ಸ್ಪಾನ್ಸರ್​ಶಿಪ್​ ಒಪ್ಪಂದ ಕೈಬಿಟ್ಟರೆ ಬಿಸಿಸಿಐ ವಿರುದ್ಧ ಚೀನಾ ಕಂಪನಿಗಳು ಕೋರ್ಟ್​ ಮೆಟ್ಟಿಲೇರಬಹುದು!

ಪ್ರಮುಖವಾಗಿ ವಿವೋ ದೊಡ್ಡ ಮಟ್ಟದ ಸ್ಪಾನ್ಸರ್​ಶಿಪ್​ ನೀಡುತ್ತಿದೆ. ಪ್ರತಿ ವರ್ಷ 440 ಕೋಟಿ ರೂಪಾಯಿ ಹಣ ಬಿಸಿಸಿಐಗೆ ಸಂದಾಯವಾಗುತ್ತಿದೆ. ಹೀಗಾಗಿ, ವಿವೋ ಜೊತೆಗಿನ ಒಪ್ಪಂದ ರದ್ದು ಅಸಾಧ್ಯವೇ ಆಗಿದೆ.

ಐಪಿಎಲ್​

ಐಪಿಎಲ್​

 • Share this:
  ಭಾರತ ಗಡಿಯಲ್ಲಿ ಡ್ರ್ಯಾಗನ್​ ಉಪಟಳ ಹೆಚ್ಚುತ್ತಿದ್ದಂತೆ ಚೀನಾ ವಸ್ತುಗಳನ್ನು ಬ್ಯಾನ್​ ಮಾಡುವಂತೆ ಆಂದೋಲನ ಆರಂಭಗೊಂಡಿದೆ. ಚೀನಾ ಆ್ಯಪ್​ಗಳನ್ನು ಡೀಲೀಟ್​ ಮಾಡುವಂತೆ ಅನೇಕರು ಕೋರುತ್ತಿದ್ದಾರೆ. ಈ ಮಧ್ಯೆ ವಿವೋ ಐಪಿಎಲ್​ಗೆ ನೀಡಿರುವ ಸ್ಪಾನ್ಸರ್​​ಶಿಪ್​ ರದ್ದು ಮಾಡುವಂತೆ ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಐಸಿಸಿ ನಿಜವಾಗಲೂ ಗಂಭೀರವಾಗಿ ಗಮನ ಹರಿಸಲಿದೆಯೇ? ಇದಕ್ಕೆ ತಜ್ಞರು ಏನಂತಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.

  ಇತ್ತೀಚೆಗೆ ಮಾತನಾಡಿದ್ದ ಬಿಸಿಸಿಐ ಖಜಾಂಚಿ, ವಿವೋ ಜೊತೆ ಮಾಡಿಕೊಂಡಿರುವ ಒಪ್ಪಂದ ರದ್ದು ಮಾಡುವ ಆಲೋಚನೆ ಇಲ್ಲ. ಸ್ಪಾನ್ಸರ್​​ಶಿಪ್​ಗೆ ಚೀನಾ ನೀಡುವ ಹಣ ನೇರವಾಗಿ ಭಾರತಕ್ಕೆ ಬರುತ್ತದೆ. ಇದರಿಂದ ಭಾರತ ಸರ್ಕಾರಕ್ಕೆ ಲಾಭ ಇದೆ ಎಂದು ಹೇಳುವ ಮೂಲಕ ಸ್ಪಾನ್ಸರ್​ಶಿಪ್​ ಕೈ ಬಿಡೋ ವಿಚಾರ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

  ಚೀನಾ ಕಂಪನಿಗಳು ಕೇವಲ ಇಂಡಿಯಾದ ಕ್ರಿಕೆಟ್​ಮೇಲೆ ಮಾತ್ರ ಹೂಡಿಕೆ ಮಾಡಿಲ್ಲ. ಚೀನಾ ಸಂಸ್ಥೆಗಳು ಸ್ಮಾರ್ಟ್​ಫೋನ್​, ಆರ್ಥಿಕ ವಲಯ, ಆನ್​ಲೈನ್​ ಗೇಮಿಂಗ್​ ಸೇರಿ ಅನೇಕ ವಲಯಗಳ ಮೇಲೆ ಹೂಡಿಕೆ ಮಾಡಿವೆ. ಈಗ ಏಕಾಏಕಿ ಚೀನಾ ಸಂಸ್ಥೆಗಿನ ಜೊತೆಗಿನ ಒಪ್ಪಂದ ರದ್ದು ಮಾಡಿದರೆ ಈ ಸಂಸ್ಥೆಗಳು ಕೋರ್ಟ್​ ಮೆಟ್ಟಿಲೇರಿ ತಮಾಗಾದ ನಷ್ಟವನ್ನು ತುಂಬಿಕೊಡುವಂತೆ ಕೇಳಬಹುದಂತೆ. ಏಕೆಂದರೆ ಅವರು ಮಾಡಿಕೊಂಡಿರುವ ಒಪ್ಪಂದಲ್ಲಿಯೇ ಆ ರೀತಿಯ ನಿಯಮಗಳು ಇವೆಯಂತೆ.

  ವಿಚಿತ್ರ ಎಂದರೆ, ಅನೇಕ ಚೀನಾ ಸಂಸ್ಥೆಗಳು ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಬಿಸಿಐ ಜೊತೆ ಒಪ್ಪಂದ ಮಾಡಿಕೊಂಡಿರುವ ಬೈಜುಸ್​, ಪೇಟಿಎಂ, ಡ್ರೀಮ್​ ಇಲವೆನ್​ ಕಂಪನಿಗಳ ಮೇಲೆ ಚೀನಾ ಹೂಡಿಕೆ ದಾರರ ಹಣವಿದೆ.

  ಇನ್ನು, ಪ್ರಮುಖವಾಗಿ ವಿವೋ ದೊಡ್ಡ ಮಟ್ಟದ ಸ್ಪಾನ್ಸರ್​ಶಿಪ್​ ನೀಡುತ್ತಿದೆ. ಪ್ರತಿ ವರ್ಷ 440 ಕೋಟಿ ರೂಪಾಯಿ ಹಣ ಬಿಸಿಸಿಐಗೆ ಸಂದಾಯವಾಗುತ್ತಿದೆ. ಹೀಗಾಗಿ, ವಿವೋ ಜೊತೆಗಿನ ಒಪ್ಪಂದ ರದ್ದು ಅಸಾಧ್ಯವೇ ಆಗಿದೆ.
  First published: