Border Tensions: ಚೀನಾ ಹಾದಿಯಲ್ಲೇ ಸಾಗಿದ ಪಾಕಿಸ್ತಾನ; ಗಡಿಯಲ್ಲಿ 20 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ!

Kashmir: ಪಾಕ್​ ಮೂಲದ ಉಗ್ರ ಸಂಘಟನೆ ಜೊತೆ ಚೀನಾ ಮಾತುಕತೆ ನಡೆಸುತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ಹೇಳಿದೆ. ಇದು ನಿಜವೇ ಆದಲ್ಲಿ, ಗಡಿಯಲ್ಲಿ ಭಾರತಕ್ಕೆ ಉಪಟಳ ನೀಡಲು ಚೀನಾ-ಪಾಕ್​ ಒಂದಾಗಿರುವುದು ಸ್ಪಷ್ಟವಾಗುತ್ತದೆ.     

ಭಾರತೀಯ ಸೇನೆ

ಭಾರತೀಯ ಸೇನೆ

 • Share this:
  ನವದೆಹಲಿ (ಜು.01): ಗಡಿ ಭಾಗದಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ ಮಾಡುವ ಮೂಲಕ ಭಾರತದ ವಿರುದ್ಧ ಚೀನಾ ಕತ್ತಿ ಮಸೆಯುತ್ತಿದೆ. ಈಗ ಪಾಕಿಸ್ತಾನ ಕೂಡ ಚೀನಾ ಹಾದಿಯಲ್ಲೇ ಸಾಗಿದ್ದು, ಭಾರತದ ಗಡಿ ಭಾಗದಲ್ಲಿ 20 ಸಾವಿರ ಹೆಚ್ಚುವರಿ ಸೈನಿಕರನ್ನು ನಿಯೋಜನೆ ಮಾಡಿದೆ.

  ಗಡಿ ಭಾಗದಲ್ಲಿ ಚೀನಾ-ಭಾರತ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ 20 ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಭಾರತ ನೀಡಿದ ತಿರುಗೇಟಿಗೆ 43ಕ್ಕೂ ಹೆಚ್ಚು ಚೀನಾ ಸೈನಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಘಟನೆ ನಂತರ ಎರಡೂ ದೇಶಗಳ ನಡುವೆ ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು. ಈ ಬೆನ್ನಲ್ಲೇ ಪಾಕ್​ ಕೂಡ ಕುತಂತ್ರ ನಡೆಸಲು ಮುಂದಾಗಿದೆ ಎನ್ನಲಾಗಿದೆ.

  ಪಾಕ್​ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್​-ಬಾಲ್ಟಿಸ್ತಾನ್​ ಭಾಗದಲ್ಲಿ ಚೀನಾ ಸೇನೆ ಹೆಚ್ಚಿಸಿದೆ ಎನ್ನಲಾಗಿದೆ. ಇನ್ನು, ಈ ಭಾಗದಲ್ಲಿ ಪಾಕಿಸ್ತಾನದ ರೇಡಾರ್​ಗಳು ಸಂಪೂರ್ಣವಾಗಿ ಆಕ್ಟಿವ್​ ಆಗಿ ಕಾರ್ಯ ನಿರ್ವಹಿಸುತ್ತಿವೆ.

  ಪಾಕ್​ ಉಗ್ರರ ಜೊತೆ ಚೀನಾ ಮಾತುಕತೆ!:

  ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಲು ಪಾಕಿಸ್ತಾನ ನೇರ ಕಾರಣ. ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನ-ಮಾನ rದ್ದು ಮಾಡಿದಾಗಿನಿಂದಲೂ ಪಾಕಿಸ್ತಾನ ಕೆಂಡಾಮಂಡಲವಾಗಿದೆ. ಈ ಮಧ್ಯೆ ಜಮ್ಮ-ಕಾಶ್ಮೀರದಲ್ಲಿ ಶಾಂತಿ ಕದಡಲು ಚೀನಾ ಕುಮ್ಮಕ್ಕು ಕೊಡಲು ಮುಂದಾಗಿದೆ.

  ಸದ್ಯ, ಪಾಕ್​ ಮೂಲದ ಉಗ್ರ ಸಂಘಟನೆ ಜೊತೆ ಚೀನಾ ಮಾತುಕತೆ ನಡೆಸುತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ಹೇಳಿದೆ. ಇದು ನಿಜವೇ ಆದಲ್ಲಿ, ಗಡಿಯಲ್ಲಿ ಭಾರತಕ್ಕೆ ಉಪಟಳ ನೀಡಲು ಚೀನಾ-ಪಾಕ್​ ಒಂದಾಗಿರುವುದು ಸ್ಪಷ್ಟವಾಗುತ್ತದೆ.
  First published: