ಲಡಾಖ್ ಗಡಿ ಸಂಘರ್ಷ; ಚೀನಾ ಉತ್ಪನ್ನಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಸಿದ್ಧತೆ

ಆತ್ಮ ನಿರ್ಭರ ಭಾರತ್ ಉತ್ತೇಜಿಸುವ‌ ಬಗ್ಗೆ ಸಮಾಲೋಚನೆ ನಡೆಸಲಾಗಿದ್ದು, ಚೀನಾಗಿಂತ ಕಡಿಮೆ ಬೆಲೆಯಲ್ಲಿ ಭಾರತದಲ್ಲೇ ಅಲ್ಲಿಂದ ಆಮದಾಗುವ ಉತ್ಪನ್ನಗಳನ್ನು ಉತ್ಪಾದಿಸುವ ಬಗ್ಗೆ ಚರ್ಚೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಜೂ. 22): ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಚೀನಾ ಉತ್ಪನ್ನಗಳನ್ನು‌ ನಿಷೇಧಿಸಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ. ಚೀನಾದಿಂದ ಬರುತ್ತಿರುವ ಉತ್ಪನ್ನಗಳು ಯಾವುದು? ಕಡಿಮೆ ಆಮದು ಸುಂಕ ಇರುವ ಉತ್ಪನ್ನಗಳು ಯಾವುದು? ದೇಶಿಯ ಬೆಲೆಗಳಿಗಿಂತ ಕಡಿಮೆ ದರ ಇರುವ ಉತ್ಪನ್ನಗಳು ಯಾವುದು? ಎಂದು ಚೀನಾ ಉತ್ಪನ್ನಗಳ ಪಟ್ಟಿ ಸಿದ್ದಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಸಚಿವಾಲಯದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಚೀನಾದ ಆಮದು ಅವಲಂಬನೆ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಆತ್ಮ ನಿರ್ಭರ ಭಾರತ್ ಉತ್ತೇಜಿಸುವ‌ ಬಗ್ಗೆ ಸಮಾಲೋಚನೆ ನಡೆಸಲಾಗಿದ್ದು, ಚೀನಾಗಿಂತ ಕಡಿಮೆ ಬೆಲೆಯಲ್ಲಿ ಭಾರತದಲ್ಲೇ ಆ ಉತ್ಪನ್ನಗಳನ್ನು ಉತ್ಪಾದಿಸುವ ಬಗ್ಗೆ ಚರ್ಚೆ ಮಾಡಲಾಗಿದೆ.

ಇದನ್ನೂ ಓದಿ: ಪುರಿ ರಥಯಾತ್ರೆಗೆ ಅನುಮತಿ ಕೋರಿ ಮೇಲ್ಮನವಿ: ಸುಪ್ರೀಂ ಕೋರ್ಟ್​ನಲ್ಲಿ ಇಂದು ಅರ್ಜಿ ವಿಚಾರಣೆ

ಭಾರತದ ಆಮದಿನ ಶೇ. 14ರಷ್ಟು ಚೀನಾದಿಂದಲೇ ಬರುತ್ತಿದೆ. ಚೀನಾ ಸೆಲ್ ಫೋನ್, ಟೆಲಿಕಾಂ, ವಿದ್ಯುತ್, ಪ್ಲಾಸ್ಟಿಕ್ ಆಟಿಕೆಗಳು ಮತ್ತು ಔಷಧ ಪದಾರ್ಥಗಳು, ವಾಚ್, ಶಾಂಪೂ, ಗಾಜು, ಪೈಪ್, ಹೇರ್ ಕ್ರೀಮ್, ಹೇರ್ ಶಾಂಪೂಗಳು, ಫೇಸ್ ಪೌಡರ್, ಕಣ್ಣು ಮತ್ತು ಲಿಫ್ಟಿಕ್, ಮುದ್ರಣ ಶಾಯಿ, ಬಣ್ಣಗಳು ಮತ್ತು ವಾರ್ನಿಷ್‌ಗಳು ಮತ್ತು ಕೆಲವು ತಂಬಾಕು ವಸ್ತುಗಳ ಪ್ರಮುಖ ಪೂರೈಕೆದಾರ ದೇಶ ಚೀನಾ ಆಗಿದೆ.

2014-15 ಮತ್ತು 2018-19ರ ನಡುವಿನ ಆಮದು ಉಲ್ಬಣ ದತ್ತಾಂಶಗಳನ್ನು ಇಟ್ಟುಕೊಂಡು ಚರ್ಚೆ ನಡೆಸಲಾಗಿದ್ದು, ಎರಡೂ ದೇಶಗಳಲ್ಲಿ ತಯಾರಿಸಿದ ಒಂದೇ ರೀತಿಯ ಸರಕುಗಳ ಬೆಲೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಟೈರ್‌ಗಳಿಗೆ ಆಮದು ನಿರ್ಬಂಧ ಹೇರಿದೆ. ಏಪ್ರಿಲ್ 2019ರಿಂದ ಫೆಬ್ರವರಿ 2020ರ ಅವಧಿಯಲ್ಲಿ ಭಾರತಕ್ಕೆ 62.4 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಭಾರತ ರಫ್ತು ಮೌಲ್ಯ 15.5 ಬಿಲಿಯನ್ ಯುಎಸ್ ಡಾಲರ್. ಈ ವ್ಯಾಪಾರ ಕೊರತೆ ಹೆಚ್ಚಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಶೀಘ್ರವೇ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಹೆಚ್ಚಿನ ಮಾಹಿತಿ ಪಡೆಯುವ ಸಾಧ್ಯತೆಯಿದೆ.
First published: