PM Modi Ladakh Visit: ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಹಿನ್ನೆಲೆ; ಲಡಾಕ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿ

PM Modi Ladakh Visit: ನಿಮು ಭಾಗಕ್ಕೆ ಮೋದಿ ಇಂದು ಮುಂಜಾನೆಯೇ ತೆರಳಿದ್ದಾರೆ. ಸೇನೆ, ವಾಯುಸೇನೆ ಹಾಗೂ ಇಂಡೋ-ಟಿಬೇಟ್​ ಬಾರ್ಡರ್​ ಪೊಲೀಸರ ಜೊತೆ ಮೋದಿ ಸಂವಾಧ ನಡೆಸಿದ್ದಾರೆ. ಈ ಮೂಲಕ ಅವರುಗಳಿಗೆ ನೈತಿಕ ಬೆಂಬಲ ನೀಡಿದ್ದಾರೆ.

ಚೀನಾ ಗಡಿಯಲ್ಲಿ ಮೋದಿ

ಚೀನಾ ಗಡಿಯಲ್ಲಿ ಮೋದಿ

 • Share this:
  ಲಡಾಕ್​ (ಜು.3): ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆಯೇ ಗಡಿ ಭಾಗಕ್ಕೆ ದಿಢೀರ್​ ಭೇಟಿ ನೀಡಿದ್ದು, ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಅಲ್ಲದೆ, ಅಲ್ಲಿನ ಸೈನಿಕರ ಜೊತೆ ಮಾತುಕತೆ ನಡೆಸಿದ್ದಾರೆ.

  ಕಳೆದ ತಿಂಗಳು ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಭಾರತ ಕೂಡ ಚೀನಾಗೆ ತಿರುಗೇಟು ನೀಡಿದ್ದು, ಅವರ ದೇಶದ 40ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಇದರಿಂದ ಎರಡೂ ದೇಶಗಳ ನಡುವೆ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ಮೋದಿ ಗಡಿ ಭಾಗಕ್ಕೆ ಭೇಟಿ ನೀಡಿದ್ದಾರೆ.

  ನಿಮು ಪ್ರದೇಶಕ್ಕೆ ಮೋದಿ ಇಂದು ಮುಂಜಾನೆಯೇ ತೆರಳಿದ್ದಾರೆ. ಸೇನೆ, ವಾಯುಸೇನೆ ಹಾಗೂ ಇಂಡೋ-ಟಿಬೇಟ್​ ಬಾರ್ಡರ್​ ಪೊಲೀಸರ ಜೊತೆ ಮೋದಿ ಸಂವಾಧ ನಡೆಸಿದ್ದಾರೆ. ಈ ಮೂಲಕ ಅವರುಗಳಿಗೆ ನೈತಿಕ ಬೆಂಬಲ ನೀಡಿದ್ದಾರೆ. ಇನ್ನು, ಖುದ್ದು ಮೋದಿಯೇ ಗಡಿ ಭಾಗಕ್ಕೆ ತೆರಳಿರುವುದು ಸೈನಿಕರಿಗೆ ಹೊಸ ಹುರುಪು ನೀಡಿದೆ.

  ಇದನ್ನೂ ಓದಿ: ಶುಕ್ರವಾರ ಲಡಾಖ್‌ಗೆ ತೆರಳಬೇಕಿದ್ದ ರಾಜನಾಥ್‌‌ ಸಿಂಗ್ ಪ್ರವಾಸ ಮುಂದೂಡಿಕೆ; ಸರ್ಕಾರದಿಂದ ಸಿಗದ ಸ್ಪಷ್ಟತೆ

  ಮೋದಿ ಜೊತೆಗೆ ರಕ್ಷಣಾ ಮುಖ್ಯಸ್ಥ ಬಿಪಿನ್​ ರಾವತ್​ ಹಾಗೂ ಸೇನಾ ಮುಖ್ಯಸ್ಥ ಎಂಎಂ ನರವಣೆ ಕೂಡ ಭೇಟಿ ನೀಡಿದ್ದಾರೆ. ಯೋಜನೆಯಂತೆ ರಕ್ಷಣಾ ಸಚಿವ ರಾಜನಾಥ್‌‌ ಸಿಂಗ್‌ ಶುಕ್ರವಾರ ಮುಂಜಾನೆಯೇ ಲಡಾಖ್‌ಗೆ ಭೇಟಿ ನೀಡಬೇಕಿತ್ತು.  ಆದರೆ, ಈ ಮಹತ್ವದ ಭೇಟಿಯನ್ನು ಇದೀಗ ನಾನಾ ಕಾರಣಗಳಿಂದಾಗಿ ಮುಂದೂಡಲಾಗಿದೆ. ಸಚಿವ ರಾಜ್‌ನಾಥ್‌ ಸಿಂಗ್ ಅವರ ಲಡಾಖ್ ಭೇಟಿಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ಸರ್ಕಾರದ ವಲಯದಿಂದ ಈವರೆಗೆ ಯಾವುದೇ ಸ್ಪಷ್ಟತೆ ದೊರಕಿಲ್ಲ.
  First published: