ಸೈನ್ಯ ಜಮಾವಣೆ ಹಿಂದಕ್ಕೆ ತೆಗೆದುಕೊಂಡ ಭಾರತ, ಚೀನಾ; ಹಾಟ್​ ಸ್ಪ್ರಿಂಗ್​ ಪ್ರದೇಶದ ಬಗ್ಗೆ ಇನ್ನೂ ಮೂಡದ ಒಮ್ಮತ

ಕಳೆದ ವರ್ಷ ಮೇನಲ್ಲಿ ಪಾಂಗಾಂಗ್ ಸರೋವರದ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ಸೇನಾಪಡೆಗಳ ನಡುವಿನ ಗಡಿ ಬಿಕ್ಕಟ್ಟು ಭುಗಿಲೆದ್ದಿತು ಮತ್ತು ಎರಡೂ ಕಡೆಯವರು ಕ್ರಮೇಣವಾಗಿ ಸೇನಾ ನಿಯೋಜನೆಯನ್ನು ಹಾಗೂ ಭಾರೀ ಶಸ್ತ್ರಾಸ್ತ್ರಗಳನ್ನು ಈ ಪ್ರದೇಶದಲ್ಲಿ ಹೆಚ್ಚಿಸಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಶನಿವಾರ  ನಡೆದ 12 ನೇ ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಯ ನಂತರ, ಭಾರತ ಮತ್ತು ಚೀನಾ ದೇಶಗಳು ಪೂರ್ವ ಲಡಾಖ್‌ನ ಗೋಗ್ರಾ ಹೈಟ್ಸ್‌ನಿಂದ ತಮ್ಮ, ತಮ್ಮ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿವೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ.

  ಸೇನಾ ಜಮಾವಣೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಮುಂದಿನ ಮೂರು ದಿನಗಳಲ್ಲಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ

  ಕಳೆದ ವಾರ ಎರಡೂ ಕಡೆಯವರು ಗಡಿಯಲ್ಲಿ ಉಂಟಾಗಿರುವ ಉದ್ವಿಘ್ನತೆ ಬಗ್ಗೆ ವಿವರವಾದ ಸಮಾಲೋಚನೆ ನಡೆಸಿದ್ದರು, ಆದರೆ ಪೂರ್ವ ಲಡಾಖ್‌ನಲ್ಲಿ ಘರ್ಷಣೆಯ ಕುದಿ ಬಿಂದು ಹಾಗೂ ಅತಿ ಸೂಕ್ಷ್ಮ ಸ್ಥಳವಾದ ಹಾಟ್​ ಸ್ಪ್ರಿಂಗ್​ ಕುರಿತು ಎರಡೂ ದೇಶಗಳು ಪರಸ್ಪರ ಒಮ್ಮತಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.

  ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಚೀನಾ ಬದಿಯ ಮೊಲ್ಡೊ ಗಡಿ ಪ್ರದೇಶದಲ್ಲಿ ಒಂಬತ್ತು ಗಂಟೆಗಳ ಕಾಲ ಈ ಮಹತ್ವದ ಸೇನಾ ಸಭೆ ನಡೆಯಿತು.

  ಎರಡು ದೇಶಗಳ ನಡುವಿನ ಒಟ್ಟಾರೆ ಬಾಂಧವ್ಯಕ್ಕೆ ಅಡ್ಡಿಯಾಗುತ್ತಿರುವ ಡೆಪ್ಸಾಂಗ್, ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಸೇರಿದಂತೆ ಇತರೇ  ಭೂ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಶೀಘ್ರ ಪರಿಹಾರ ಅತ್ಯಗತ್ಯ ಎಂಬುದು ಭಾರತ ದೇಶದ ನಂಬಿಕೆಯಾಗಿದೆ ಎಂದು ಬಲವಾಗಿ ಒತ್ತಾಯಿಸಿದೆ. ಮೂರೂವರೆ ತಿಂಗಳಿಗಿಂತ ಹೆಚ್ಚು ಸಮಯದ ನಂತರ 12ನೇ ಸುತ್ತಿನ ಮಾತುಕತೆ ನಡೆದಿದ್ದು. 11 ನೇ ಸುತ್ತಿನ ಮಿಲಿಟರಿ ಮಾತುಕತೆಯು ಏಪ್ರಿಲ್ 9 ರಂದು ಭಾರತದ ಎಲ್‌ಎಸಿಯ ಬದಿಯಲ್ಲಿರುವ ಚುಶುಲ್ ಗಡಿಯಲ್ಲಿ ನಡೆದಿತ್ತು. ಸುಮಾರು 13 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಯಾವುದೇ ರೀತಿಯ ನಿರ್ಣಯಕ್ಕೆ ಬರಲು ಸಾಧ್ಯವಾಗಿರಲಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಮ್ಮ ಚೀನಾದ ಸಹವರ್ತಿ ವಾಂಗ್ ಯಿಗೆ ಅವರಲ್ಲಿ ಗಡಿ ವಿಚಾರ ಪ್ರಸ್ತಾಪಿಸಿದ ಎರಡು ವಾರಗಳ ನಂತರ  12 ನೇ ಸುತ್ತಿನ ಮಿಲಿಟರಿ ಮಾತುಕತೆಗಳು ನಡೆದಿದೆ.  ಪೂರ್ವ ಲಡಾಖ್‌ನಲ್ಲಿ ಈಗ ಇರುವ ಸಮಸ್ಯೆಯನ್ನು ಎಳೆಯುತ್ತಾ ಹೋದಷ್ಟು ಎರಡು ದೇಶಗಳ ಸಂಬಂಧಗಳ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

  ಇಬ್ಬರು ವಿದೇಶಾಂಗ ಸಚಿವರು ಜುಲೈ 14 ರಂದು ತಾಜಿಕ್ ರಾಜಧಾನಿ ದುಶಾನ್‌ಬೆಯಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಸಮಾವೇಶದಲ್ಲಿ ಒಂದು ಗಂಟೆಗಳ ಕಾಲ ದ್ವಿಪಕ್ಷೀಯ ಸಭೆ ನಡೆಸಿದ್ದರು. ಎಲ್‌ಎಸಿ ಉದ್ದಕ್ಕೂ ಚೀನಾ ದೇಶದ ಕೈವಾಡ ಹಾಗೂ ಅನಪೇಕ್ಷಿತವಾಗಿ ಮೂಗು ತೂರಿಸುವುದನ್ನು ಭಾರತ ಒಪ್ಪುವುದಿಲ್ಲ ಹಾಗೂ ಈ ನಡೆ "ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದರು. ಪೂರ್ವ ಲಡಾಖ್‌ನಲ್ಲಿ ಶಾಂತಿ ಮತ್ತು ನೆಮ್ಮದಿಯ ಸಂಪೂರ್ಣ ಪುನಃಸ್ಥಾಪನೆಯ ನಂತರವೇ ಒಟ್ಟಾರೆ ಸಂಬಂಧಗಳು ಅಭಿವೃದ್ಧಿ ಹೊಂದುತ್ತವೆ ಎಂದು ಸಹ ಮಾತುಕತೆ ವೇಳೆ ಚೀನಾಕ್ಕೆ ತಿಳಿಸಿದ್ದರು.

  ಮಿಲಿಟರಿ ಮಾತುಕತೆಯ ಕೊನೆಯ ಸುತ್ತಿನಲ್ಲಿ, ಎರಡೂ ಕಡೆಯವರು ಈ ಪ್ರದೇಶದಲ್ಲಿ ಉಂಟಾಗಿರುವ ಸೇನಾ ಉದ್ವಿಗ್ನತೆಯನ್ನು ತಗ್ಗಿಸುವ ಒಂದು ದೊಡ್ಡ ಗುರಿಯೊಂದಿಗೆ ಮಾತುಕತೆ ಮುಗಿಸಲಾಯಿತು. ಹಾಟ್ ಸ್ಪ್ರಿಂಗ್ಸ್, ಗೋಗ್ರಾ ಮತ್ತು ಡೆಪ್ಸಾಂಗ್‌ನಲ್ಲಿನ ಸೇನಾ ಪಡೆಗಳ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ಮುಂದುವರಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಾಯಿತು. ಆದಾಗ್ಯೂ, ಸೈನ್ಯ ಹಿಂಪಡೆಯುವಿಕೆ ಬಿಟ್ಟು ಬೇರೆ ಪ್ರಕ್ರಿಯೆ ಕುರಿತು ಯಾವುದೇ ಮುಂದುವರೆದ ಮಾತುಕತೆ ಕಂಡು ಬರಲಿಲ್ಲ ಎಂದು ಹೇಳಲಾಗಿದೆ. ಶನಿವಾರ ನಡೆದ ಮಾತುಕತೆಯಲ್ಲಿ ಭಾರತೀಯ ನಿಯೋಗದ ನೇತೃತ್ವವನ್ನು ಲೆಹ್ ಮೂಲದ 14 ಕಾರ್ಪ್ಸ್ ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ವಹಿಸಿದ್ದರು.

  ಕಳೆದ ವರ್ಷ ಮೇನಲ್ಲಿ ಪಾಂಗಾಂಗ್ ಸರೋವರದ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ಸೇನಾಪಡೆಗಳ ನಡುವಿನ ಗಡಿ ಬಿಕ್ಕಟ್ಟು ಭುಗಿಲೆದ್ದಿತು ಮತ್ತು ಎರಡೂ ಕಡೆಯವರು ಕ್ರಮೇಣವಾಗಿ ಸೇನಾ ನಿಯೋಜನೆಯನ್ನು ಹಾಗೂ ಭಾರೀ ಶಸ್ತ್ರಾಸ್ತ್ರಗಳನ್ನು ಈ ಪ್ರದೇಶದಲ್ಲಿ ಹೆಚ್ಚಿಸಿದ್ದರು. ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ  ಪರಿಣಾಮವಾಗಿ, ಉಭಯ ದೇಶಗಳು ಫೆಬ್ರವರಿಯಲ್ಲಿ ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವಿಕೆಯನ್ನು ಒಪ್ಪಂದಕ್ಕೆ ಅನುಗುಣವಾಗಿ ಪೂರ್ಣಗೊಳಿಸಿದ್ದವು.

  ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ನ್ಯೂಡ್ ಲೈವ್ ಸೆಷನ್ ಮಾಡಿದ ಗೆಹಾನಾ ವಸಿಷ್ಠ: ‘ಇದು ಅಶ್ಲೀಲವೇ?’ ಎಂದು ಪ್ರಶ್ನಿಸಿದ ನಟಿ

  ಪ್ರತಿ ಬದಿಯೂ ಪ್ರಸ್ತುತ ಸುಮಾರು 50,000 ರಿಂದ 60,000 ಸೈನಿಕರನ್ನು ಸೂಕ್ಷ್ಮ ವಲಯವಾದ ಗಡಿ ನಿಯಂತ್ರಣ ರೇಖೆಯ ಬಳಿ ಜಮಾವಣೆ ಮಾಡಲಾಗಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: