ ವಿಷ್ ಮಾಡಿಲ್ಲ.
  First published: