ಲಡಾಖ್​​ನ ಗೋಗ್ರಾದಿಂದ ಸೇನೆಗಳನ್ನು ಹಿಂಪಡೆದ ಭಾರತ-ಚೀನಾ.. ಮಿಲಿಟರಿ ಮಾತುಕತೆ ಯಶಸ್ವಿ

India-China : ಕಮಾಂಡರ್ ಹಂತದ ಮಾತುಕತೆಯಲ್ಲಿ ಭಾರತ ಚೀನಾಗೆ ಎಚ್ಚರಿಕೆಯನ್ನ ಕೂಡ ನೀಡಿತ್ತು. ನೀವು ಹಿಂದೆ ಸರಿಯದಿದ್ದರೆ ನಿಮ್ಮನ್ನು ನಾವು ಸುತ್ತುವರೆಯುತ್ತೇವೆ. ಕೈಲಾಶ್ ರೇಂಜ್ ಪರ್ವತವನ್ನು ಮರಳಿ ಆಕ್ರಮಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ಸಂಬಂಧ ಮಹತ್ವದ ಬೆಳವಣಿಗೆಯಾಗಿದೆ. ಉಭಯ ದೇಶಗಳು ಲಡಾಖ್​​ನ ಗೋಗ್ರಾ ಪೋಸ್ಟ್​ ನಿಂದ ಸೇನೆಗಳನ್ನು ಹಿಂಪಡೆದಿವೆ. ಬಿಕ್ಕಟ್ಟನ್ನ ಶಮನ ಮಾಡಲು ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ ಬರೋಬ್ಬರಿ 12 ಬಾರಿ ಸಭೆಗಳು ನಡೆದಿದ್ದವು. ಸದ್ಯ ಸಭೆಯಲ್ಲಿ ಮಾಡಿಕೊಂಡ ಒಪ್ಪಂದಂತೆ ಭಾರತ ಹಾಗೂ ಚೀನಾ ಗೋಗ್ರಾ ಗಡಿಯಿಂದ ಸಂಪೂರ್ಣ ಹಿಂದೆ ಸರಿದಿವೆ. ಕಳೆದ 2 ದಿನಗಳಲ್ಲಿ ಎರಡೂ ಸೇನೆಗಳು ಹಿಂದೆ ಸರಿದಿದ್ದು, ಪರಿಸ್ಥಿತಿ ಮೊದಲಿನ ಹಂತಕ್ಕೆ ತಲುಪಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

  ಎರಡೂ ಸೇನೆಗಳ ನಡುವೆ ಅತ್ಯಂತ ದೊಡ್ಡ ಘರ್ಷಣೆಗೆ ಕಾರಣವಾಗವ ವಾತಾವರಣ ಗೋಗ್ರಾದಲ್ಲಿ ನಿರ್ಮಾಣವಾಗಿತ್ತು. ಚೀನಿ ಸೇನೆ ಇಲ್ಲಿ ಭಾಗಶಃ ಪರ್ಮನೆಂಟ್​​ ಟೆಂಟ್​​ಗಳನ್ನು ಸಹ ಹಾಕಿಕೊಂಡಿತ್ತು. ಜೊತೆಗೆ ಆರ್ಟಿಲ್ಲರಿ ಗನ್​ಗಳನ್ನು ಸಹ ತಂದಿತ್ತು. ಇಲ್ಲಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಅಂತ ಚೀನಾ ಹಲವು ಬಾರಿ ಹೇಳಿಕೊಂಡೇ ಬಂದಿತ್ತು.. ಕಳೆದ ಮೂರು ತಿಂಗಳಲ್ಲಿ ಭಾರತೀಯ ಸೇನೆ ಎಂದು ಚೀನಾ ಕೊಂಚ ಮಂಕಾಗಿದೆ. ಆ ಹಿನ್ನೆಲೆಯಲ್ಲೇ ಸೇನೆಗಳನ್ನು ವಾಪಸ್​​ ಪಡೆದಿದೆ.

  ಕಮಾಂಡರ್ ಹಂತದ ಮಾತುಕತೆಯಲ್ಲಿ ಭಾರತ ಚೀನಾಗೆ ಎಚ್ಚರಿಕೆಯನ್ನ ಕೂಡ ನೀಡಿತ್ತು. ನೀವು ಹಿಂದೆ ಸರಿಯದಿದ್ದರೆ ನಿಮ್ಮನ್ನು ನಾವು ಸುತ್ತುವರೆಯುತ್ತೇವೆ. ಕೈಲಾಶ್ ರೇಂಜ್ ಪರ್ವತವನ್ನು ಮರಳಿ ಆಕ್ರಮಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿತ್ತು. ಈಗ ಎರಡೂ ಕಡೆಯಿಂದ ನಿರ್ಮಿಸಲಾದ ಇತರ ಮೂಲಸೌಕರ್ಯಗಳನ್ನ ನಾಶಪಡಿಸಲಾಗಿದೆ ಎಂದು ಸೇನೆ ಹೇಳಿದೆ.

  ಇದನ್ನೂ ಓದಿ: CJI NV Ramana: ಸಿಬಿಐ, ಐಬಿ ಮತ್ತಿತರ ತನಿಖಾ ಸಂಸ್ಥೆಗಳು ನ್ಯಾಯಾಧೀಶರ ಸಹಾಯಕ್ಕೆ ಬರಲ್ಲ: ಮುಖ್ಯ ನ್ಯಾ. ಎನ್​ ವಿ ರಮಣ

  ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ 12 ನೇ ಸುತ್ತಿನ ಮಾತುಕತೆಗಳು ಚೀನಾದ ಬದಿಯ ಮೊಲ್ಡೋ ಗಡಿ ಹಂತದಲ್ಲಿ ಜುಲೈ 31 ರಂದು ಆರಂಭವಾಯಿತು. ಸುಮಾರು 9 ಗಂಟೆಗಳ ಕಾಲ 14 ತಿಂಗಳುಗಳಿಗಿಂತ ಹೆಚ್ಚು ಕಾಲ ಈ ಪ್ರದೇಶದಲ್ಲಿ ಉಂಟಾದ ಬಿಕ್ಕಟ್ಟನ್ನು ಕೊನೆಗೊಳಿಸುವ ಸಲುವಾಗಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಹಾಟ್ ಸ್ಪ್ರಿಂಗ್ಸ್, ಗೋಗ್ರಾ ಮತ್ತು ಡೆಪ್‌ಸಾಂಗ್‌ನಲ್ಲಿ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಭಾರತ ಒತ್ತಾಯಿಸಿತು. ಈ ಮೊದಲು  ಏಪ್ರಿಲ್ 9 ರಂದು ಎಲ್‌ಎಸಿಯ ಭಾರತದ ಕಡೆಯ ಚುಶುಲ್ ಗಡಿಭಾಗದಲ್ಲಿ 11ನೇ ಸುತ್ತಿನ ಮಿಲಿಟರಿ ಮಾತುಕತೆ ನಡೆದಿತ್ತು. ಈ ಸಂಭಾಷಣೆ ಸುಮಾರು 13 ಗಂಟೆಗಳ ಕಾಲ ನಡೆದಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: