ಲಡಾಖ್​ನ ಡೇಮ್​ಚೋಕ್​ನಲ್ಲಿ ಚೀನೀ ಸೈನಿಕ ಸೆರೆ

ಲಡಾಖ್​ನ ಡೇಮ್​ಚೋಕ್​ನಲ್ಲಿ ಭಾರತೀಯ ಸೇನೆಗೆ ಸೆರೆ ಸಿಕ್ಕಿರುವ ಪಿಎಲ್ಎ ಸೈನಿಕ, ಕಳೆದುಹೋದ ತನ್ನ ಜಾನುವಾರನ್ನು ಹುಡುಕಿಕೊಂಡು ಭಾರತದ ಭಾಗಕ್ಕೆ ಬಂದಿದ್ದಾಗಿ ಹೇಳುತ್ತಿರುವುದು ತಿಳಿದುಬಂದಿದೆ.

ಲಡಾಖ್ ಭಾಗದ

ಲಡಾಖ್ ಭಾಗದ

 • News18
 • Last Updated :
 • Share this:
  ನವದೆಹಲಿ(ಅ. 19): ಭಾರತ ಮತ್ತು ಚೀನಾ ಸೈನಿಕರ ಸಂಘರ್ಷದ ಬಳಿಕ ಸೂಕ್ಷ್ಮವಾಗಿರುವ ಲಡಾಖ್​ನಲ್ಲಿ ಇದೀಗ ಚೀನಾದ ಪಿಎಲ್​ಎ ಪಡೆಯ ಒಬ್ಬ ಸೈನಿಕ ಸೆರೆ ಸಿಕ್ಕಿದ್ದಾನೆ. ಲಡಾಖ್​ನ ಡೇಮ್​ಚೋಕ್ ಪ್ರದೇಶದ ಬಳಿ ಪಿಎಲ್​ಎ ಸೈನಿಕನನ್ನ ಸೆರೆ ಹಿಡಿಯಲಾಗಿದೆ ಎಂದು ಭಾರತೀಯ ಸೇನೆ ಹೇಳೀದೆ. ಪಿಎಲ್​ಎ ಸೇನೆಯ 6ನೇ ಇನ್ಫಾಂಟ್ರಿ ಡಿವಿಶನ್​ಗೆ ಸೇರಿದ ಸೈನಿಕ ಆತನಾಗಿರುವುದ ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ. ಆ ಚೀನೀ ಸೈನಿಕನ ಬಳಿ ಮಿಲಿಟರಿ ಮತ್ತು ನಾಗರಿಕ ದಾಖಲೆಗಳು ಸಿಕ್ಕಿದ್ದು, ಆತ ಗೂಢಚಾರಿಕೆಗೆ ಬಂದಿದ್ದನಾ ಎಂಬುದು ಗೊತ್ತಿಲ್ಲ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.

  ಭಾನುವಾರ ರಾತ್ರಿ ಈ ಬೆಳವಣಿಗೆ ಆಗಿದೆ. ಆ ಚೀನೀ ಸೈನಿಕ ಹೇಳಿರುವ ಪ್ರಕಾರ ಆತ ಕಳೆದುಹೋದ ತನ್ನ ಯಾಕ್ (ಹಸು ರೀತಿಯ ಪ್ರಾಣಿ) ಅನ್ನು ಹುಡುಕುತ್ತಾ ಭಾರತದ ಭಾಗಕ್ಕೆ ಬಂದಿದ್ದನಂತೆ. ಮಿಲಿಟರಿ ಮತ್ತು ಸಿವಿಲ್ ಡಾಕ್ಯುಮೆಂಟ್ ಹೊರತುಪಡಿಸಿ ಆತನ ಬಳಿ ಯಾವುದೇ ಆಯುಧ ಕಂಡುಬಂದಿಲ್ಲ. “ಆತ ಪ್ರಮಾದವಶಾತ್ ಭಾರತದ ಭಾಗಕ್ಕೆ ಬಂದಿದ್ದರೆ ಸೇನಾ ನಿಯಮದ ಪ್ರಕಾರ ಅವರನ್ನು ಚೀನಾ ಗಡಿಭಾಗಕ್ಕೆ ವಾಪಸ್ ಕಳುಹಿಸಿಕೊಡುತ್ತೇವೆ” ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ. ಈ ಘಟನೆ ಸಂಬಂಧ ಸದ್ಯದಲ್ಲೇ ಭಾರತೀಯ ಸೇನೆಯಿಂದ ಅಧಿಕೃತ ಹೇಳಿಕೆ ಪ್ರಕಟವಾಗುವ ನಿರೀಕ್ಷೆ ಇದೆ.
  Published by:Vijayasarthy SN
  First published: