ಯುದ್ಧಕ್ಕಾಗಿ ಸನ್ನದ್ಧ ಸ್ಥಿತಿಯಲ್ಲಿ ಇರಲು ಸೇನಾಪಡೆಗಳಿಗೆ ಚೀನಾ ಅಧ್ಯಕ್ಷ ಸೂಚನೆ

ಡ್ರಾಗನ್

ಡ್ರಾಗನ್

ತೈವಾನ್ ಜಲಸಂಧಿಯಲ್ಲಿ ಅಮೆರಿಕದ ಯುದ್ಧನೌಕೆಗಳು ಸಾಗುತ್ತಿರುವ ಬೆನ್ನಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಚಾವೊಝೌ ನಗರದಲ್ಲಿರುವ ನೌಕಾ ನೆಲೆಗೆ ಭೇಟಿ ನೀಡಿ ಸೈನಿಕರಿಗೆ ಯುದ್ಧಕ್ಕೆ ಅಣಿಗೊಳ್ಳುವಂತೆ ಸೂಚಿಸಿರುವುದು ತಿಳಿದುಬಂದಿದೆ.

  • News18
  • 4-MIN READ
  • Last Updated :
  • Share this:

ನವದೆಹಲಿ(ಅ. 15): ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರು ತಮ್ಮ ಸೇನಾಪಡೆಗಳಿಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಿದ್ದಾರೆ. ಸೇನಾಪಡೆಗಳು ಹೈ ಅಲರ್ಟ್ ಆಗಿರಬೇಕು. ನಿಮ್ಮ ಎಲ್ಲಾ ಶಕ್ತಿ ಮತ್ತು ಬುದ್ಧಿಯನ್ನ ಯುದ್ಧದ ತಯಾರಿಗಾಗಿ ಉಪಯೋಗಿಸಿ ಎಂದು ಅಧ್ಯಕ್ಷರು ಸಂದೇಶ ನೀಡಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್​ಹುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಚೀನಾ ಅಧ್ಯಕ್ಷರು ಚಾವೊಝೋ ನಗರದಲ್ಲಿರುವ ಪಿಎಲ್​ಎಯ ನೌಕಾಪಡೆಯನ್ನು ನಿನ್ನೆ ಭೇಟಿ ಮಾಡಿದ ವೇಳೆ ಮಾತನಾಡುತ್ತಾ, “ಚೀನಾಗೆ ಸಂಪೂರ್ಣ ನಿಷ್ಠರಾಗಿ, ಪರಿಶುದ್ಧರಾಗಿ, ವಿಶ್ವಾಸಾರ್ಹತೆಯಿಂದ” ಇರಬೇಕೆಂದು ಕರೆ ನೀಡಿದ್ದಾರೆ. ಯುದ್ಧಕ್ಕೆ ಸನ್ನದ್ಧರಾಗಲು ಸೇನಾ ಪಡೆಗೆ ಅವರು ಸೂಚಿಸಿದರಾದರೂ ಭಾರತದ ಹೆಸರನ್ನು ಅವರು ಹೇಳಲಿಲ್ಲ.


ಲಡಾಖ್​ನ ಗಡಿ ವಿವಾದ ತಾರಕಕ್ಕೇರುತ್ತಿರುವ ಹೊತ್ತಲ್ಲೇ ಅವರ ಈ ಮಾತುಗಳು ಭಾರತದ ಬಗ್ಗೆಯೇ ಆಡಿದ ಮಾತುಗಳೆಂದು ಭಾಸವಾಗಬಹುದು. ಆದರೆ, ತೈವಾನ್ ಜಲಸಂಧಿಯ (Taiwan Strait) ಮಾರ್ಗದಲ್ಲಿ ಅಮೆರಿಕದ ಯುದ್ಧನೌಕೆಗಳು ಸಾಗುತ್ತಿವೆ. ಇದು ಚೀನಾವನ್ನು ರೊಚ್ಚಿಗೆಬ್ಬಿಸಿದೆ. ಇದೇ ಕಾರಣಕ್ಕೆ ಅವರು ಪಿಎಲ್​ಎ ನೌಕಾ ವಿಭಾಗದ ಸೇನಾ ಪಡೆಗಳನ್ನ ಭೇಟಿ ಮಾಡಿ ಯುದ್ಧಕ್ಕೆ ಸನ್ನದ್ಧರಾಗುವಂತೆ ಹೇಳಿರುವ ಸಾಧ್ಯತೆ ದಟ್ಟವಾಗಿದೆ.


ಇದನ್ನೂ ಓದಿ: ಕಾಶ್ಮೀರದ ವಿಶೇಷ ಸ್ಥಾನಮಾನಕ್ಕಾಗಿ ಒಗ್ಗೂಡಿದ ಪ್ರಾದೇಶಿಕ ಪಕ್ಷಗಳು; ಗುಪ್ಕರ್ ಘೋಷಣೆ ಮತ್ತೆ ಸಕ್ರಿಯ

top videos


    ಚೀನಾ ಭಾರತದ ಗಡಿ ಭಾಗದಲ್ಲಷ್ಟೇ ಅಲ್ಲ, ನೆರೆಯ ಇತರ ದೇಶಗಳ ಜೊತೆಯೂ ಕಿತಾಪತಿ ಮಾಡುತ್ತಲೇ ಇದೆ. ಹಾಗೆಯೇ, ಸೌತ್ ಚೀನಾ ಸಾಗರ ಪ್ರದೇಶದಲ್ಲಿ ಸಂಪೂರ್ಣ ಹಕ್ಕು ಚಲಾಯಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಇದು ಈ ಸಾಗರ ವ್ಯಾಪ್ತಿಯ ಹಲವು ದೇಶಗಳಿಗೆ ಇರಿಸುಮುರುಸು ತಂದಿದೆ. ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಕ್ವಾಡ್ ಗುಂಪು ರಚಿಸಿ ಇಂಡೋಪೆಸಿಫಿಕ್ ಸಾಗರದಲ್ಲಿ ಚೀನಾದ ಪ್ರಾಬಲ್ಯ ತಗ್ಗಿಸಲು ಪ್ರಯತ್ನಿಸುತ್ತಿವೆ. ಇದು ಚೀನಾವನ್ನು ಹತಾಶೆಗೆ ತಳ್ಳಿರುವ ಸಾಧ್ಯತೆಯೂ ಇದೆ.

    First published: