India-China Conflict: ಮತ್ತೆ ಶುರುವಾದ ಯುದ್ಧ ಭೀತಿ; ಚೀನಾ ಗಡಿಗೆ ಹೆಚ್ಚುವರಿಯಾಗಿ 50 ಸಾವಿರ ಸೈನಿಕರನ್ನು ಕಳುಹಿಸಿದ ಭಾರತ

ಗಡಿಯಲ್ಲಿ ಭಾರತೀಯ ಯೋಧರ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಿದೆ. ಇದು ಗಾಲ್ವಾನ್ ಸಂಘರ್ಷದ ಪೂರ್ವದ ಸ್ಥಿತಿಗೆ ಹೋಲಿಸಿದರೆ ಶೇ.40 ಹೆಚ್ಚಾಗಿದೆ. ಅಲ್ಲದೆ, ಗಡಿಯಲ್ಲಿ ಇಷ್ಟೊಂದು ಪ್ರಮಾಣದ ಸೇನೆ ಜಮಾವಣೆ ಮಾಡಿರುವುದು ಇದೇ ಮೊದಲು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಗಾಲ್ವಾನ್​ ಕಣಿವೆ ಮತ್ತು ಪೂರ್ವ ಲಡಾಖ್​​ ಪ್ರದೇಶದಲ್ಲಿ ವಿಶ್ವದ ಎರಡು ನ್ಯೂಕ್ಲಿಯರ್​ ಪವರ್​ ಹೊಂದಿರುವ ದೇಶಗಳಾದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರೆದಿದೆ. ಹೀಗಾಗಿ ಗಾಲ್ವಾನ್​ ಕಣಿವೆಯಲ್ಲಿ ಮತ್ತೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿಯಲ್ಲಿ ಚೀನಾ ತನ್ನ ಸೇನೆಯನ್ನು ಜಮಾವಣೆ ಮಾಡುತ್ತಿರುವುದರ ಮೇಲೆ ಕಣ್ಣಿಟ್ಟಿರುವ ಭಾರತ ಸರ್ಕಾರ, ಗಾಲ್ವಾನ್ ಗಡಿಗೆ ಹೆಚ್ಚುವರಿಯಾಗಿ 50 ಸಾವಿರ ಸೈನಿಕರನ್ನು ಕಳುಹಿಸಿಕೊಟ್ಟಿದೆ ಎಂದು ಬ್ಲೂಮ್​ ಬರ್ಗ್​ ವರದಿ ಮಾಡಿದೆ.

  ಇದರಿಂದ ಗಡಿಯಲ್ಲಿ ಭಾರತೀಯ ಯೋಧರ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಿದೆ. ಇದು ಗಾಲ್ವಾನ್ ಸಂಘರ್ಷದ ಪೂರ್ವದ ಸ್ಥಿತಿಗೆ ಹೋಲಿಸಿದರೆ ಶೇ.40 ಹೆಚ್ಚಾಗಿದೆ. ಅಲ್ಲದೆ, ಗಡಿಯಲ್ಲಿ ಇಷ್ಟೊಂದು ಪ್ರಮಾಣದ ಸೇನೆ ಜಮಾವಣೆ ಮಾಡಿರುವುದು ಇದೇ ಮೊದಲು. ಭಾರತವು ಹೆಚ್ಚುವರಿ ಸೈನಿಕರನ್ನು ನಿಯೋಜಿಸುವ ಐತಿಹಾಸಿಕ ದಿಟ್ಟ ಕ್ರಮವನ್ನು ತೆಗೆದುಕೊಂಡಿದೆ.

  1962ರಲ್ಲಿ ಭಾರತ-ಚೀನಾ ನಡುವೆ ಯುದ್ಧ ನಡೆದಿದ್ದರೂ ಈಗ ಭಾರತದ ಕಾರ್ಯತಂತ್ರದ ಗಮನ ಪ್ರಾಥಮಿಕವಾಗಿ ಪಾಕಿಸ್ತಾನದ ಮೇಲಿದೆ. ದೀರ್ಘ ಕಾಲದ ವೈರಿಯಾಗಿರುವ ಪಾಕಿಸ್ತಾನದೊಂದಿಗೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತ ಮೂರು ಬಾರಿ ಯುದ್ಧ ಮಾಡಿ ಜಯಗಳಿಸಿತ್ತು.

  ಇದನ್ನೂ ಓದಿ:ಸೊಳ್ಳೆ ಸಾಯ್ಸೋಕೆ ಸಖತ್ ಐಡಿಯಾ..!; ಎಲ್ಲಾ ಕಡೆಯೂ ಈಗ ಇದರದ್ದೇ ಚರ್ಚೆ

  ಆದರೆ, ಕಳೆದ ವರ್ಷ ಪೂರ್ವ ಲಡಾಖ್​ನಲ್ಲಿ ಭಾರತ ಹಾಗೂ ಚೀನಾ ನಡುವೆ ಭೀಕರ ಸಂಘರ್ಷ ನಡೆದ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಮತ್ತು ಬೀಜಿಂಗ್​ ಜತೆಗಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಭವಿಷ್ಯದಲ್ಲಿ ಸೃಷ್ಟಿಯಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಗಡಿಭಾಗದಲ್ಲಿ ಸೈನಿಕರು ಸಿದ್ದವಾಗಿರುವಂತೆ ಮೋದಿ ಸರ್ಕಾರ ಮನವಿ ಮಾಡಿಕೊಂಡಿದೆ ಎಂದು ವರದಿ ತಿಳಿಸಿದೆ.

  ಕಳೆದ ಬಾರಿ ಗಾಲ್ವಾನ್ ಸಂಘರ್ಷದಿಂದ ಪಾಠ ಕಲಿತಿರುವ ಭಾರತ, ಈ ಬಾರಿ ಗಡಿಯಲ್ಲಿ ಚೀನಾ ಸೇನೆ ಮುನ್ನುಗ್ಗದಂತೆ ಕಟ್ಟೆಚ್ಚರ ವಹಿಸಿದೆ. ಇದರಂತೆ ಗಡಿಯಲ್ಲಿ ನಿರಂತರವಾಗಿ ಕಾವಲನ್ನು ಮುಂದುವರೆಸಿದೆ. ಸೈನಿಕರ ಜೊತೆಗೆ ಜೆಟ್ ವಿಮಾನಗಳನ್ನು ಚೀನಾ ಗಡಿಗೆ ಹೊಂದಿಕೊಂಡ ಮೂರು ವಿಭಿನ್ನ ಸ್ಥಳಗಳಲ್ಲಿ ನಿಯೋಜನೆ ಮಾಡಿದೆ. ಈ ಮುನ್ನ ಚೀನಾದ ಚಲನವಲನಗಳಿಗೆ ತಡೆ ಒಡ್ಡುವ ಉದ್ದೇಶದಿಂದ ಗಡಿಯಲ್ಲಿ ಭಾರತವು ಸೇನೆ ಜಮಾವಣೆ ಮಾಡಿತ್ತು.ಇದೀಗ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜನೆ ಮಾಡಿರುವುದು ಚೀನಾದ ವಿರುದ್ಧ ದಾಳಿ ನಡೆಸಲು ಎಂದು ಹೇಳಲಾಗುತ್ತಿದೆ.

  SSLC Exam: ಶಿಕ್ಷಣ ಸಚಿವರ ಬೆಂಬಲಕ್ಕೆ ನಿಂತ ಸಿಎಂ ಯಡಿಯೂರಪ್ಪ; ಬೇರೆ ಕಡೆ ಇದ್ದೆ ಎಂದು ಸುಧಾಕರ್ ಯೂಟರ್ನ್

  ಒಂದು ವೇಳೆ ಚೀನಾ ಆಕ್ರಮಣಶೀಲತೆ ಪ್ರದರ್ಶಿಸಿದರೆ ಆ ಪ್ರದೇಶವನ್ನು ವಶಪಡಿಸಿಕೊಳ್ಳುವುದಕ್ಕೆ ಸೇನೆಗ ಈಗ ಹೆಚ್ಚಿನ ಬಲ ಬಂದಂತಾಗಿದೆ. ಈ ಹಿಂದೆ ಭಾರತ ಸೇನೆಯ ನಿಯೋಜನೆ ಚೀನಾದ ನಡೆಗಳನ್ನು ತಡೆಯುವ ಉದ್ದೇಶವನ್ನು ಹೊಂದಿದ್ದರೂ ಈಗ ಸೇನೆಯ ಮರು ನಿಯೋಜನೆ ‘ಆಕ್ರಮಣಕಾರಿ ರಕ್ಷಣೆ’ ಎಂದು ಕರೆಯಲಾಗುವ ಕಾರ್ಯತಂತ್ರದ ಮೂಲಕ ಚೀನಾದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಹಾಗೂ ದಾಳಿ ನಡೆಸಲು ಭಾರತೀಯ ಕಮಾಂಡರ್​ಗಳಿಗೆ ಹೆಚ್ಚಿನ ಅವಕಾಶ ನೀಡುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.
  Published by:Latha CG
  First published: