India-China Conflict: ಗಾಲ್ವಾನ್​ ಕಣಿವೆ ಸಂಘರ್ಷ; ಇಂದು 3ನೇ ಬಾರಿಗೆ ಭಾರತ-ಚೀನಾ ಕಮಾಂಡರ್​ಗಳ ಮಾತುಕತೆ

India-China Face off: ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ - ಚೀನಾ ದೇಶಗಳ ಸೇನಾ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಈಗಾಗಲೇ ಎರಡು ಬಾರಿ ವಿಫಲವಾಗಿದೆ. ಇಂದು 3ನೇ ಬಾರಿಗೆ ಕಾರ್ಪ್ಸ್​ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ.

ಭಾರತ ಚೀನಾ ಗಡಿಭಾಗ

ಭಾರತ ಚೀನಾ ಗಡಿಭಾಗ

  • Share this:
ನವದೆಹಲಿ (ಜೂ. 30): ಲಡಾಖ್​ ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಿಂದ ಚೀನಾ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಸಂಘರ್ಷದಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದ್ದಾರೆ. ಇದಕ್ಕೆ ಪ್ರತೀಕಾರವೆಂಬಂತೆ ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಅಭಿಯಾನಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ನಿನ್ನೆ ಸಂಜೆ ಕೇಂದ್ರ ಸರ್ಕಾರ ಚೀನಾದ 59 ಆ್ಯಪ್​ಗಳನ್ನು ಬ್ಯಾನ್ ಮಾಡಿದೆ. ಇಂದು ಮೂರನೇ ಬಾರಿಗೆ ಚೀನಾ-ಭಾರತ ನಡುವೆ ಸೇನಾ ಕಮಾಂಡರ್​ಗಳ ಮಟ್ಟದ ಮಾತುಕತೆ ನಡೆಯಲಿದೆ.

ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ - ಚೀನಾ ದೇಶಗಳ ಸೇನಾ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಈಗಾಗಲೇ ಎರಡು ಬಾರಿ ವಿಫಲವಾಗಿದೆ. ಇಂದು ಮೂರನೇ ಬಾರಿಗೆ ಉಭಯ ದೇಶಗಳ ಕಾರ್ಪ್ಸ್​ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ. ಲಡಾಖ್ ಗಡಿಯಲ್ಲಿ ಪರಿಸ್ಥಿತಿಯ ಬಗ್ಗೆ ಈ ವೇಳೆ ಚರ್ಚೆ ನಡೆದು, ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.

ಇದನ್ನೂ ಓದಿ: ವಿಶಾಖಪಟ್ಟಣದ ವೈಜಾಗ್​ನಲ್ಲಿ ಮತ್ತೆ ಗ್ಯಾಸ್ ಸೋರಿಕೆ; ಇಬ್ಬರು ಸಾವು, ನಾಲ್ವರ ಸ್ಥಿತಿ ಗಂಭೀರ

ಇದಕ್ಕೂ ಮೊದಲು ನಡೆದ 2 ಕಮಾಂಡರ್ ಮಟ್ಟದ ಸಭೆಗಳು ಚೀನಾ ಪ್ರದೇಶದಲ್ಲಿರುವ ಎಲ್​ಎಸಿಯ ಮೊಲ್ಡೊದಲ್ಲಿ ನಡೆದಿದ್ದವು. ಇಂದು ಭಾರತದ ಪರವಾಗಿ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಮತ್ತು ಚೀನಾ ಪರವಾಗಿ ಮೇಜರ್ ಜನರಲ್ ಲಿಯು ಲಿನ್ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಭೇಟಿಗೆ ಸಮಯ ನಿಗದಿಪಡಿಸಲಾಗಿದೆ.

ಲಡಾಖ್‌ನ ನಿಯಂತ್ರಣ ರೇಖೆಯಲ್ಲಿನ ಬಿಕ್ಕಟ್ಟನ್ನು ಬಗೆಹರಿಸಲು ಭಾರತ ಮತ್ತು ಚೀನಾ ನಡುವೆ ಇಂದು ಮಾತುಕತೆ ನಡೆಯುವ ಮೊದಲೇ ನಿನ್ನೆ ಟಿಕ್​ಟಾಕ್ ಸೇರಿದಂತೆ 59 ಚೀನಾ ಆ್ಯಪ್​ಗಳನ್ನು ಭಾರತ ಬ್ಯಾನ್ ಮಾಡಿದೆ. ಚೀನಾದ ಮೊಬೈಲ್ ಆ್ಯಪ್​ಗಳಿಂದ ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ತೊಡಕಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. Tik tok, Cam scaner, Share It, Helo, Vigo Video, UC Browser, Club Factory, Mi Video Call-Xiaomi, Viva Video, WeChat ಮತ್ತು UC News ಮುಂತಾದ ಆ್ಯಪ್​ಗಳು ಬ್ಯಾನ್ ಆಗಿವೆ.
First published: