ನಮ್ಮ ಸೈನಿಕರೇ ಚೀನಾ ಮೇಲೆ ದಾಳಿ ನಡೆಸಿದರೇ?; ಮೋದಿಗೆ ಕಾಂಗ್ರೆಸ್ ಖಡಕ್ ಪ್ರಶ್ನೆ

Indo China Conflict: ಭಾರತದ ಗಡಿಯನ್ನು ಯಾರೂ ಅತಿಕ್ರಮಣ ಮಾಡಿಲ್ಲ ಎಂದಮೇಲೆ ನಮ್ಮ ಸೈನಿಕರು ಹುತಾತ್ಮರಾಗಿದ್ದೇಕೆ? ನಮ್ಮ ಸೈನಿಕರೇ ಚೀನಾದ ಪ್ರದೇಶ ಅತಿಕ್ರಮಣ ಮಾಡಿದರೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್-ಪ್ರಧಾನಿ ಮೋದಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್-ಪ್ರಧಾನಿ ಮೋದಿ

  • Share this:
ಬೆಂಗಳೂರು (ಜೂ. 20): ಚೀನಾ ಗಡಿಯ ವಾಸ್ತವತೆ ಬಗ್ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹೇಳಿಕೆಗಳು ಗೊಂದಲ ಮೂಡಿಸುವಂತಿವೆ. ನಮ್ಮ ದೇಶದ ಯಾವ ಭಾಗವನ್ನೂ ಚೀನಾ ಅತಿಕ್ರಮಣ ಮಾಡಿಲ್ಲ, ಅದಕ್ಕೆ ಭಾರತೀಯ ಸೇನೆ ಅವಕಾಶವನ್ನೂ ನೀಡುವುದಿಲ್ಲ ಎಂದು ಸರ್ವಪಕ್ಷ ಸಭೆಯಲ್ಲಿ ಮೋದಿ ಹೇಳಿದ್ದಾರೆ. ಹಾಗಾದರೆ, ನಮ್ಮ ದೇಶದ ಸೈನಿಕರೇ ಚೀನಾ ಮೇಲೆ ದಾಳಿ ನಡೆಸಿದರೇ? ಎಂದು ಪ್ರಧಾನಿ ಮೋದಿಗೆ ಕರ್ನಾಟಕ ಕಾಂಗ್ರೆಸ್ ಪ್ರಶ್ನೆ ಹಾಕಿದೆ.

ಲಡಾಖ್​ ಗಡಿಯಲ್ಲಿರುವ ಗಾಲ್ವಾನ್​ ಕಣಿವೆಯಲ್ಲಿ ಚೀನಾ ಮತ್ತು ಭಾರತದ ನಡುವೆ ನಡೆದ ಸಂಘರ್ಷದ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಇನ್ನೂ ಆತಂಕದ ವಾತಾವರಣ ತಿಳಿಯಾಗಿಲ್ಲ. ಇದರ ನಡುವೆ ನಿನ್ನೆ ಸರ್ವ ಪಕ್ಷಗಳ ನಾಯಕರ ಜೊತೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ ಸಭೆ ನಡೆಸಿದ್ದರು. ಈ ವೇಳೆ, ಭಾರತದ ಯಾವುದೇ ಜಾಗವನ್ನೂ ಚೀನಾ ಅತಿಕ್ರಮಣ ಮಾಡಿಕೊಂಡಿಲ್ಲ, ಇದಕ್ಕೆ ಅವಕಾಶವನ್ನೂ ನೀಡುವುದಿಲ್ಲ. ಚೀನಾದವರು ನಮ್ಮ ದೇಶದೊಳಗೆ ಬಂದು ಕೂತಿಲ್ಲ ಅಥವಾ ನಮ್ಮ ಯಾವುದೇ ಜಾಗ ಅತಿಕ್ರಮಣಗೊಂಡಿಲ್ಲ. ನಮ್ಮ ಜಾಗವವನ್ನು ಯಾರೂ ಕಸಿಯಲು ಸಾಧ್ಯವಿಲ್ಲ ಎಂದು ಮೋದಿ ವಿಪಕ್ಷಗಳಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಇದು ಗುಪ್ತಚರ ಇಲಾಖೆಯ ವೈಫಲ್ಯವೇ?; ಚೀನಾ ಬಿಕ್ಕಟ್ಟಿನ ಕುರಿತು ಮೋದಿಗೆ ಸೋನಿಯಾ ಗಾಂಧಿ ಪ್ರಶ್ನೆ

ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಪ್ರಧಾನಿ ಮೋದಿಯವರೇ, ಚೀನಾದ ಪ್ರಕಾರ ಚೀನಿ ಸೈನಿಕರು ಭಾರತದ ಗಡಿಯನ್ನು ಅತಿಕ್ರಮಿಸಿಲ್ಲ. ಈಗ ಭಾರತದ ಪ್ರಧಾನಿಯಾದ ನೀವೂ ಅದನ್ನೇ ಹೇಳುತ್ತಿದ್ದೀರಿ. ಅಂದರೆ, ಗಡಿಯ ಅತಿಕ್ರಮಣ ಆಗಿದ್ದು ಯಾರಿಂದ? ಎಂದು ಪ್ರಶ್ನಿಸಿದೆ.


ಭಾರತದ ಗಡಿಯನ್ನು ಯಾರೂ ಅತಿಕ್ರಮಣ ಮಾಡಿಲ್ಲ ಎಂದಮೇಲೆ ನಮ್ಮ ಸೈನಿಕರು ಹುತಾತ್ಮರಾಗಿದ್ದೇಕೆ? ನಮ್ಮ ಸೈನಿಕರೇ ಚೀನಾದ ಪ್ರದೇಶ ಅತಿಕ್ರಮಣ ಮಾಡಿದರೇ? ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯ ಮೂಲಕ ಪ್ರಶ್ನೆ ಮಾಡಿದೆ.
First published: