‘ನಮ್ಮ ಸೈನಿಕರು ಲಡಾಖ್ನಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುತ್ತಿದ್ದಾರೆ ಎನ್ನುವುದು ಸುಳ್ಳು‘ - ಚೀನಾ ಸ್ಪಷ್ಟನೆ
ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಹಾಗೇ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗುತ್ತಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದೇಳಲಾಗುತ್ತಿತ್ತು
news18-kannada Updated:September 15, 2020, 5:39 PM IST

ಪ್ರಾತಿನಿಧಿಕ ಚಿತ್ರ.
- News18 Kannada
- Last Updated: September 15, 2020, 5:39 PM IST
ನವದೆಹಲಿ(ಸೆ.15): ಲಡಾಖ್ನ ಎಲ್ಎಸಿಯಲ್ಲಿ ಭಾರತದ ಭೂಭಾಗವನ್ನ ಅತಿಕ್ರಮಿಸುವ ಸಲುವಾಗಿ ಚೀನೀ ಸೈನಿಕರು ಆಪ್ಟಿಕಲ್ ಫೈಬರ್ ಕೇಬಲ್ಗಳನ್ನ ಅಳವಡಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ನಮ್ಮ ಸೈನಿಕರು ಪೂರ್ವ ಲಡಾಖ್ನಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವ ಮೂಲಕ ಭಾರತದ ಭೂಭಾಗವನ್ನು ಅತಿಕ್ರಮ ಮಾಡಲು ಯತ್ನಿಸುತ್ತಿದ್ಧಾರೆ ಎಂಬ ವರದಿ ಸುಳ್ಳು. ಚೀನಿ ಸೈನಿಕರು ಗಡಿಯಲ್ಲಿನ ಸಾಂಪ್ರದಾಯಿಕ ಜೋಡಣೆಗಳನ್ನು ಮಾನ್ಯ ಮಾಡುತ್ತಿದ್ದೇವೆ. ಅಲ್ಲಿನ ನಿಯಮಗಳನ್ನು ಗೌರವಿಸುತ್ತಿದ್ದೇವೆ. ಯಾವುದೇ ಒಪ್ಪಂದ ಉಲ್ಲಂಘಿಸದೇ ಭಾರತ ಸೇನೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ ಎಂಬುದಾಗಿ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.
ಈ ಮುನ್ನ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಹಾಗೇ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗುತ್ತಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದೇಳಲಾಗುತ್ತಿತ್ತು. ಭಾರತದ ಉತ್ತರ ಭಾಗದ ಎರಡೂ ಕಡೆಯ ಗಡಿಭಾಗದಲ್ಲಿ ನೆರೆ ದೇಶಗಳ ಅಟ್ಟಹಾಸ ಹೆಚ್ಚುತ್ತಲೇ ಇದೆ. ಎಲ್ಒಸಿಯಲ್ಲಿ ಪಾಕಿಸ್ತಾನ ಪದೇಪದೇ ಕದನವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ಕಳೆದ 17 ವರ್ಷಗಳಲ್ಲೇ ಇಲ್ಲಿ ಪಾಕಿಸ್ತಾನ ಈಗ ಅತಿಹೆಚ್ಚು ಕಿತಾಪತಿ ಮಾಡುತ್ತಿದೆ. ಇನ್ನೊಂದೆಡೆ ಚೀನಾ ದೇಶ ಲಡಾಖ್ನ ಎಲ್ಎಸಿಯಲ್ಲಿ ಭಾರತದ ಭೂಭಾಗವನ್ನೇ ಅತಿಕ್ರಮಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈಗ ಲಡಾಖ್ನಲ್ಲಿ ಚೀನೀ ಸೈನಿಕರು ಆಪ್ಟಿಕಲ್ ಫೈಬರ್ ಕೇಬಲ್ಗಳನ್ನ ಅಳವಡಿಸುತ್ತಿರುವ ಸುದ್ದಿ ಕೇಳಿಬಂದಿದೆ. ಇವೆಲ್ಲವನ್ನೂ ಗಮನಿಸಿದರೆ ಭಾರತ ಏಕಕಾಲದಲ್ಲಿ ಇಬ್ಬರು ಶತ್ರುಗಳ ಜೊತೆ ಯುದ್ಧ ಮಾಡಬೇಕಾಗಿಬರಬಹುದು ಎನ್ನಲಾಗುತ್ತಿತ್ತು.
ಜನವರಿ 1ರಿಂದ ಸೆಪ್ಟೆಂಬರ್ 7ರವರೆಗೆ ಪಾಕಿಸ್ತಾನ ಸೇನೆಯಿಂದ 3,186 ಬಾರಿ ಯುದ್ಧವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿವೆ. ಹಾಗೆಯೇ, ಇದೇ ಅವಧಿಯಲ್ಲಿ 242 ಬಾರಿ ಗಡಿಭಾಗದಲ್ಲಿ ಗುಂಡಿನ ಚಕಮಕಿಯ ಘಟನೆಗಳು ನಡೆದಿವೆ.
ಇನ್ನು, ಲಡಾಖ್ನ ಪಾಂಗಾಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಚೀನೀ ಸೈನಿಕರು ಫೈಬರ್ ಕೇಬಲ್ ಅಳವಡಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ. ಇದೇ ಭಾಗದಲ್ಲೇ ಇತ್ತೀಚೆಗೆ ಭಾರತದ ಭಾಗವನ್ನು ಅತಿಕ್ರಮಿಸಲು ಚೀನಾ ಮಾಡಿದ ಪ್ರಯತ್ನವನ್ನು ಭಾರತದ ಸೈನಿಕರು ವಿಫಲಗೊಳಿಸಿದ್ದರು. ಈಗ ಸರೋವರದ ಉತ್ತರ ಮತ್ತು ದಕ್ಷಿಣ ಭಾಗದ ಅನೇಕ ಮಹತ್ವದ ಎತ್ತರದ ಜಾಗಗಳು ಭಾರತದ ವಶದಲ್ಲಿವೆ. ಆದರೂ ಚೀನಾ ಸೇನೆ ತನ್ನ ಹಠಮಾರಿತನ ಹೆಚ್ಚು ಮಾಡುತ್ತಿರುವಂತಿದೆ. ಫೈಬರ್ ಆಪ್ಟಿಕ್ ಕೇಬಲ್ ಅಳವಡಿಸುವುದರಿಂದ ಚೀನಾದ ಸೇನಾ ನೆಲೆಗಳ ಸಂವಹನಕ್ಕೆ ಅನುಕೂಲ ಮಾಡಿಕೊಡುತ್ತದೆ. ಪಾಂಗಾಂಗ್ ಸರೋವರದ ಉತ್ತರ ಭಾಗದಲ್ಲೂ ಚೀನಾ ಕೇಬಲ್ ಹಾಕುತ್ತಿದ್ದುದನ್ನು ಭಾರತದ ಗುಪ್ತಚರ ಸಂಸ್ಥೆಗಳು ಕಳೆದ ತಿಂಗಳಷ್ಟೇ ಪತ್ತೆ ಹಚ್ಚಿದ್ದವು.
ಇದನ್ನೂ ಓದಿ: ಅತ್ತ ಪಾಕಿಸ್ತಾನ, ಇತ್ತ ಚೀನಾ; ದ್ವಿಮುಖಿ ಯುದ್ಧದ ಸಾಧ್ಯತೆಯಲ್ಲಿ ಭಾರತಈ ಮಧ್ಯೆ ಪೂರ್ವ ಲಡಾಖ್ನಲ್ಲಿ ಚೀನಾದ ಅತಿಕ್ರಮಣ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಆದರೆ ಚೀನಾ ಸೈನಿಕರು ಹಿಂಸಾತ್ಮಕ ನಡೆಯ ಮೂಲಕ ಈ ಹಿಂದಿನ ಎಲ್ಲ ಒಪ್ಪಂದಗಳನ್ನೂ ಉಲ್ಲಂಘಿಸಿದ್ದಾರೆ. ಯಾವುದೇ ಸಂದರ್ಭ ಬಂದರೂ ಅದನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ. ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವ ಕಾಪಾಡಲು ಗಡಿಗಳನ್ನು ಕಾಯುತ್ತಿರುವ ಸಶಸ್ತ್ರಪಡೆಯೊಂದಿಗೆ ನಾವೆಲ್ಲರೂ ನಿಲ್ಲಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಮುನ್ನ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಹಾಗೇ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗುತ್ತಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದೇಳಲಾಗುತ್ತಿತ್ತು.