Indo-China Conflict: ಭಾರತದ ಗಡಿಯೊಳಗೆ ನುಗ್ಗಿದ್ದ 200 ಚೀನೀ ಸೈನಿಕರು, ಎಲ್ಲರನ್ನೂ ವಶಕ್ಕೆ ಪಡೆದ ಭಾರತೀಯ ಸೇನೆ

Indo-China Conflict: ಈ ಕುರಿತಾಗಿ ಭಾರತೀಯ ಸೇನೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ ರಕ್ಷಣಾ ಮತ್ತು ಭದ್ರತಾ ಮೂಲಗಳು ನ್ಯೂಸ್​​ 18ಗೆ ನೀಡಿರುವ ಮಾಹಿತಿ ಪ್ರಕಾರ, ಭಾರತೀಯ ರಕ್ಷಣಾ ವ್ಯವಸ್ಥೆಗೆ ಯಾವುದೇ ಹಾನಿಯಾಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Indo-China Conflict:  ಚೀನಾದಿಂದ(China) ಭಾರತದ ಗಡಿಯೊಳಗೆ(India Border) ನುಸುಳಲು ಯತ್ನಿಸಿದ ಚೀನೀ ಸೈನಿಕರನ್ನು(China Military) ಅರುಣಾಚಲ ಪ್ರದೇಶದ(Arunachal Pradesh) ತವಾಂಗ್(Tawang)​​ನಲ್ಲಿ ಭಾರತೀಯ ಸೈನಿಕರು ತಾತ್ಕಾಲಿಕವಾಗಿ ವಶಕ್ಕೆ(Detained) ಪಡೆದಿದ್ದರು. ಅವರಲ್ಲಿ 200 ಮಂದಿ ಟಿಬೆಟ್​​ನಿಂದ(Tibet) ಭಾರತದ ಕಡೆಗೆ ನುಗ್ಗಿ ಬಂಕ್​​ಗಳನ್ನು ಹಾನಿ ಮಾಡಲು ಯತ್ನಿಸಿದರು ಎಂದು ಸರ್ಕಾರಿ ಮೂಲಗಳು ನ್ಯೂಸ್​ 18ಗೆ ತಿಳಿಸಿವೆ.

    ಹೌದು, ಭಾರತೀಯ ಸೇನೆ ಮತ್ತು ಚೀನೀ ಮಿಲಿಟರಿ ಪಡೆಗಳ ನಡುವೆ ಮತ್ತೊಮ್ಮೆ ಮುಖಾಮುಖಿ ಸಂಘರ್ಷ ನಡೆದಿದೆ. ಕಳೆದ ವಾರ ನಡೆದ ಈ ಸಂಘರ್ಷದಲ್ಲಿ ಭಾರತೀಯ ಸೈನ್ಯವು ಅರುಣಾಚಲ ಪ್ರದೇಶದ ಲೈನ್​ ಆಫ್ ಆಕ್ಚುವಲ್ ಕಂಟ್ರೋಲ್(Line of Actual Control-LAC)​​ ಬಳಿ ಸುಮಾರು 200ಕ್ಕೂ ಹೆಚ್ಚು ಮಂದಿ ಚೀನೀ ಸೈನಿಕರನ್ನು ತಡೆದಿದೆ ಎಂದು ಮೂಲಗಳು ತಿಳಿಸಿವೆ.

    ಕಳೆದ ವಾರ ಚೀನಾದ ಗಡಿಯ ಹತ್ತಿರ ವಾಡಿಕೆಯ ಗಸ್ತು ತಿರುಗುವಾಗ ಭಾರತ ಮತ್ತು ಚೀನೀ ಸೈನಿಕರ ನಡುವೆ ಮುಖಾಮುಖಿ ಸಂಭವಿಸಿದೆ ಎನ್ನಲಾಗಿದೆ. ಭಾರತೀಯ ಸೇನೆಯು ಸುಮಾರು 200 ಮಂದಿ ಚೀನೀ ಸೈನಿಕರನ್ನು ಗಡಿಯ ಸಮೀಪದಲ್ಲಿ ವಶಕ್ಕೆ ಪಡೆದಿದೆ.

    ಕಳೆದ ವಾರ ಬಮ್​ ಲಾ ಮತ್ತು ಯಾಂಗ್ಟ್ಸೆ ಗಡಿರೇಖೆಯ ನಡುವೆ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್​ ಲೈನ್​ (Line of Actual Control-LAC) ಬಳಿ ಭಾರತ ಮತ್ತು ಚೀನಾ ಸೈನ್ಯದ ನಡುವೆ ಸಂಘರ್ಷ ನಡೆದಿತ್ತು. ಮೂಲಗಳ ಪ್ರಕಾರ, ಚೀನಿ ಸೈನಿಕರ ಗುಂಪು ಭಾರತದ ಕಡೆಗಿನ ಎಲ್​ಎಸಿ ಕಡೆಗೆ ನುಗ್ಗಲು ಯತ್ನಿಸಿದರು. ಆಗ ಭಾರತೀಯ ಸೈನಿಕರು ಕೆಲವು ಚೀನಿ ಸೈನಿಕರನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

    ಈ ಸಮಸ್ಯೆಯನ್ನು ಸ್ಥಳೀಯ ಮಿಲಿಟರಿ ಕಮಾಂಡರ್​ಗಳ ಮಟ್ಟದಲ್ಲಿ ಬಗೆಹರಿಸಲಾಯಿತು. ಬಳಿಕ ಚೀನೀ ಸೈನಿಕರನ್ನು ಬಿಡುಗಡೆ ಮಾಡಲಾಯಿತು. ನಂತರ ಪರಿಸ್ಥಿತಿ ತಿಳಿಯಾಯಿತು ಎಂದು ಸರ್ಕಾರದ ಮೂಲಗಳು ನ್ಯೂಸ್​ 18 ಗೆ ತಿಳಿಸಿವೆ.

    ಇದನ್ನೂ ಓದಿ:Lakhimpur Kheri Violence| ಲಖೀಂಪುರ್​ ಖೇರಿ ಹಿಂಸಾಚಾರ; ಪ್ರಕರಣ ತನಿಖೆಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ!

    ಈ ಕುರಿತಾಗಿ ಭಾರತೀಯ ಸೇನೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ ರಕ್ಷಣಾ ಮತ್ತು ಭದ್ರತಾ ಮೂಲಗಳು ನ್ಯೂಸ್​​ 18ಗೆ ನೀಡಿರುವ ಮಾಹಿತಿ ಪ್ರಕಾರ, ಭಾರತೀಯ ರಕ್ಷಣಾ ವ್ಯವಸ್ಥೆಗೆ ಯಾವುದೇ ಹಾನಿಯಾಗಿಲ್ಲ.

    ಭಾರತ-ಚೀನಾ ಗಡಿಯನ್ನು ಔಪಚಾರಿಕವಾಗಿ ಗುರುತಿಸಲಾಗಿಲ್ಲ. ಆದ್ದರಿಂದ ಈ 2 ದೇಶಗಳ ನಡುವೆ LACಯ ಗ್ರಹಿಕೆಯಲ್ಲಿ ವ್ಯತ್ಯಾಸವಿದೆ. ಎರಡು ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ಪ್ರೋಟೋಕಾಲ್​ಗಳನ್ನು ಅನುಸರಿಸುವ ಮೂಲಕ ವಿಭಿನ್ನ ಗ್ರಹಿಕೆಗಳ ಈ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

    ಭಾರತ ಮತ್ತು ಚೀನಾ ಸೈನಿಕರ ಗಸ್ತು ಪಡೆಗಳು ಭೌತಿಕವಾಗಿ ಭೇಟಿಯಾದಗಲೆಲ್ಲಾ, ಎರಡೂ ಕಡೆಯಿಂದ ಒಪ್ಪಿಕೊಂಡ ಸ್ಥಾಪಿತ ಪ್ರೋಟೋಕಾಲ್​ಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ಪರಿಸ್ಥಿತಿಯನ್ನು ನಿರ್ವಹಿಸಲಾಗುತ್ತದೆ.

    ಈ ಪ್ರದೇಶದಲ್ಲಿ ಚೀನಾದ ಆಕ್ರಮಣ ಪ್ರದರ್ಶನ ಹೊಸದೇನಲ್ಲ. 2016ರಲ್ಲಿ 200ಕ್ಕೂ ಹೆಚ್ಚು ಚೀನೀ ಸೈನ್ಯಗಳು ಯಾಂಗ್ಟ್ಸೆಯಲ್ಲಿ LACಯ ಭಾರತೀಯ ಭಾಗದಲ್ಲಿ ಅತಿಕ್ರಮಣ ಮಾಡಿದ್ದವು. ಆದರೆ ಕೆಲವೇ ಗಂಟೆಗಳಲ್ಲಿ ಚೀನೀ ಸೈನ್ಯಗಳು ವಾಪಸ್ ಹೋಗಿದ್ದವು.

    ಇದಲ್ಲದೇ, 2011ರಲ್ಲಿ ಚೀನಾದ ಸೈನಿಕರು ಎಲ್​ಎಸಿಯ ಭಾರತೀಯ ಭಾಗದಲ್ಲಿ 250 ಮೀಟರ್ ಉದ್ದದ ಗೋಡೆಯನ್ನು ಹಾನಿಗೊಳಿಸಿದ್ದರು. ಇದು ನವದೆಹಲಿ ಬೀಜಿಂಗ್​ನೊಂದಿಗೆ ಪ್ರತಿಭಟನೆ ಮಾಡಲು ಕಾರಣವಾಗಿತ್ತು.

    LAC ಬಳಿ ಉತ್ತರಾಂಖಡದ ಬಾರಹೋಟಿ ಸೆಕ್ಟರ್​​ನಲ್ಲಿ ಚೀನಾದ ಸೈನ್ಯವು ಆಕ್ರಮಣಕಾರಿ ಗಸ್ತು ನಡೆಸಿದೆ ಎಂದು ವರದಿಯಾದ ಒಂದು ತಿಂಗಳ ನಂತರ ಇದೇ ರೀತಿಯ ಒಳನುಸುಳುವಿಕೆಯ ಘಟನೆ ಬೆಳಕಿಗೆ ಬಂದಿದೆ. ಎಕನಾಮಿಕ್ ಟೈಮ್ಸ್​ ವರದಿಯ ಪ್ರಕಾರ, ಚೀನಿಯರು ವಾಪಸ್​ ಹೋಗುವ ಮೊದಲು ಸೆಕ್ಟರ್​​ನಲ್ಲಿ ಕೆಲವು ಗಂಟೆ ಕಾಲ ಕಳೆದಿದ್ದರು.
    Published by:Latha CG
    First published: