Covid-19 Vaccine: ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ಕೊರೋನಾ ಲಸಿಕೆಗಳು ವ್ಯರ್ಥ; ಕಾರಣವೇನು ಗೊತ್ತಾ?

Coronavirus Vaccine: ಆರೋಗ್ಯ ಅಧಿಕಾರಿಗಳ ಪ್ರಕಾರ 23 ಲಕ್ಷಕ್ಕೂ ಹೆಚ್ಚು ಲಸಿಕೆಗಳು ವ್ಯರ್ಥವಾಗಿದೆ. ಆದಷ್ಟು ಬೇಗ ಭಾರತ ಜನರಿಗೆಲ್ಲರಿಗೂ ಕೊರೋನಾ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದ ಕೇಂದ್ರ ಸರ್ಕಾರವು 6.5% ರಷ್ಟು ಲಸಿಕೆ ವ್ಯರ್ಥವಾಗುವುದನ್ನು ಕಂಡ ನಂತರ ರಾಜ್ಯಗಳಿಗೆ ಕಾರಣ ಕೇಳಿದೆ.

ಕೊರೋನಾ ಲಸಿಕೆ.

ಕೊರೋನಾ ಲಸಿಕೆ.

  • Share this:
ನವದೆಹಲಿ (ಮಾ. 20): ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಭಾರತ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತಿದೆ. ಭಾರತ ಸರ್ಕಾರವು ಇಲ್ಲಿಯವರೆಗೆ 7 ಕೋಟಿ ಕೊರೋನಾ ಲಸಿಕೆಯನ್ನು ರಾಜ್ಯಗಳಿಗೆ ಒದಗಿಸಿದೆ. ಇದರಲ್ಲಿ 3.46 ಕೋಟಿಗೂ ಹೆಚ್ಚು ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಆದರೆ, ಆರೋಗ್ಯ ಅಧಿಕಾರಿಗಳ ಪ್ರಕಾರ ಸುಮಾರು 6.5% ಕೋವಿಡ್ ಲಸಿಕೆಗಳು ವ್ಯರ್ಥವಾಗಿವೆ. ಅಂದರೆ 23 ಲಕ್ಷಕ್ಕೂ ಹೆಚ್ಚು ಲಸಿಕೆಗಳು ವ್ಯರ್ಥವಾಗಿದೆ. ಆದಷ್ಟು ಬೇಗ ಭಾರತ ಜನರಿಗೆಲ್ಲರಿಗೂ ಕೊರೋನಾ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದ ಕೇಂದ್ರ ಸರ್ಕಾರವು 6.5% ರಷ್ಟು ಲಸಿಕೆ ವ್ಯರ್ಥವಾಗುವುದನ್ನು ಕಂಡ ನಂತರ ರಾಜ್ಯಗಳಿಗೆ ಕಾರಣ ಕೇಳಿದೆ.

ಲಸಿಕೆ ವ್ಯರ್ಥವಾಗಲು ಕಾರಣವೇನು?:

ಪ್ರತಿ ಕೋವಿಶೀಲ್ಡ್ ಲಸಿಕೆಯ ಬಾಟಲಿಯು 10 ಡೋಸ್‌ಗಳನ್ನು ಹೊಂದಿದ್ದರೆ, ಕೋವಾಕ್ಸಿನ್ ಲಸಿಕೆಯ ಬಾಟಲಿಯು 20 ಡೋಸ್‌ಗಳನ್ನು ಹೊಂದಿದೆ. ವ್ಯಕ್ತಿಗೆ ಪ್ರತಿ ಡೋಸ್ 0.5 ಮಿ.ಲೀ ಒಮ್ಮೆ ತೆರೆದರೆ ನಾಲ್ಕು ಗಂಟೆಯೊಳಗೆ ಒಂದು ಬಾಟಲಿಯಲ್ಲಿನ 10 ಡೋಸ್‌ಗಳನ್ನು ನೀಡಬೇಕು. ಇಲ್ಲದಿದ್ದರೆ, ಉಳಿದ ಪ್ರಮಾಣವನ್ನು ನಾಶಗೊಳಿಸಬೇಕಾಗುತ್ತದೆ. ಲಸಿಕೆಗಳನ್ನು ತೆರೆದ ನಾಲ್ಕು ಗಂಟೆಗಳಲ್ಲಿ ಬಳಸಬೇಕಾಗಿರುವುದರಿಂದ, ಲಸಿಕೆದಾರರು ಫಲಾನುಭವಿಗಳ ಸಂಖ್ಯೆಯನ್ನು ಸಮನ್ವಯಗೊಳಿಸುವುದು ಅತ್ಯಗತ್ಯವಾಗಿದೆ.

“ನಾವು ಸಂಜೆ 6ರ ಸುಮಾರಿಗೆ ಒಂದು ಬಾಟಲಿಯನ್ನು ತೆರೆದ ನಂತರ ಕೇವಲ ಇಬ್ಬರು ಲಸಿಕೆ ಪಡೆದರೆ, ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುವುದರಿಂದ, ಉಳಿದ ಸರಿಯಾದ ಪ್ರಮಾಣವನ್ನು ನಾಶಮಾಡಬೇಕಾಗುತ್ತದೆ.” ಎಂದು ದೆಹಲಿಯ ಏಕೈಕ ಸರ್ಕಾರಿ ಆಸ್ಪತ್ರೆಯ ಎಲ್‌ಎನ್‌ಜೆಪಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುರೇಶ್ ಕುಮಾರ್ ರವರು ಹೇಳಿದರು.

"ಒಂದು ಡೋಸ್ ಬಾಟಲಿಗಳ ವೆಚ್ಚ ಪರಿಣಾಮಕಾರಿಯಲ್ಲ. ಪ್ಯಾಕೇಜಿಂಗ್ ಮತ್ತು ಸಾರಿಗೆ ಸಮಸ್ಯೆಗಳನ್ನು ಹೊಂದಿದ್ದು, ಈ ಲಸಿಕೆಗಳನ್ನು ಜನಸಾಮಾನ್ಯರಿಗಾಗಿ ತಯಾರಿಸಲಾಗುತ್ತದೆ. ಆದ್ದರಿಂದ, ಚುಚ್ಚುಮದ್ದನ್ನು ಪಡೆಯಲು ನಮಗೆ ಹೆಚ್ಚು ಹೆಚ್ಚು ಜನರು ಬೇಕಾಗಿದ್ದಾರೆ ”ಎಂದು ಡಾ.ಸುರೇಶ್ ಕುಮಾರ್ ರವರು ಹೇಳಿದರು.

ಲಸಿಕೆ ವ್ಯರ್ಥವಾಗುವುದನ್ನು ಹೇಗೆ ನಿಲ್ಲಿಸಬಹುದು?:

ಭಾರತದ ಕೋವಿಡ್ -19 ವ್ಯಾಕ್ಸಿನೇಷನ್ ವು ವಿಶ್ವದ ಎರಡನೇ ಅತಿದೊಡ್ಡ ಇನಾಕ್ಯುಲೇಷನ್ ಕಾರ್ಯಕ್ರಮವಾಗಿದೆ. ಸಂಖ್ಯೆಗಳ ಹೊರತಾಗಿಯೂ, ವ್ಯಾಕ್ಸಿನೇಷನ್ ಡ್ರೈವ್ ಅನ್ನು ಇನ್ನಷ್ಟು ಹೆಚ್ಚಿನ ಜನರಿಗೆ ಲಸಿಕೆ ನೀಡುವುದರ ಮೂಲಕ ವೇಗಗೊಳಿಸುವ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Bangalore Coronavirus: ದಾವಣಗೆರೆಯ ವಿದ್ಯಾರ್ಥಿನಿಯಿಂದ ಬೆಂಗಳೂರಿನ ಹಾಸ್ಟೆಲ್​ನಲ್ಲಿ ಕೊರೋನಾ ಹರಡಿದ್ದು ಹೇಗೆ?

"ವ್ಯಾಕ್ಸಿನೇಷನ್ ಕೇಂದ್ರಗಳಿಗೆ 1 ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುವ ಜನರ ಮಾಹಿತಿಯನ್ನು ಪಡೆಯಬೇಕು. ಇದರಿಂದ ಲಸಿಕೆ ಪಡೆಯಲು ಜನರನ್ನು ಕರೆಯಬಹುದು. ಮಾಹಿತಿ ಪಡೆದ ಪಟ್ಟಿ ಮುಖ್ಯವಾಗಿದೆ. ಆದ್ದರಿಂದ ಲಸಿಕೆಗಳು ತೆರೆದ ನಂತರ ಲಸಿಕೆಗಳು ವ್ಯರ್ಥವಾಗುವುದಿಲ್ಲ. ಈ ಪಟ್ಟಿಯಲ್ಲಿ ಅರ್ಹತೆ ಇಲ್ಲದ ಜನರು ಸಹ ಇರಬಹುದು. ಅದನ್ನು ನಾಶಗೊಳಿಸುವುದಕ್ಕಿಂತ ಲಸಿಕೆ ನೀಡುವುದು ಉತ್ತಮ ”ಎಂದು ಸಾರ್ವಜನಿಕ ಆರೋಗ್ಯ ತಜ್ಞ ದಿಲೀಪ್ ಮಾವಲಂಕರ್ ನ್ಯೂಸ್ 18 ಗೆ ಹೇಳಿದರು.

"ದೇಶದ 60%ರಷ್ಟು ಕೊರೋನಾ ಸಕ್ರಿಯ ಪ್ರಮಾಣವಿದ್ದು, ಹೆಚ್ಚು ಉಲ್ಭಣಗೊಂಡಿರುವ ಜಿಲ್ಲೆಗಳಲ್ಲಿ ಎಲ್ಲಾ ವಯೋಮಾನದ ಜನರಿಗೆ ಲಸಿಕೆಯನ್ನು ನೀಡುವುದರಿಂದ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಿದಂತಾಗುತ್ತದೆ ಮತ್ತು ವ್ಯರ್ಥವಾಗುವುದಿಲ್ಲ ಅಷ್ಟೇ ಅಲ್ಲದೇ ಆದಷ್ಟು ಬೇಗ ಸಾಂಕ್ರಾಮಿಕ ರೋಗವನ್ನು ಹರಡದಂತೆ ತಡೆಗಟ್ಟಬಹುದು" ಎಂದು ದಿಲೀಪ್ ಮಾವಲಂಕರ್ ಹೇಳಿದರು.

45 ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೆ ಕೇಂದ್ರೀಕರಿಸುವ ಬದಲು ಲಸಿಕೆ ನೀಡುವ ಅರ್ಹತಾ ಮಾನದಂಡಗಳನ್ನು ವಿಸ್ತರಿಸುವ ಮೂಲಕ ಪರಿಹರಿಸಬಹುದು ಎಂದು ವೈದ್ಯಕೀಯ ತಜ್ಞರು ಸೂಚಿಸಿದ್ದಾರೆ. ವ್ಯಾಕ್ಸಿನೇಷನ್ ಡ್ರೈವ್ ವಿಸ್ತರಿಸುವ ಯೋಜನೆಯನ್ನು ಇನ್ನೂ ಚರ್ಚಿಸಲಾಗುತ್ತಿದ್ದು, ಸದ್ಯಕ್ಕೆ ವಯೋವೃದ್ಧರಿಗೆ ಲಸಿಕೆ ಹಾಕಬೇಕೆಂದು ಸರ್ಕಾರ ಇಚ್ಛಿಸಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.

ರಾಜ್ಯವಾರು ಲಸಿಕೆಯ ವ್ಯರ್ಥದ ಪ್ರಮಾಣ:

ರಾಷ್ಟ್ರೀಯ ಸರಾಸರಿ 6.5 ಕ್ಕೆ ಹೋಲಿಸಿದರೆ ಹಲವಾರು ರಾಜ್ಯಗಳು ಹೆಚ್ಚಿನ ಮಟ್ಟದ ಲಸಿಕೆಯ ವ್ಯರ್ಥವನ್ನು ದಾಖಲಿಸಿವೆ. ತೆಲಂಗಾಣ ಶೇಕಡಾ 17.5, ಆಂಧ್ರಪ್ರದೇಶ 11.6 ಮತ್ತು ಉತ್ತರ ಪ್ರದೇಶ 9.4 ಶೇಕಡಾ ಪ್ರಮಾಣದಷ್ಟು ಲಸಿಕೆ ವ್ತರ್ಥವಾಗಿವೆ.ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಾಸ್ತವ ಸಭೆಯಲ್ಲಿ ಲಸಿಕೆ ವ್ಯರ್ಥವಾಗುವ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ಲಸಿಕೆಯು ವ್ಯರ್ಥವಾಗದಂತೆ ನೋಡಿಕೊಳ್ಳಬೇಕೆಂದು ಅವರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಳಿಕೊಂಡರು.
Published by:Sushma Chakre
First published: