Indo-China Crisis: ಮಾತುಕತೆ ಬೆನ್ನಲ್ಲೇ ಕ್ಯಾತೆ ತೆಗೆದ ಚೀನಾ; ಗಡಿ ವಿವಾದಕ್ಕೆ ಭಾರತವೇ ಕಾರಣ ಎಂದ ಡ್ರ್ಯಾಗನ್

ಮಾಸ್ಕೋದಲ್ಲಿ ರಾಜನಾಥ್​ ಸಿಂಗ್​ ಹಾಗೂ ವೀ ಫೆಂಗಿ ಮಾತುಕತೆ ನಡೆಸಿದ್ದರು. ಈ ವೇಳೆ ಚೀನಾದ ಜೊತೆಗಿನ ಗಡಿ ಸಮಸ್ಯೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಚೀನಾ ಹೊಸ ಕ್ಯಾತೆ ತೆಗೆದಿದೆ.

ಚೀನಾ-ಭಾರತ ಅಧಿಕಾರಿಗಳ ಭೇಟಿ

ಚೀನಾ-ಭಾರತ ಅಧಿಕಾರಿಗಳ ಭೇಟಿ

 • Share this:
  ನವದೆಹಲಿ (ಸೆಪ್ಟೆಂಬರ್ 5): ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಮೂಡಲು ಭಾರತ ನೇರ ಕಾರಣ. ಲಡಾಕ್​ನಲ್ಲಿ ಉಂಟಾಗಿರುವ ಸಮಸ್ಯೆಯ ಹೊಣೆಯನ್ನು ಭಾರತವೇ ಹೊತ್ತುಕೊಳ್ಳಬೇಕು. ನಮಗೆ ಸೇರಿದ ಒಂದೇ ಒಂದು ಇಂಚು ಭೂಮಿಯನ್ನು ನಾವು ಕಳೆದುಕೊಳ್ಳುವುದಿಲ್ಲ ಎಂದು ಚೀನಾ ಹೇಳಿದೆ. ನಿನ್ನೆಯಷ್ಟೇ ಭಾರತದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಚೀನಾದ ರಕ್ಷಣಾ ಸಚಿವ ವೀ ಫೆಂಗಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಮಾತುಕತೆ ಬೆನ್ನಲ್ಲೇ ಚೀನಾ ಈ ಹೇಳಿಕೆ ನೀಡಿದೆ. ಮಾಸ್ಕೋದಲ್ಲಿ ರಾಜನಾಥ್​ ಸಿಂಗ್​ ಹಾಗೂ ವೀ ಫೆಂಗಿ ಮಾತುಕತೆ ನಡೆಸಿದ್ದರು. ಈ ವೇಳೆ ಚೀನಾದ ಜೊತೆಗಿನ ಗಡಿ ಸಮಸ್ಯೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಚೀನಾ ಹೊಸ ಕ್ಯಾತೆ ತೆಗೆದಿದೆ.

  "ಚೀನಾ-ಭಾರತ ಗಡಿಯಲ್ಲಿ ಪ್ರಸ್ತುತ ಉದ್ವಿಗ್ನತೆಗೆ ಕಾರಣಗಳು ಸ್ಪಷ್ಟವಾಗಿದೆ. ಇದರ ಸಂಪೂರ್ಣ ಜವಾಬ್ದಾರಿ ಭಾರತದ ಮೇಲಿದೆ. ಚೀನಾ ತನ್ನ ಭೂಪ್ರದೇಶದ ಒಂದಿಂಚನ್ನು ಕಳೆದುಕೊಳ್ಳಲು ಸಿದ್ಧವಾಗಿಲ್ಲ. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ನಮ್ಮ ಸೇನೆ ಸಮರ್ಧವಾಗಿದೆ”ಎಂದು ಚೀನಾ ಹೇಳಿಕೆ ಬಿಡುಗಡೆ ಮಾಡಿದೆ.

  ಲಡಾಖ್​ನ ಗಾಲ್ವನ್ ಕಣಿವೆ ರೀತಿಯಲ್ಲಿ ಪ್ಯಾಂಗೋಂಗ್ ಸರೋವರದ ದಕ್ಷಿಣ ಭಾಗದ ಪ್ರದೇಶಗಳ ಅತಿಕ್ರಮಣಕ್ಕೆ ಚೀನಾ ಮಾಡಿದ ಪ್ರಯತ್ನವನ್ನು ಭಾರತದ ಸೈನಿಕರು ವಿಫಲಗೊಳಿಸಿತ್ತು. ಸರೋವರದ ದಕ್ಷಿಣ ದಂಡೆಯ ಕಣಿವೆ ಪ್ರದೇಶಗಳಲ್ಲಿರುವ ಎಲ್ಲಾ ಎತ್ತರದ ಪ್ರದೇಶಗಳನ್ನ ಭಾರತ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ಹೇಳಿದ್ದವು. ಗಡಿ ಕಾಯಲು ಮತ್ತು ಸಮರ ಸಂದರ್ಭದಲ್ಲಿ ಈ ಎತ್ತರದ ಪ್ರದೇಶಗಳು ಬಹಳ ಮುಖ್ಯವೆನಿಸುತ್ತವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳನ್ನ ಚೀನಾ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿತ್ತು. ಆದರೆ, ಗಾಲ್ವನ್ ಘಟನೆಯಿಂದ ಎಚ್ಚೆತ್ತುಕೊಂಡಿರುವ ಭಾರತೀಯ ಸೇನೆ ಚೀನಾದ ಕಿತಾಪತಿಯನ್ನು ಸರಿಯಾಗಿ ಅಂದಾಜಿಸಿ ತನ್ನ ಪ್ರದೇಶಗಳ ರಕ್ಷಣೆ ಮಾಡಿದ್ದವು.
  Published by:Rajesh Duggumane
  First published: