ಚೀನಿಯರ ವೀಸಾ ಮತ್ತು ಭಾರತದಲ್ಲಿನ ಡ್ಯ್ರಾಗನ್ ದೇಶದ ಶಿಕ್ಷಣ ಸಂಸ್ಥೆಗಳ ಪರಿಶೀಲನೆಗೆ ಮುಂದಾದ ಕೇಂದ್ರ ಸರ್ಕಾರ

ಚೀನಾದ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕೆಲ ಭಾರತೀಯ ವಿಶ್ವವಿದ್ಯಾಲಯಗಳ ಚಟುವಟಿಕೆಗಳನ್ನು ತೀವ್ರವಾಗಿ ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಉಭಯ ದೇಶಗಳ ಶಿಕ್ಷಣ ಸಂಸ್ಥೆಗಳ ನಡುವೆ ಸಹಿ ಹಾಕಿದ ಒಟ್ಟು 54 ಜ್ಞಾಪಕ ಪತ್ರಗಳನ್ನು ಸರ್ಕಾರ ಈಗಾಗಲೇ ಪರಿಶೀಲನೆಗೆ ಒಳಪಡಿಸಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನವ ದೆಹಲಿ (ಆಗಸ್ಟ್‌ 21); ಗಡಿ ವಿವಾದ ಮತ್ತು ಗಡಿಯಲ್ಲಿ ಕಳೆದ ಎರಡು ತಿಂಗಳಿನಿಂದ ಸೈನಿಕರ ನಡುವೆ ಉಂಟಾಗಿರುವ ಉದ್ವಿಗ್ನತೆಯ ಕಾರಣದಿಂದಾಗಿ ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಚೀನಾದಿಂದ ಭಾರತಕ್ಕೆ ಆಗಮಿಸುವವರ ವೀಸಾಗೆ ಹೆಚ್ಚುವರಿ ಭದ್ರತಾ ಪರಿಶೀಲನೆ ನಡೆಸಲು ಮತ್ತು ಸ್ಥಳೀಯ ವಿಶ್ವವಿದ್ಯಾಲಯಗಳೊಂದಿಗಿನ ಬೀಜಿಂಗ್‌ನ ಸಂಪರ್ಕವನ್ನೂ ಪರಿಶೀಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಬ್ಲೂಮ್‌ಬರ್ಗ್‌‌ನಲ್ಲಿನ ವರದಿಯ ಪ್ರಕಾರ, ಚೀನಾದ ಉದ್ಯಮಿಗಳು, ಶಿಕ್ಷಣ ತಜ್ಞರು, ಉದ್ಯಮ ತಜ್ಞರ ವೀಸಾಗಳಿಗಾಗಿ ಇನ್ನು ಆ ದೇಶದ ವಿದೇಶಾಂಗ ಸಚಿವಾಲಯ (ಎಂಇಎ) ಈಗ ಪೂರ್ವ ಭದ್ರತಾ ಅನುಮತಿ ನೀಡಬೇಕಾಗುತ್ತದೆ. ಚೀನಾದೊಂದಿಗಿನ ಈ ನೂತನ ಕ್ರಮಗಳು ಪಾಕಿಸ್ತಾನದೊಂದಿಗೆ ದೀರ್ಘಕಾಲ ಕೆಲಸ ಮಾಡುತ್ತಿರುವಂತೆಯೇ ಇರುತ್ತವೆ ಎನ್ನಲಾಗುತ್ತಿದೆ.

ಉನ್ನತ ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವದ ಬಗ್ಗೆ ಕೇಂದ್ರ ಭದ್ರತಾ ಸಂಸ್ಥೆಗಳು ಸರ್ಕಾರಕ್ಕೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ ನಂತರ ಸರ್ಕಾರದ ಕಡೆಯಿಂದ ಈ ವಿಮರ್ಶೆಯನ್ನು ಪ್ರಾರಂಭಿಸಲಾಗಿದೆ.

ಚೀನಾದ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕೆಲ ಭಾರತೀಯ ವಿಶ್ವವಿದ್ಯಾಲಯಗಳ ಚಟುವಟಿಕೆಗಳನ್ನು ತೀವ್ರವಾಗಿ ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಉಭಯ ದೇಶಗಳ ಶಿಕ್ಷಣ ಸಂಸ್ಥೆಗಳ ನಡುವೆ ಸಹಿ ಹಾಕಿದ ಒಟ್ಟು 54 ಜ್ಞಾಪಕ ಪತ್ರಗಳನ್ನು ಸರ್ಕಾರ ಈಗಾಗಲೇ ಪರಿಶೀಲನೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ : ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ವಾರಾಂತ್ಯದ ಲಾಕ್‌ಡೌನ್‌ ಪ್ರಕ್ರಿಯೆಗೆ ಮೊರೆಹೋದ ಹರಿಯಾಣ ಸರ್ಕಾರ

ವಿವಿಧ ದೇಶಗಳಲ್ಲಿ ಕನ್ಫ್ಯೂಷಿಯಸ್ ಸಂಸ್ಥೆಗಳನ್ನು ನಡೆಸುತ್ತಿರುವ ಚೀನಾದ ಅಧಿಕೃತ ಭಾಷಾ ತರಬೇತಿ ಕಚೇರಿಯ ಹನ್‌ಬನ್‌ಗೆ ಸಂಪರ್ಕ ಹೊಂದಿರುವ ಶಿಕ್ಷಣ ಸಂಸ್ಥೆಗಳ ಪರಿಶೀಲನೆಯನ್ನು ಭಾರತ ಸರ್ಕಾರ ಇತ್ತೀಚೆಗೆ ಪ್ರಕಟಿಸಿತ್ತು. ಏಳು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಮತ್ತು ಕನ್ಫ್ಯೂಷಿಯಸ್ ತರಗತಿ ಕೊಠಡಿಗಳ ಭಾರತೀಯ ಅಧ್ಯಾಯಗಳು ಸ್ಕ್ಯಾನರ್ ಅಡಿಯಲ್ಲಿದೆ ಎಂದು ವರದಿಗಳು ತಿಳಿಸಿವೆ.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನೀ ಮತ್ತು ಭಾರತೀಯ ಪಡೆಗಳು ಘರ್ಷಣೆ ನಡೆದು ಸುಮಾರು ಎರಡು ತಿಂಗಳ ನಂತರದ ಕೇಂದ್ರ ಸರ್ಕಾರದ ಈ ಕ್ರಮವು ಮಹತ್ವದ್ದಾಗಿದೆ. ಈ ಘರ್ಷಣೆ 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿತ್ತು. ಇದು ಸಾಮಾನ್ಯವಾಗಿ ಭಾರತದ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ತಕ್ಷಣದ ಕ್ರಮ ತೆಗೆದುಕೊಂಡಿದ್ದ ಭಾರತ ಸರ್ಕಾರ ಚೀನಾ ದೇಶದ ಹಲವಾರು ಮೊಬೈಲ್ ಅಪ್ಲಿಕೇಷನ್‌ಗಳನ್ನು ಬ್ಯಾನ್ ಮಾಡಿತ್ತು. ಇದರ ಬೆನ್ನಿಗೆ ಸರ್ಕಾರದ ಇದೀಗ ಶಿಕ್ಷಣ ಸಂಸ್ಥೆಗಳು ಮತ್ತು ವೀಸಾ ಪ್ರಕ್ರಿಯೆಗಳ ಕುರಿತು ಪರಿಶೀಲನೆಗೆ ಮುಂದಾಗಿದೆ.
Published by:MAshok Kumar
First published: