News18 China Sentimeter: ಚೀನಾ ಬಗ್ಗೆ ಭಾರತೀಯರ ಅಭಿಪ್ರಾಯವೇನು?; ಇಲ್ಲಿದೆ ನ್ಯೂಸ್​18 ಸಮೀಕ್ಷೆಯ ವರದಿ

ಚೀನಾ ವಿಷಯದಲ್ಲಿ ಜನರ ಅಭಿಪ್ರಾಯ ಯಾವ ರೀತಿ ಬದಲಾಗಿದೆ? ಚೀನಾ ವಸ್ತುಗಳನ್ನು ಬಳಸುವುದು ತಪ್ಪೇ? ಎಂಬ ಬಗ್ಗೆ ಭಾರತೀಯರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಉತ್ತರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಜೂ. 5): ಭಾರತದ ಗಡಿಯಲ್ಲಿ ತಕರಾರು ತೆಗೆದಿರುವ ಚೀನಾ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕಿದ್ದಾರೆ. ಲಡಾಕ್ ಗಡಿಯಲ್ಲಿ ತಂಟೆ ಶುರು ಮಾಡಿರುವ ಚೀನಾದ ವಸ್ತುಗಳನ್ನು ಬಳಸದಂತೆ ಮತ್ತು ಕೊಳ್ಳದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಅಭಿಯಾನಗಳು ಶುರುವಾಗಿವೆ. ಹಾಗಿದ್ದರೆ ಚೀನಾ ಬಗ್ಗೆ ಭಾರತೀಯರ ಅಭಿಪ್ರಾಯಗಳು ಹೇಗಿವೆ ಎಂಬ ಬಗ್ಗೆ ನೆಟ್​ವರ್ಕ್ 18 ಸಮೀಕ್ಷೆ ನಡೆಸಿತ್ತು. ಅದರ ಫಲಿತಾಂಶ ಇಲ್ಲಿದೆ.

  ಇನ್ನು ಮುಂದೆ ಮೊಬೈಲ್ ಸೇರಿದಂತೆ ಚೀನಾದ ಯಾವುದೇ ವಸ್ತುಗಳನ್ನು ಕೊಳ್ಳುವುದಿಲ್ಲ ಎಂದು ಜನ ಸ್ವಯಂಪ್ರೇರಿತವಾಗಿ ಪ್ರತಿಜ್ಞೆ ಮಾಡುತ್ತಿದ್ದು, ತಮ್ಮ ಮೊಬೈಲ್‌ಗಳಲ್ಲಿರುವ ಚೀನಾ ಮೂಲದ ಆ್ಯಪ್‌ಗಳನ್ನೂ ಡಿಲೀಟ್ ಮಾಡುತ್ತಿದ್ದಾರೆ. ಚೀನಾದ ವಸ್ತುಗಳನ್ನು ಬಳಸದಂತೆ ಸ್ವಯಂ ಪ್ರತಿಜ್ಞೆ ಮಾಡುತ್ತಿದ್ದಾರೆ. ಹಾಗಿದ್ದರೆ, ಜನರ ಅಭಿಪ್ರಾಯ ಚೀನಾದ ವಿಷಯದಲ್ಲಿ ಯಾವ ರೀತಿ ಬದಲಾಗಿದೆ? ಚೀನಾ ವಸ್ತುಗಳನ್ನು ಬಳಸುವುದು ತಪ್ಪೇ? ಎಂಬ ಬಗ್ಗೆ ಭಾರತೀಯರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಉತ್ತರ ಇಲ್ಲಿದೆ.

  ಇದನ್ನೂ ಓದಿ: ಭಾರತಕ್ಕೆ ಉದ್ಯಮಿ ವಿಜಯ ಮಲ್ಯ ಹಸ್ತಾಂತರ ಮತ್ತಷ್ಟು ವಿಳಂಬ; ಕಾರಣವೇನು ಗೊತ್ತಾ?  ನಿಮ್ಮ ದೃಷ್ಟಿಯಲ್ಲಿ ಚೀನಾ ಬಗ್ಗೆ ಯಾವ ಅಭಿಪ್ರಾಯಗಳಿವೆ? ನೀವು ಚೀನಾವನ್ನು ಯಾವ ರೀತಿ ನೋಡುತ್ತಿದ್ದೀರಿ? ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಶೇ. 83ರಷ್ಟು ಜನ ಚೀನಾವೆಂದರೆ ಇಷ್ಟವಿಲ್ಲ ಎಂದು ಉತ್ತರಿಸಿದ್ದಾರೆ. ಶೇ. 6.3ರಷ್ಟು ಜನರು ಚೀನಾ ಬಗ್ಗೆ ಅಸಮಾಧಾನವೇನಿಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ಶೇ. 10.6ರಷ್ಟು ಜನರು ನಾವು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.  ಚೀನಾದ ಬಗ್ಗೆ ನಿಮ್ಮ ದೃಷ್ಟಿಕೋನ ಯಾವಾಗ ಬದಲಾಯಿತು? ಎಂಬ ಪ್ರಶ್ನೆಗೆ ಶೇ. 55.7ರಷ್ಟು ಜನರು ಮೊದಲಿನಿಂದಲೂ ನಮಗೆ ಚೀನಾ ಬಗ್ಗೆ ತಿರಸ್ಕಾರವಿತ್ತು ಎಂದಿದ್ದಾರೆ. ಶೇ. 22.2ರಷ್ಟು ಜನರು ಇತ್ತೀಚಿನ ವರ್ಷಗಳಲ್ಲಿ ನಮಗೆ ಚೀನಾ ಬಗ್ಗೆ ಅಭಿಪ್ರಾಯ ಬದಲಾಗಿದೆ ಎಂದಿದ್ದಾರೆ. ಶೇ. 22.1ರಷ್ಟು ಜನರು ಕೆಲವು ದಿನಗಳ ಹಿಂದಷ್ಟೇ ನಮಗೆ ಚೀನಾ ಬಗ್ಗೆ ತಿರಸ್ಕಾರ ಮೂಡಿದೆ ಎಂದು ಉತ್ತರಿಸಿದ್ದಾರೆ.  ಕಳೆದ ಕೆಲವು ವಾರಗಳಿಂದ ಚೀನಾ ಬಗ್ಗೆ ನಿಮ್ಮ ಅಭಿಪ್ರಾಯ ಯಾವ ರೀತಿ ಬದಲಾಗಿದೆ? ಎಂದು ವಿವರಿಸಿ ಎಂದು ಭಾರತದ ಎಲ್ಲ ರಾಜ್ಯಗಳಲ್ಲಿ ಕೇಳಲಾಗಿತ್ತು. ಅದಕ್ಕೆ ಶೇ. 63.2 ಭಾರತೀಯರು ನಮಗೆ ಚೀನಾ ಬಗ್ಗೆ ಯಾವುದೇ ಒಳ್ಳೆ ಅಭಿಪ್ರಾಯವೂ ಉಳಿದಿಲ್ಲ ಎಂದಿದ್ದಾರೆ. ಶೇ. 31.5 ಭಾರತೀಯರು ಮೊದಲಿನಂತೆಯೇ ಇದೆ ಎಂದಿದ್ದಾರೆ. ಶೇ. 5.3ರಷ್ಟು ಜನ ಮೊದಲಿಗಿಂತ ಚೀನಾ ಬಗೆಗಿನ ಅಭಿಪ್ರಾಯ ಈಗ ಉತ್ತಮವಾಗಿದೆ ಎಂದು ಹೇಳಿದ್ದಾರೆ.  ಭಾರತದ ವಿಷಯದಲ್ಲಿ ಚೀನಾ ನಡೆದುಕೊಳ್ಳುತ್ತಿರುವುದು ಸರಿಯಾಗಿದೆಯೇ? ಭಾರತದ ಮೇಲೆ ಚೀನಾ ಕೂಡ ಇದೇ ರೀತಿ ಅಭಿಪ್ರಾಯ ಹೊಂದಿರಬಹುದೆ? ಎಂದು ಪ್ರಶ್ನಿಸಲಾಗಿತ್ತು. ಆ ಪ್ರಶ್ನೆಗೆ ಶೇ. 50.9ರಷ್ಟು ಜನರು ಚೀನಾ ನಮ್ಮ ಶತ್ರು ರಾಷ್ಟ್ರವಾಗಿಯೇ ಇರಲಿ ಎಂದಿದ್ದಾರೆ. ಶೇ. 14.4ರಷ್ಟು ಜನರು ಅದರ ಬಗ್ಗೆ ನಮಗೆ ಯಾವ ಯೋಚನೆಯೂ ಇಲ್ಲ, ನಮಗದು ಮುಖ್ಯವೂ ಅಲ್ಲ ಎಂದಿದ್ದಾರೆ.  ಲಡಾಖ್​ನಲ್ಲಿ ಚೀನಾ ಮತ್ತು ಭಾರತದ ಸೇನಾಪಡೆಗಳು ಎದುರಾಳಿಯಾಗಿ ನಿಂತು ಹಲ್ಲೆ ನಡೆಸಿಕೊಂಡಿವೆ. ಚೀನಾ ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದೆ ಎಂಬ ಸಂಗತಿ ನಿಮಗೆ ಗೊತ್ತಿದೆಯಾ? ಎಂಬ ಪ್ರಶ್ನೆಗೆ ಶೇ. 89.4ರಷ್ಟು ಜನರು ಹೌದು ಎಂದು ಉತ್ತರಿಸಿದ್ದಾರೆ. ಇನ್ನು ಶೇ. 10.6ರಷ್ಟು ಭಾರತೀಯರು ನಮಗೆ ಈ ಬಿಕ್ಕಟ್ಟಿನ ಬಗ್ಗೆ ಯಾವ ವಿಷಯವೂ ಗೊತ್ತಿಲ್ಲ ಎಂದಿದ್ದಾರೆ.

   
  First published: