ಬೆಂಗಳೂರು (ಜೂ.18): ಚೀನಾ ಭಾರತ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಎರಡೂ ರಾಷ್ಟ್ರಗಳ ನಡುವೆ ತಿಕ್ಕಾಟ ಆರಂಭವಾಗಿದೆ. ಈ ಮಧ್ಯೆ ಚೀನಾ ವಸ್ತುಗಳನ್ನು ಬ್ಯಾನ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಈಗ 4ಜಿ ಅಪ್ಗ್ರೇಡಷನ್ಗೆ ಚೀನಾ ವಸ್ತುಗಳನ್ನು ಬಳಕೆ ಮಾಡದಂತೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಸದ್ಯದ ನೆಟ್ವರ್ಕ್ಅನ್ನು 3ಜಿಯಿಂದ 4ಜಿ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿತ್ತು. ಈಗ ಹೊಸದಾಗಿ ಮತ್ತೆ ಟೆಂಡರ್ ಕರೆಯುವಂತೆ ಹೇಳಲಾಗಿದೆ. ಮಹಾರಾಷ್ಟ್ರ ಟೆಲಿಫೋನ್ ನಿಗಮಕ್ಕೂ ಇದೇ ರೀತಿಯ ಸೂಚನೆ ನೀಡಲಾಗಿದೆ.
ಇನ್ನು, ಖಾಸಗಿ ಮೊಬೈಲ್ ಸರ್ವಿಸ್ ಆಪರೇಟರ್ಗಳ ಬಳಿ ಮುಂದಿನ ದಿನಗಳಲ್ಲಿ ಚೀನಾ ವಸ್ತುಗಳ ಮೇಲೆ ಅವಲಂಬಿತವಾಗುವುದನ್ನು ಹಂತ ಹಂತವಾಗಿ ನಿಲ್ಲಿಸಿ ಎಂದು ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ: ಭಾರತ-ಚೀನಾ ಶಾಂತಿಯುತ ಮಾತುಕತೆಗೆ ನಮ್ಮ ಬೆಂಬಲವಿದೆ- ಅಮೆರಿಕ
ನೆಟ್ವರ್ಕ್ ಸೆಕ್ಯುರಿಟಿ ಐಟಮ್ಗಳನ್ನು ಚೀನಾ ವಸ್ತುಗಳಿಂದ ಸಿದ್ಧಪಡಿಸುತ್ತಿರುವ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದರು. ಇಲ್ಲಿ ಚೀನಾ ವಸ್ತುಗಳನ್ನು ಬಳಕೆ ಮಾಡುವುದರಿಂದ ಭದ್ರತೆಗೆ ಸಮಸ್ಯೆ ಎದುರಾಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು.
ಭಾರತ ಮತ್ತು ಚೀನಾ ನಡುವೆ ಸೋಮವಾರ ರಾತ್ರಿ ಘರ್ಷಣೆ ಏರ್ಪಟ್ಟಿದ್ದು, ಲಡಾಕ್ನ ಗಾಲ್ವನ್ ಕಣಿವೆ ಭಾಗದಲ್ಲಿ ಎರಡು ದೇಶಗಳ ಸೇನೆಯ ನಡುವೆ ಗುಂಡಿನ ಕಾಳಕ ನಡೆದಿತ್ತು. ಗುಂಡಿನ ಚಕಮಕಿ ವೇಳೆ ಭಾರತದ ಸುಮಾರು 20 ಸೈನಿಕರು ಹುತಾತ್ಮರಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ