ಲಡಾಖ್​ ಗಡಿ ಬಿಕ್ಕಟ್ಟು; ಘರ್ಷಣಾ ಸ್ಥಳದಿಂದ ಸೇನಾಪಡೆ ಹಿಂಪಡೆಯಲು ಆರಂಭಿಸಿದ ಚೀನಾ ​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಡಾಖ್​ನ ಸಂಘರ್ಷದ ಸ್ಥಳದಿಂದ ತನ್ನ ಸೇನೆಯನ್ನು ಮೂರು ಹಂತಗಳಲ್ಲಿ ವಾಪಾಸ್ ಪಡೆಯುವ ಕುರಿತು ಮಾತುಕತೆ ನಡೆದಿತ್ತು. ಭಾರತ-ಚೀನಾ ಸೇನಾ ಕಮಾಂಡರ್​ಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು.

  • Share this:

ಲಡಾಖ್ (ನ. 12): ಲಡಾಖ್​ನಲ್ಲಿ ಉಂಟಾಗಿರುವ ಭಾರತ-ಚೀನಾ ಗಡಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿವೆ. ಈ ನಿಟ್ಟಿನಲ್ಲಿ 6 ತಿಂಗಳ ಬಳಿಕ ಮೊದಲ ಬಾರಿಗೆ ಪೂರ್ವ ಲಡಾಖ್​ ಭಾಗದಿಂದ ಚೀನಾ ಸೇನಾ ಪಡೆಯನ್ನು ಹಿಂಪಡೆಯುವ ಸೂಚನೆ ನೀಡಿತ್ತು. ಲಡಾಖ್​ನ ಸಂಘರ್ಷದ ಸ್ಥಳದಿಂದ ತನ್ನ ಸೇನೆಯನ್ನು ಮೂರು ಹಂತಗಳಲ್ಲಿ ವಾಪಾಸ್ ಪಡೆಯುವ ಕುರಿತು ಮಾತುಕತೆ ನಡೆದಿತ್ತು. ಇದೀಗ ಎರಡೂ ದೇಶಗಳ ಸೇನಾ ಟ್ಯಾಂಕ್​ಗಳನ್ನು ಹಿಂಪಡೆಯಲು ಆರಂಭಿಸಿದೆ. ಭಾರತ-ಚೀನಾ ಸೇನಾ ಕಮಾಂಡರ್​ಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂದು ಸೋಮವಾರ ನ್ಯೂಸ್​18ಗೆ ಉನ್ನತ ಮೂಲಗಳು ತಿಳಿಸಿತ್ತು.


ಭಾರತದ ವ್ಯಾಪ್ತಿಗೆ ಒಳಪಡುವ ಚುಶೂಲ್​ನಲ್ಲಿ ಭಾರತ-ಚೀನಾ ಸೇನೆಗಳ ಕಮಾಂಡರ್​ ಮಟ್ಟದ ಸಭೆ ನಡೆದಿತ್ತು. ಈ ಸಭೆಯಲ್ಲಿ ಮೂರು ಹಂತದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸೇನಾ ಪಡೆಯನ್ನು ವಾಪಾಸ್​ ಕರೆಸಿಕೊಳ್ಳಬೇಕು. ಪಾಂಗಾಂಗ್ ಸರೋವರದ ದಡದಲ್ಲಿ ನಿಯೋಜನೆಗೊಂಡಿರುವ ಸೇನಾ ತುಕಡಿಗಳನ್ನು ಹಿಂಪಡೆಯಬೇಕು. ಇದು ಎರಡೂ ದೇಶಗಳಿಗೂ ಅನ್ವಯವಾಗಲಿದೆ ಎಂಬ ಮಾತುಕತೆಯಾಗಿತ್ತು ಎನ್ನಲಾಗಿದೆ.


ಆ ಮಾತುಕತೆಯ ಮೊದಲ ಹಂತವಾಗಿ ಎರಡೂ ಸೇನೆಗಳು ಲಡಾಖ್​ನ ಘರ್ಷಣಾ ಸ್ಥಳದಲ್ಲಿ ಬೀಡುಬಿಟ್ಟಿದ್ದ ಟ್ಯಾಂಕರ್​ಗಳು, ಸೇನಾ ವಾಹನ, ಫಿರಂಗಿ ಮುಂತಾದ ವಾಹನಗಳನ್ನು ಹಿಂಪಡೆಯಲು ಮುಂದಾಗಿದೆ. ಈ ಒಪ್ಪಂದಕ್ಕೆ ಬೀಜಿಂಗ್ ಮತ್ತು ದೆಹಲಿಯಿಂದ ಒಪ್ಪಿಗೆ ಸಿಕ್ಕ ಬಳಿಕ ಲಡಾಖ್​ ಗಡಿಯಲ್ಲಿ ಎರಡೂ ಸೇನೆಗಳು ಘರ್ಷಣಾ ಸ್ಥಳದಿಂದ ಟ್ಯಾಂಕರ್​ಗಳನ್ನು ಹಿಂಪಡೆಯಲು ನಿರ್ಧರಿಸಿವೆ. ಉಭಯ ಸೇನಾ ಪಡೆಗಳು ಘರ್ಷಣಾ ಸ್ಥಳದಿಂದ ಶಸ್ತ್ರಸಜ್ಜಿತ ಸಿಬ್ಬಂದಿಗಳು, ಟ್ಯಾಂಕ್​ಗಳು, ಶಸ್ತ್ರಸಜ್ಜಿತ ವಾಹನಗಳನ್ನು ವಾಪಾಸ್​ ಪಡೆಯಲು ಭಾರತ-ಚೀನಾ ನಿರ್ಧರಿಸಿತ್ತು.


ಇದನ್ನೂ ಓದಿ: Bangalore Fire Accident: ಬೆಂಗಳೂರು ಕೆಮಿಕಲ್ ಫ್ಯಾಕ್ಟರಿ ಗೋಡೌನ್ ಬೆಂಕಿ ಅವಘಡ; ಮಾಲೀಕ ಸಜ್ಜನ್​ ರಾಜ್ ಬಂಧನ


ಮೂರು ಹಂತದ ಒಪ್ಪಂದದ 2ನೇ ಭಾಗವಾಗಿ ಉಭಯ ಪಡೆಗಳು ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರದಿಂದ ತಮ್ಮ ಸಿಬ್ಬಂದಿಗಳನ್ನು ವಾಪಾಸ್​ ಕರೆಸಿಕೊಳ್ಳಲಿದ್ದಾರೆ. ಚುಶುಲ್ ಹಾಗೂ ರೆಝಾಂಗ್ ಲಾ ಪ್ರದೇಶ ಕೂಡ ಇದರಲ್ಲಿ ಸೇರಿದೆ. ಭಾರತ ಕೂಡ ತನ್ನ ಸೇನಾ ಪಡೆಯನ್ನು ಘರ್ಷಣಾ ಸ್ಥಳದಿಂದ ವಾಪಾಸ್​ ಪಡೆಯಲು ಒಪ್ಪಿಗೆ ಸೂಚಿಸಿದೆ.


3ನೇ ಹಂತವಾಗಿ, ಪ್ಯಾಂಗಾಂಗ್ ಸರೋವರದ ಉತ್ತರ ಭಾಗದಲ್ಲಿ ಉಭಯ ಸೇನೆಗಳು ಒಂದು ದಿನಕ್ಕೆ ಶೇ.30ರಷ್ಟು ಸಿಬ್ಬಂದಿಗಳನ್ನು ವಾಪಾಸ್ ಕರೆಸಿಕೊಳ್ಳಲಿವೆ. ಈ ರೀತಿ ಒಟ್ಟು ಮೂರು ದಿನಗಳ ಕಾಲ ಸೇನಾ ಸಿಬ್ಬಂದಿಗಳು ವಾಪಾಸ್ ತೆರಳಲಿದ್ದಾರೆ. ಭಾರತೀಯ ಪಡೆಗಳು ಧನ್​ಸಿಂಗ್ ಥಾಪಾ ಪೋಸ್ಟ್ ಗೆ ವಾಪಾಸಾಗಲಿವೆ. ಚೀನಾದ ಸೇನಾ ಪಡೆಗಳು ಫಿಂಗರ್ 8ಗೆ ಮರಳಲಿವೆ. ಈಗಾಗಲೇ ಫಿಂಗರ್​ 8ರಿಂದ 4ರ ವ್ಯಾಪ್ತಿಯೊಳಗೆ ಚೀನಾ ತನ್ನ ಬಂಕರ್​ಗಳನ್ನು ನಿರ್ಮಿಸಿದೆ.

top videos
    First published: