HOME » NEWS » India-china » AMIT SHAH HITS BACK WITH VIDEO OF SOLDIERS FATHER AS RAHUL GANDHI ACCUSES PM OF CEDING TERRITORY TO CHINA RMD

ಸೈನಿಕನ ತಂದೆ ಮಾತನಾಡಿದ ವಿಡಿಯೋ ಹಂಚಿಕೊಳ್ಳುವ ಮೂಲಕ ರಾಹುಲ್​ ಗಾಂಧಿಗೆ ತಿರುಗೇಟು ನೀಡಿದ ಅಮಿತ್​ ಶಾ

ಚೀನಾ ಗಡಿ ತಂಟೆ ವಿಚಾರದಲ್ಲಿ ರಾಹುಲ್​ ಗಾಂಧಿ ನಿರಂತರವಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಅಮಿತ್​ ಶಾ ಉತ್ತರ ನೀಡಿದ್ದಾರೆ. ಚೀನಾ ದಾಳಿ ವೇಳೆ ಗಾಯಗೊಂಡ ಯೋಧನ ತಂದೆ ಹಂಚಿಕೊಂಡ ವಿಡಿಯೋ ಮೂಲಕ ರಾಹುಲ್​ ಗಾಂಧಿಗೆ ಅವರು ತಿರುಗೇಟು ನೀಡಿದ್ದಾರೆ.

news18-kannada
Updated:June 20, 2020, 11:31 AM IST
ಸೈನಿಕನ ತಂದೆ ಮಾತನಾಡಿದ ವಿಡಿಯೋ ಹಂಚಿಕೊಳ್ಳುವ ಮೂಲಕ ರಾಹುಲ್​ ಗಾಂಧಿಗೆ ತಿರುಗೇಟು ನೀಡಿದ ಅಮಿತ್​ ಶಾ
ಅಮಿತ್​ ಶಾ
  • Share this:
ನವದೆಹಲಿ(ಜೂ.20): ಭಾರತದ ಯಾವುದೇ ಜಾಗವನ್ನೂ ಚೀನಾ ಅತಿಕ್ರಮಣ ಮಾಡಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದರು. ಇದಾದ ಬೆನ್ನಲ್ಲೇ ಟ್ವೀಟ್​ ಮಾಡಿದ್ದ ಕಾಂಗ್ರೆಸ್​ ಹಿರಿಯ ನಾಯಕ ರಾಹುಲ್​ ಗಾಂಧಿ, ಮೋದಿ ವಿರುದ್ಧ ಹರಿಹಾಯ್ದಿದ್ದರು. ಈ ವಿಚಾರವಾಗಿ ಸೈನಿಕನ ತಂದೆ ಮಾತನಾಡಿರುವ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಾಹುಲ್​ ಗಾಂಧಿಗೆ ತಿರುಗೇಟು ನೀಡಿದ್ದಾರೆ.

“ಗಡಿಯಲ್ಲಿ ಚೀನಾ ಮಾಡಿದ ಕೆಲಸಕ್ಕೆ ಇಡೀ ದೇಶವೇ ಬೇಸರ ಹಾಗೂ ಆಕ್ರೋಶ ಹೊರಹಾಕಿದೆ. ಚೀನಾದವರು ನಮ್ಮ ದೇಶದೊಳಗೆ ಬಂದು ಕೂತಿಲ್ಲ ಅಥವಾ ನಮ್ಮ ಯಾವುದೇ ಜಾಗ ಅತಿಕ್ರಮಣಗೊಂಡಿಲ್ಲ,” ಎಂದು ಮೋದಿ ಹೇಳಿದ್ದರು. ಇದನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ್ದ ರಾಹುಲ್​ ಗಾಂಧಿ, “ಅದು ಚೀನಾ ಪ್ರದೇಶ ಆಗಿದ್ದರೆ  ಅಲ್ಲಿಗೆ ನಮ್ಮ ಸೈನಿಕರನ್ನು ಕಳುಹಿಸಿಸಿ ಅವರು ಹುತಾತ್ಮರಾಗುವಂತೆ ಮಾಡಿದ್ದೇಕೆ? ನಿಜವಾಗಿಯೂ ಭಾರತದ ಸೈನಿಕರು ಹುತಾತ್ಮರಾದದ್ದು ಎಲ್ಲಿ?,” ಎಂಬ ಖಡಕ್ ಪ್ರಶ್ನೆಗಳನ್ನು ಕೇಳಿದ್ದಾರೆ.
ಇದಕ್ಕೆ ಅಮಿತ್​ ಶಾ ಖಡಕ್​ ಉತ್ತರ ನೀಡಿದ್ದಾರೆ. ಚೀನಾ ದಾಳಿ ವೇಳೆ ಗಾಯಗೊಂಡ ಯೋಧನ ತಂದೆ ಹಂಚಿಕೊಂಡ ವಿಡಿಯೋ ಮೂಲಕ ರಾಹುಲ್​ ಗಾಂಧಿಗೆ ಉತ್ತರ ನೀಡಿದ್ದಾರೆ.

“ಭಾರತ ಚೀನಾ ಸೇನೆಯನ್ನು ಎದುರಿಸಲು ಸಶಕ್ತವಾಗಿದೆ. ರಾಹುಲ್​ ಗಾಂಧಿ ಇದರಲ್ಲಿ ರಾಜಕೀಯ ತರಬಾರದು. ನನ್ನ ಮಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಮುಂದೆಯೂ ಆತ ತನ್ನ ಸೇವೆ ಮುಂದುವರಿಸಿದ್ದಾನೆ,” ಎಂದು ಸೈನಿಕನ ತಂದೆ ಹೇಳಿಕೊಂಡಿದ್ದರು.ಈ ವಿಡಿಯೋ ಉಲ್ಲೇಖಿಸಿ ಟ್ವೀಟ್​ ಮಾಡಿರುವ ಅಮಿತ್​ ಶಾ, “ಸೇನಾ ಸಿಬ್ಬಂದಿ ತಂದೆ ಮಾತನಾಡುವ ಮೂಲಕ ರಾಹುಲ್​ ಗಾಂಧಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಈಗ ಇಡೀ ದೇಶವೇ ಒಂದಾಗಿದೆ. ಇಂಥ ಸಂದರ್ಭದಲ್ಲಿ ರಾಹುಲ್​ ಗಾಂಧಿ ರಾಜಕೀಯದಿಂದ ಹೊರ ಬಂದು, ದೇಶದ ಜೊತೆ ನಿಲ್ಲಬೇಕಿದೆ,” ಎಂದಿದ್ದಾರೆ.
First published: June 20, 2020, 11:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories