ನವದೆಹಲಿ (ಅ.25): ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಭಾರತ ಚೀನಾಕ್ಕಿಂತ ದೊಡ್ಡದಾಗಿ ಬೆಳೆಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ವಿಜಯದಶಮಿ ಅಂಗವಾಗಿ ಮಾತನಾಡಿದ ಅವರು, ಚೀನಾ ಆಕ್ರಮಣ ವಿರುದ್ಧ ಕಿಡಿಕಾರಿದರು. ನಾವು ಎಲ್ಲರೊಂದಿಗೆ ಸ್ನೇಹಪರವಾಗಿ ಇರುಲು ಉದ್ದೇಶಿಸಿದ್ದೇವೆ. ಇದು ನಮ್ಮ ಸ್ವಭಾವ. ಆದರೆ, ನಮ್ಮ ಈ ಸ್ವಭಾವವನ್ನು ದೌರ್ಬಲ್ಯವಾಗಿತಪ ತಪ್ಪಾಗಿ ಪರಿಗಣಿಸಲಾಗುತ್ತಿದೆ. ಅಲ್ಲದೇ, ನಮ್ಮನ್ನು ದುರ್ಬಲಗೊಳಿಸುವ ಈ ಪ್ರಯತ್ನ ನಡೆದರೆ ಅದನ್ನ ನಾವ ಸಹಿಸುವುದಿಲ್ಲ ಎಂದು ನೆರೆಯ ರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ನೀಡಿದರು. ಭಾಗವತ್ ಅವರ ಈ ಹೇಳಿಕೆ ವಿರುದ್ಧ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿದೆ ಅಲ್ಲದೇ ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾಗವತ್ ಅವರಿಗೆ ನಿಜ ಸತ್ಯ ತಿಳಿದಿದೆ. ಇದನ್ನು ಎದುರಿಸಲು ಹೆದರುತ್ತಾರೆ. ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿರುವುದು ಸತ್ಯ. ಇದಕ್ಕೆ ಭಾರತ ಸರ್ಕಾರ ಮತ್ತು ಆರ್ಎಸ್ಎಸ್ ಅವಕಾಶ ನೀಡಿದೆ ಎಂದು ಆರೋಪಿಸಿದ್ದಾರೆ.
Deep inside, Mr Bhagwat knows the truth. He is just scared to face it.
The truth is China has taken our land and GOI & RSS have allowed it. pic.twitter.com/20GRNDfEvD
— Rahul Gandhi (@RahulGandhi) October 25, 2020
ಇದನ್ನು ಓದಿ: ಭಾರತದ ಒಂದಿಂಚು ಜಾಗವನ್ನೂ ಸೈನಿಕರು ಬಿಟ್ಟುಕೊಡುವುದಿಲ್ಲ; ಶಸ್ತ್ರ ಪೂಜೆ ಬಳಿಕ ರಾಜನಾಥ್ ಸಿಂಗ್ ಹೇಳಿಕೆ
ಲಡಾಖ್ನಲ್ಲಿ ಚೀನಾದ ದಾಳಿ ಕುರಿತು ರಾಹುಲ್ ಪದೇ ಪದೇ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಅಲ್ಲದೇ ಲಡಾಖ್ನಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಹಾಗೂ ಚೀನಾದ ವಶಪಡಿಸಿಕೊಂಡಿರುವ ಸ್ಥಳಗಳ ಬಗ್ಗೆ ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಕೂಡ ಒತ್ತಾಯಿಸುತ್ತಿದ್ದಾರೆ.
ಈ ಕುರಿತು ಈ ಹಿಂದೆ ಟ್ವೀಟ್ ಮಾಡಿದ ಅವರು ಚೀನಿಯರು ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ. ಅದನ್ನು ಮರಳಿ ಪಡೆಯಲು ಭಾರತ ಸರ್ಕಾರ ನಿಖರವಾಗಿ ಯೋಚಿಸುತ್ತಿದೆಯೇ? ಅಥವಾ ಇದನ್ನು ದೇವರ ಕಾರ್ಯಕ್ಕೆ ಬಿಡಲಾಗಿದೆಯೇ ಎಂದು ಟ್ವೀಟ್ ಮಾಡಿದ್ದರು.
ನಮ್ಮ ಸೈನಿಕರು ಅಲ್ಲಿ ನಿಂತಿರುವಾಗ ಯಾವುದೇ ಆಕ್ರಮಣ ನಡೆದಿಲ್ಲ ಮತ್ತು ಏನು ಸಂಭವಿಸಿಲ್ಲ ಎಂದು ಹೇಗೆ ಹೇಳುತ್ತಾರೆ. ಈ ಕುರಿತು ನಾವು ಧ್ವನಿ ಎತ್ತಬೇಕಾಗುತ್ತದೆ. ಈ ವಿಚಾರ ಕುರಿತು ನರೇಂದ್ರ ಮೋದಿ ಮತ್ತು ಮಾಧ್ಯಮಗಳು ದಿಕ್ಕುತಪ್ಪಿಸುತ್ತಿವೆ. ವಿಷಯಗಳನ್ನು ಅವರು ಮರೆಮಾಚಲು ಸಾಧ್ಯವಿಲ್ಲ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ