ನಾವು ದುರ್ಬಲಗೊಂಡಷ್ಟೂ ಚೀನಾ ಆಕ್ರಮಣಕಾರಿ: ತಿರುಗೇಟು ನೀಡುವ ಕಾಲ ಬಂದಿದೆ: ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್

ಭಾರತೀಯ ಸೈನಿಕರು ಅಧರ್ಮ ಯುದ್ಧ ಎದುರಿಸುತ್ತಿದ್ಧಾರೆ. ಗಡಿ ಭಾಗವನ್ನು ರಕ್ಷಿಸಿಕೊಳ್ಳುವ ಕೆಲಸದಲ್ಲಿ ನಮ್ಮ ಸೈನಿಕರು ಆಗಾಗ್ಗೆ ಜೀವ ಕಳೆದುಕೊಳ್ಳುತ್ತಿದ್ಧಾರೆ ಎಂದು ಮಾಜಿ ಸೇನಾಧಿಕಾರಿಯೂ ಆದ ಪಂಜಾಬ್ ಸಿಎಂ ಬೇಸರ ವ್ಯಕ್ತಪಡಿಸಿದ್ಧಾರೆ.

news18
Updated:June 16, 2020, 4:21 PM IST
ನಾವು ದುರ್ಬಲಗೊಂಡಷ್ಟೂ ಚೀನಾ ಆಕ್ರಮಣಕಾರಿ: ತಿರುಗೇಟು ನೀಡುವ ಕಾಲ ಬಂದಿದೆ: ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್
ಪಂಜಾಬ್ ಸಿಎಂ ಅಮರಿಂದರ್​ ಸಿಂಗ್
  • News18
  • Last Updated: June 16, 2020, 4:21 PM IST
  • Share this:
ನವದೆಹಲಿ(ಜೂನ್ 16): ಲಡಾಖ್ ಗಡಿಭಾಗದಲ್ಲಿ ಭಾರತೀಯ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿ ಮೂವರನ್ನು ಬಲಿ ಪಡೆದ ಚೀನೀ ಸೈನಿಕರ ಕೃತ್ಯವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಲವಾಗಿ ಖಂಡಿಸಿದ್ದಾರೆ. ಗಾಲ್ವನ್ ಕಣಿವೆಯಲ್ಲಿ ನಡೆಯುತ್ತಿರುವ ಘಟನೆ ಚೀನಾದ ಗಡಿತಂಟೆಯ ಮುಂದುವರಿದ ಭಾಗವಾಗಿದೆ. ಈ ಗಡಿ ಉಲ್ಲಂಘನೆಯ ಎದುರು ಇಡೀ ದೇಶವೇ ಸೆಟೆದು ನಿಲ್ಲಬೇಕಾದ ಸಮಯ ಬಂದಿದೆ ಎಂದು ಅವರು ಕರೆ ನೀಡಿದ್ಧಾರೆ.

ಭಾರತೀಯ ಸೈನಿಕರು ಅಧರ್ಮ ಯುದ್ಧ ಎದುರಿಸುತ್ತಿದ್ಧಾರೆ. ಗಡಿ ಭಾಗವನ್ನು ರಕ್ಷಿಸಿಕೊಳ್ಳುವ ಕೆಲಸದಲ್ಲಿ ನಮ್ಮ ಸೈನಿಕರು ಆಗಾಗ್ಗೆ ಜೀವ ಕಳೆದುಕೊಳ್ಳುತ್ತಿದ್ಧಾರೆ ಎಂದು ಮಾಜಿ ಸೇನಾಧಿಕಾರಿಯೂ ಆದ ಪಂಜಾಬ್ ಸಿಎಂ ಬೇಸರ ವ್ಯಕ್ತಪಡಿಸಿದ್ಧಾರೆ.

ಈಗ ಭಾರತ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವ ಸಮಯ ಬಂದಿದೆ. ನಮ್ಮ ದೌರ್ಬಲ್ಯ ವ್ಯಕ್ತವಾದಷ್ಟೂ ಚೀನೀಯರ ಪ್ರತಿಕ್ರಿಯೆ ಹೆಚ್ಚು ಆಕ್ರಮಣಕಾರಿಯಾಗಿರುತ್ತದೆ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಗಾಲ್ವನ್ ಕಣಿವೆಯ ಘಟನೆ ಕಳವಳಕಾರಿ; ಪ್ರಧಾನಿ, ರಕ್ಷಣಾ ಸಚಿವರು ಸ್ಪಷ್ಟನೆ ನೀಡಲಿ: ದೇವೇಗೌಡ

ಇದನ್ನೂ ಓದಿ: ಲಡಾಖ್​ನಲ್ಲಿ ಭಾರತದ ಸೇನೆ ಮೇಲೆ ಚೀನಾ ಗುಂಡಿನ ದಾಳಿ; ಓರ್ವ ಅಧಿಕಾರಿ, ಇಬ್ಬರು ಸೈನಿಕರ ಸಾವು

ನಿನ್ನೆ ರಾತ್ರಿ ಈ ಹಿಂಸಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಚೀನೀ ಸೈನಿಕರು ಎಲ್​ಎಸಿ ಗಡಿಭಾಗದಲ್ಲಿ ಅತಿಕ್ರಮಣ ಮಾಡಿದ್ದರಿಂದ ಗಾಲ್ವನ್ ಕಣಿವೆಯಲ್ಲಿ ಹಲವಾರು ದಿನಗಳಿಂದಲೂ ಪ್ರಕ್ಷುಬ್ದ ವಾತಾವರಣ ಇದೆ. ವಿವಿಧ ಹಂತಗಳಲ್ಲಿ ಮಾತುಕತೆ ನಡೆದ ಬಳಿಕ ಎರಡೂ ಕಡೆಯ ಸೈನಿಕರನ್ನ ಹಿಂಪಡೆಯಲು ನಿರ್ಧರಿಸಲಾಯಿತು. ಅದರಂತೆ ಡೀ ಎಸ್ಕಲೇಶನ್ ಪ್ರಕ್ರಿಯೆ ಆಗಿತ್ತು. ಈ ಸಂದರ್ಭದಲ್ಲೇ ಹಿಂಸಾಚಾರ ಆಗಿರುವುದು ಕಳವಳ ಮೂಡಿಸಇದೆ.ಆದರೆ, ಯಾವ ರೀತಿಯ ಹಿಂಸಾಚಾರವಾಯಿತು ಎಂಬುದು ಗೊತ್ತಾಗಿಲ್ಲ. ಗುಂಡಿನ ಚಕಮಕಿ ಆಗಿಲ್ಲ ಎನ್ನುತ್ತಿವೆ ಮೂಲಗಳು.  ಎರಡೂ ಕಡೆಯ ಸೈನಿಕರು ಮುಖಾಮುಖಿಯಾದಾಗ ಬೇರೆ ರೀತಿಯಲ್ಲಿ ಘರ್ಷಣೆ ಆಗಿದೆ. ಈ ಸಂದರ್ಭದಲ್ಲಿ ಭಾರತದ ಕಮಾಂಡಿಂಗ್ ಅಧಿಕಾರಿ ಹಾಗೂ ಇಬ್ಬರು ಸೈನಿಕರು ಸಾವನ್ನಪ್ಪಿದ್ಧಾರೆ. ಚೀನಾ ಕಡೆ ಐವರು ಸಾವನ್ನಪ್ಪಿದ್ಧಾರೆ ಎಂದು ಭಾರತೀಯ ಸೇನೆ ಹೇಳಿಕೆ ನೀಡಿದೆ. ಆದರೆ, ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ಪತ್ರಿಕೆ ಯಾವುದೇ ಸಾವಿನ ಸಂಖ್ಯೆ ಪ್ರಕಟಿಸಿಲ್ಲವಾದರೂ ಭಾರತೀಯ ಸೈನಿಕರಿದಂದ ಚೀನೀ ಸೇನೆಗೆ ಹಾನಿಯಾಗಿದೆ ಎಂದು ಹೇಳಿದೆ.
First published: June 16, 2020, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading