Boycott China: ದೆಹಲಿಯಲ್ಲಿನ್ನು ಚೀನಾ ಪ್ರಜೆಗಳಿಗೆ ಹೋಟೆಲ್​ ರೂಂ ಸಿಗೋದಿಲ್ಲ!

India-China Conflict: ಗಡಿಯಲ್ಲಿ ತಗಾದೆ ತೆಗೆದು 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿರುವ ಚೀನಾದ ಆ್ಯಪ್​ಗಳು, ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ.

ಚೀನಾ ವಿರುದ್ಧ ಪ್ರತಿಭಟನೆ

ಚೀನಾ ವಿರುದ್ಧ ಪ್ರತಿಭಟನೆ

 • Share this:
  ನವದೆಹಲಿ (ಜೂ. 25): ಭಾರತದೊಂದಿಗೆ ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ಸಂಘರ್ಷ ನಡೆಸಿದ್ದರಿಂದ ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದರಿಂದ ಚೀನಾ ಪ್ರಜೆಗಳಿಗೆ ದೆಹಲಿಯ ಹೋಟೆಲ್​ಗಳಲ್ಲಿ ರೂಂ ನೀಡದಿರಲು ನಿರ್ಧರಿಸಲಾಗಿದೆ. ಹೀಗಾಗಿ, ಇನ್ನುಮುಂದೆ ದೆಹಲಿಯ ಹೋಟೆಲ್ ಹಾಗೂ ಗೆಸ್ಟ್​ ಹೌಸ್​ಗಳಲ್ಲಿ ಚೀನಾ ದೇಶದ ಪ್ರಜೆಗಳಿಗೆ ರೂಂ ಸಿಗುವುದಿಲ್ಲ.

  ಚೀನಾ ದೇಶದ ಯಾವ ಅತಿಥಿಗಳಿಗೂ ದೆಹಲಿಯ ಹೋಟೆಲ್ ಮತ್ತು ಗೆಸ್ಟ್​ ಹೌಸ್​ಗಳಲ್ಲಿ ರೂಂ ನೀಡುವುದಿಲ್ಲ ಎಂದು ದೆಹಲಿ ಹೋಟೆಲ್ ಮತ್ತು ಗೆಸ್ಟ್​ ಹೌಸ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ. ಅಖಿಲ ಭಾರತ ವ್ಯಾಪಾರಿ ಒಕ್ಕೂಟ ಚೀನಾ ದೇಶದ ಉತ್ಪನ್ನಗಳ ಮೇಲೆ ನಿಷೇಧ ಹೇರಲು ನಿರ್ಧರಿಸಿದ್ದರಿಂದ ಪ್ರೇರೇಪಿತಗೊಂಡು ಹೋಟೆಲ್ ಮತ್ತು ಗೆಸ್ಟ್​ ಹೌಸ್ ಮಾಲೀಕರ ಸಂಘ ಈ ನಿರ್ಧಾರ ಮಾಡಿದೆ.

  ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕಾಶ್ಮೀರದ ಸೋಪೋರ್​ನಲ್ಲಿ ಎನ್​ಕೌಂಟರ್ ಕಾರ್ಯಾಚರಣೆ ಆರಂಭ

  ಗಡಿಯಲ್ಲಿ ತಗಾದೆ ತೆಗೆದು 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿರುವ ಚೀನಾದ ಆ್ಯಪ್​ಗಳು, ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ. ಇದರ ಭಾಗವಾಗಿ ದೆಹಲಿಯಲ್ಲಿರುವ 3,000ಕ್ಕೂ ಅಧಿಕ ಹೋಟೆಲ್​ಗಳು ಮತ್ತು ಗೆಸ್ಟ್​ ಹೌಸ್​ಗಳು ಕೂಡ ಚೀನೀ ಪ್ರವಾಸಿಗರಿಗೆ ನಿಷೇಧ ಹೇರಿವೆ.
  First published: