ಚೀನಾ ದೇಶ ಭಾರತದ ಗಡಿಭಾಗದಲ್ಲಿ ಹಲವು ವರ್ಷಗಳಿಂದಲೂ ತಂಟೆ ಮಾಡುತ್ತಲೇ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತದ ಭಾಗವನ್ನು ಅತಿಕ್ರಮಿಸಿಕೊಳ್ಳಲು ಸದಾ ಮುಂದಾಗುತ್ತಲೇ ಇದೆ. ಕೆಲ ದಿನಗಳ ಹಿಂದೆ ಲಡಾಖ್ಗಾಲ್ವನ್ ಕಣಿವೆಯಲ್ಲಿ ಚೀನಾದ ಅತಿಕ್ರಮಣಕ್ಕೆ ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ 20 ಭಾರತೀಯ ಸೈನಕರನ್ನೂ ಬಲಿ ತೆಗೆದುಕೊಂಡಿತ್ತು. ಆ ಘಟನೆಯ ನಂತರ ದೇಶದಲ್ಲಿ ಚೀನೀ ವಿರೋಧಿ ಅಭಿಪ್ರಾಯ ಹೆಚ್ಚಾಗುತ್ತಿದೆ.
ಭಾರತದಲ್ಲಿ ಚೀನಾದ ವಸ್ತುಗಳನ್ನ ನಿಷೇಧಿಸಬೇಕು; ಭಾರತೀಯರು ಚೀನಾದ ಆ್ಯಪ್ಗಳನ್ನ ಅನ್ಇನ್ಸ್ಟಾಲ್ ಮಾಡಬೇಕು ಇತ್ಯಾದಿ ಕೂಗುಗಳು ದೊಡ್ಡಮಟ್ಟದಲ್ಲಿ ಕೇಳುತ್ತಿವೆ. ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಮುಕ್ಕಾಲು ಭಾಗವನ್ನ ಚೀನೀ ಕಂಪನಿಗಳೇ ಆಕ್ರಮಿಸಿಕೊಂಡಿವೆ. ಹೆಲೋ, ಶೇರ್ ಇಟ್, ಟಿಕ್ ಟಾಕ್ನಂಥ ಚೀನೀ ಆ್ಯಪ್ಗಳು ಭಾರತೀಯರ ನಿತ್ಯಬಳಕೆಯ ಭಾಗಗಳಾಗಿವೆ. ಆದರೆ, ದೇಶದ ವಿಚಾರಕ್ಕೆ ಬಂದರೆ ಇವುಗಳನ್ನೆಲ್ಲಾ ತ್ಯಜಿಸುವುದು ದೊಡ್ಡ ವಿಚಾರವನ್ನ ಎಂಬ ಅಭಿಪ್ರಾಯಗಳಿವೆ. ಬಹಳಷ್ಟು ಮಂದಿ ಚೀನೀ ಆ್ಯಪ್ಗಳನ್ನ ತಮ್ಮ ಸೆಟ್ಗಳಲ್ಲಿ ಅನ್ ಇನ್ಸ್ಟಾಲ್ ಕೂಡ ಮಾಡಿದ್ದಾರೆ.
ಚೀನೀ ಆ್ಯಪ್ಗಳನ್ನ ತೆಗೆದುಹಾಕುವ ವಿಚಾರದಲ್ಲಿ ನಿಮ್ಮ ಅನಿಸಿಕೆ ಏನು? ಈ ಕೆಳಗಿರುವ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ಅಭಿಪ್ರಾಯಗಳನ್ನ ದಾಖಲಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ