news18 Updated:January 25, 2021, 12:29 PM IST
ಚೀನಾದ ಸೈನಿಕರು
- News18
- Last Updated:
January 25, 2021, 12:29 PM IST
ನವದೆಹಲಿ(ಜ. 25): ಗಡಿಭಾಗದಲ್ಲಿ ಚೀನಾ ಆಕ್ರಮಣಕಾರಿ ವರ್ತನೆ ಮುಂದುವರಿಯುತ್ತಲೇ ಇದೆ. ಲಡಾಖ್ನಲ್ಲಿ ಕಳೆದ ವರ್ಷ ಭಾರತದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ್ದ ಚೀನಾ ಇದೀಗ ಸಿಕ್ಕಿಂನಲ್ಲೂ ಅದೇ ಬುದ್ಧಿತೋರಿದೆ. ಸಿಕ್ಕಿಂನ ನಾತು ಲಾ ಬಳಿ ಪಿಎಲ್ಎ ಸೈನಿಕರು ಭಾರತದ ಭಾಗಕ್ಕೆ ಬರಲು ನಡೆಸಿದ ಯತ್ನವನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ಧಾರೆ. ಈ ವೇಳೆ ಎರಡೂ ಕಡೆಯ ಸೈನಿಕರ ಮಧ್ಯೆ ಘರ್ಷಣೆ ಆಗಿದೆ. ಎರಡೂ ಕಡೆಯವರಿಗೆ ಗಾಯಗಳಾಗಿದೆ. ಕಳೆದ ವಾರ ಈ ಘಟನೆ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಲಡಾಖ್ ಭಾಗದಲ್ಲಿ ಸಂಘರ್ಷ ವಾತಾವರಣ ತಿಳಿಗೊಳಿಸಲು ಭಾರತ ಮತ್ತು ಚೀನಾ ನಡುವೆ ಸೇನಾಮಟ್ಟದಲ್ಲಿ ನಡೆಯುತ್ತಿರುವ 9ನೇ ಸುತ್ತಿನ ಮಾತುಕತೆಗೆ ಮುನ್ನ ಈ ಘಟನೆ ನಡೆದಿರುವುದು ಚೀನಾದ ಕೃತ್ರಿಮ ಬುದ್ಧಿಯನ್ನು ಮತ್ತೊಮ್ಮೆ ಬಯಲುಗೊಳಿಸಿದೆ.
ಲಡಾಖ್ನ ಗಡಿಭಾಗದ ವಿವಿಧೆಡೆ ಏಳೆಂಟು ತಿಂಗಳ ಹಿಂದೆ ಚೀನಾ ಅತಿಕ್ರಮಣ ನಡೆಸಿತ್ತು. ಅದನ್ನು ಭಾರತೀಯ ಸೈನಿಕರು ಪ್ರತಿರೋಧಿಸಿದರು. ಅಲ್ಲಲ್ಲಿ ಸಣ್ಣಪುಟ್ಟ ಘರ್ಷಣೆಗಳಾದವು. ಗಾಲ್ವನ್ ಕಣಿವೆಯಲ್ಲಿ ಚೀನೀ ಸೈನಿಕರು ಏಕಾಏಕಿ ದಾಳಿ ಮಾಡಿ 20 ಭಾರತೀಯ ಸೈನಿಕರನ್ನು ಕೊಂದಿದ್ದರು. ಮದ್ದು ಗುಂಡುಗಳಿಲ್ಲದೆ ನಡೆದ ಈ ಸಂಘರ್ಷದಲ್ಲಿ ಭಾರತೀಯ ಸೈನಿಕರೂ ಕೂಡ 30ಕ್ಕೂ ಹೆಚ್ಚು ವೈರಿಗಳನ್ನ ಸಂಹರಿಸಿದ ಮಾಹಿತಿ ಇದೆ.
ಇದನ್ನೂ ಓದಿ: ರಿಯಲ್ ಲೈಫ್ನಲ್ಲಿ ಮುದಲ್ವನ್; ಒಂದು ದಿನ ಸಿಎಂ ಆಗಿ 20 ವರ್ಷದ ಹುಡುಗಿ ಮಾಡಿದ್ದೇನು?
ಈ ಭೀಕರ ಸಂಘರ್ಷದ ಬಳಿಕ ಭಾರತದ ಸೈನಿಕರು ಲಡಾಖ್ನ ವಿವಿಧೆಡೆ ಆಯಕಟ್ಟಿನ ಜಾಗಗಳನ್ನ ತನ್ನ ಸುಪರ್ದಿಯಲ್ಲಿಟ್ಟುಕೊಂಡಿದೆ. ಇದು ಚೀನಾದ ಹತಾಶೆಗೆ ಕಾರಣ ಎನ್ನಲಾಗುತ್ತಿದೆ. ಭಾರತ ಮತ್ತು ಚೀನಾ ನಡುವೆ ಸಾವಿರಾರು ಕಿಮೀ ಸುದೀರ್ಘ ಗಡಿ ಇದೆ. ಆದರೆ, ಗಡಿರೇಖೆ ಇನ್ನೂ ಸ್ಪಷ್ಟವಾಗಿ ನಿರ್ಧಾರವಾಗಿಲ್ಲ. ಎರಡೂ ದೇಶಗಳು ತಮ್ಮ ತಮ್ಮ ದೃಷ್ಟಿಯಲ್ಲಿ ಗಡಿವಾಸ್ತವ ರೇಖೆಯನ್ನ ಹಾಕಿಕೊಂಡಿದೆ. ಈ ಅನಿಶ್ಚಿತತೆಯನ್ನೇ ಚೀನಾ ದುರುಪಯೋಗಿಸಿಕೊಂಡು ದಶಕಗಳಿಂದ ಭಾರತದ ಭೂಭಾಗವನ್ನು ಒತ್ತುವರಿ ಮಾಡಿಕೊಂಡು ಬರುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.
ಕಳೆದ ವರ್ಷವೂ ಇಂಥದ್ದೇ ಅತಿಕ್ರಮಣಕ್ಕೆ ಪ್ರಯತ್ನಿಸಿದ್ದಾಗ ಭಾರತೀಯ ಯೋಧರು ಪ್ರತಿರೋಧಿಸಿ ತಡೆದಿದ್ದರು. ಅದಾದ ಬಳಿಕ ಲಡಾಖ್ನಲ್ಲಿ ಅತೀವ ಕೊರೆಯುವ ಚಳಿಯಲ್ಲೂ 50 ಸಾವಿರ ಸೈನಿಕರನ್ನು ಭಾರತೀಯ ಸೇನೆ ನಿಯೋಜಿಸಿ ಭದ್ರತೆ ಒದಗಿಸುತ್ತಿದೆ. ಅತ್ತ ಚೀನಾ ಕೂಡ ಇಷ್ಟೇ ಪ್ರಮಾಣದ ಸೈನಿಕರನ್ನ ಸಜ್ಜುಗೊಳಿಸಿದೆ. ಯಾವ ಕ್ಷಣವಾದರೂ ಯುದ್ಧಕ್ಕೆ ಎರಡೂ ಕಡೆಯ ಸೈನಿಕರು ಸಿದ್ಧವಾಗಿದ್ದಾರೆನ್ನಲಾಗಿದೆ.
Published by:
Vijayasarthy SN
First published:
January 25, 2021, 12:29 PM IST