ಏ. 4ರ ನಂತರ ಟ್ರಂಪ್ ಜೊತೆ ಮೋದಿ ಮಾತನಾಡಿದ್ದಿಲ್ಲ: ಸರ್ಕಾರದ ಮೂಲಗಳ ಸ್ಪಷ್ಟನೆ

ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆಯಿಂದಾಗಲೀ, ಪ್ರಧಾನಿ ಕಚೇರಿಯಿಂದಾಗಲೀ ಅಧಿಕೃತ ಸ್ಪಷ್ಟನೆ ಬಂದಿಲ್ಲ. ನ್ಯೂಸ್18ಗೆ ಮೂಲಗಳಿಂದ ಮಾತ್ರ ಮಾಹಿತಿ ಸಿಕ್ಕಿದೆ.

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ

 • News18
 • Last Updated :
 • Share this:
  ನವದೆಹಲಿ(ಮೇ 29): ಭಾರತ ಮತ್ತು ಚೀನಾ ಮಧ್ಯೆಯ ಗಡಿಸಮಸ್ಯೆ ಇತ್ಯರ್ಥಕ್ಕೆ ತಾನು ಮಧ್ಯಪ್ರವೇಶ ಮಾಡಲು ಸಿದ್ಧವಿದ್ದು, ಪ್ರಧಾನಿ ಮೋದಿ ಜೊತೆಯೂ ಮಾತನಾಡಿದ್ಧೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯನ್ನ ಕೇಂದ್ರ ಸರ್ಕಾರದ ಮೂಲಗಳು ತಳ್ಳಿಹಾಕಿವೆ. ಏಪ್ರಿಲ್ 4ರಂದು ಮೋದಿ ಮತ್ತು ಟ್ರಂಪ್ ಮಾತನಾಡಿದ್ದರು. ಅದಾದ ಬಳಿಕ ಅವರಿಬ್ಬರ ಮಧ್ಯೆ ಸಂಪರ್ಕ ಆಗಿಲ್ಲ ಎಂದು ಈ ಮೂಲಗಳು ಹೇಳುತ್ತಿವೆ.

  “ಇತ್ತೀಚೆಗೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಮಧ್ಯೆ ಯಾವುದೇ ಸಂಪರ್ಕ ಇಲ್ಲ. ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ಸಂಬಂಧ 2020ರ ಏಪ್ರಿಲ್ 4ರಂದು ಮಾತುಕತೆ ನಡೆದಿದ್ದೇ ಕೊನೆ. ರಾಜತಾಂತ್ರಿಕವಾಗಿ ಮತ್ತು ಅಧಿಕೃತ ವೇದಿಕೆಯ ಮೂಲಕ ಚೀನೀಯರೊಂದಿಗೆ ನೇರ ಸಂಪರ್ಕದಲ್ಲಿದ್ದೇವೆಂದು ಕೇಂದ್ರ ವಿದೇಶಾಂಗ ಇಲಾಖೆ ನಿನ್ನೆ ಕೂಡ ಸ್ಪಷ್ಟಪಡಿಸಿದೆ” ಎಂದು ಈ ಮೂಲಗಳು ಅಭಿಪ್ರಾಯಪಟ್ಟಿವೆ.

  ಇವತ್ತು ಅಮೆರಿಕನ್ ಅಧ್ಯಕ್ಷರ ಗೃಹ ಕಚೇರಿ ವೈಟ್ ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡೊನಾಲ್ಡ್ ಟ್ರಂಪ್ ಅವರು ತಾವು ಮೋದಿಯೊಂದಿಗೆ ಮಾತನಾಡಿರುವುದಾಗಿ ಹೇಳಿದ್ದರು.

  ಇದನ್ನೂ ಓದಿ: ಚೀನಾ ಬಗ್ಗೆ ಮೋದಿ ಒಳ್ಳೆಯ ಮೂಡಲಿಲ್ಲ; ಮಧ್ಯಸ್ಥಿಕೆ ವಹಿಸಲು ನಾವ್ ಸಿದ್ಧ: ಟ್ರಂಪ್

  ಚೀನಾ ವಿಚಾರದಿಂದಾಗಿ ನರೇಂದ್ರ ಮೋದಿ ಅವರು ಒಳ್ಳೆಯ ಮೂಡ್​ನಲ್ಲಿ ಇಲ್ಲ. ಗಡಿ ವಿಚಾರದಲ್ಲಿ ಭಾರತಕ್ಕೆ ಖುಷಿ ಇಲ್ಲ, ಚೀನಾಗೂ ಖುಷಿ ಇಲ್ಲ. ಇಬ್ಬರೂ ಒಪ್ಪಿದರೆ ನಾನು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರು.

  ಆದರೆ, ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆಯಿಂದಾಗಲೀ, ಪ್ರಧಾನಿ ಕಚೇರಿಯಿಂದಾಗಲೀ ಅಧಿಕೃತ ಸ್ಪಷ್ಟನೆ ಬಂದಿಲ್ಲ.

  First published: