ದೆಹಲಿಯಲ್ಲಿ ಇಂದು 1,192 ಕೊರೋನಾ ಪ್ರಕರಣಗಳು ಪತ್ತೆ; 23 ಮಂದಿ ಬಲಿ

ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 41 ಸಾವಿರದ ಗಡಿ‌ ದಾಟಿದ್ದು, 41,585ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 13,78,105 ಜನ ಮಾತ್ರ. ದೇಶದಲ್ಲಿ ಇನ್ನೂ 6,07,384 ಜನರಲ್ಲಿ ಕೊರೋನಾ ಸೋಂಕು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ನವದೆಹಲಿ: ಜಗತ್ತಿನ ಜಂಘಾಬಲವನ್ನೇ ಅಡಗಿಸಿರುವ ಕೊರೋನಾ ಮಹಾಮಾರಿ ರಾಷ್ಟ್ರ ರಾಜಧಾನಿ ದೆಹಲಿಯನ್ನೂ ದಿಗಿಲಿಗೀಡುಮಾಡಿದೆ. ದೆಹಲಿಯಲ್ಲಿ ಶುಕ್ರವಾರ 1,192 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ‌.

ಪ್ರತಿದಿನ ಸಂಜೆ ಕಳೆದ 24 ಗಂಟೆಯಲ್ಲಿ ಹೊಸದಾಗಿ ಕಂಡುಬರುವ ಕೊರೋನಾ ಪ್ರಕರಣಗಳನ್ನು ದೆಹಲಿ ಸರ್ಕಾರ ಬಿಡುಗಡೆ ಮಾಡುತ್ತಿದೆ‌. ಅದೇ ರೀತಿ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಹೊಸದಾಗಿ 1,192 ಕೊರೋನಾ ಪಾಸಿಟಿವ್​​ ಕೇಸುಗಳು ಪತ್ತೆಯಾಗಿವೆ. ಇದರಿಂದ ದೆಹಲಿಯ ಕೊರೋನಾ ಪೀಡಿತರ ಸಂಖ್ಯೆ 1,42,723ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ ಶುಕ್ರವಾರ‌ 23 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 4,082ಕ್ಕೆ ಏರಿಕೆಯಾಗಿದೆ. ಜುಲೈ ತಿಂಗಳ ಆರಂಭದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ಕಂಡು ಬರುತ್ತಿದ್ದವು. ಆಗಸ್ಟ್ ತಿಂಗಳಲ್ಲಿ ಪ್ರತಿದಿನ 1 ಸಾವಿರಕ್ಕೂ ಕಡಿಮೆ ಪ್ರಕರಣಗಳು ಪತ್ತೆಯಾಗತೊಡಗಿವೆ. ಶುಕ್ರವಾರ 1,108 ಜನ ಸೇರಿದಂತೆ ಈವರೆಗೆ 1,28,232 ಜನರು ಗುಣಮುಖರಾಗಿದ್ದಾರೆ. 10,409 ಕೊರೊನಾ ಪ್ರಕರಣಗಳು ಆ್ಯಕ್ಟೀವ್ ಇವೆ ಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ‌.

ಇದನ್ನು ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನಲ್ಲೇ ಮಗ ಯತೀಂದ್ರಗೂ ತಗುಲಿದ ಕೊರೋನಾ ಸೋಂಕು

ಇದಲ್ಲದೆ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಾ 20 ಲಕ್ಷ ದಾಟಿದೆ. ಆಗಸ್ಟ್ 6ರಂದು 62,538 ಪ್ರಕರಣಗಳು ಕಂಡುಬಂದಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 20,27,074ಕ್ಕೆ ಏರಿಕೆಯಾಗಿದೆ. 886 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 41 ಸಾವಿರದ ಗಡಿ‌ ದಾಟಿದ್ದು, 41,585ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 13,78,105 ಜನ ಮಾತ್ರ. ದೇಶದಲ್ಲಿ ಇನ್ನೂ 6,07,384 ಜನರಲ್ಲಿ ಕೊರೋನಾ ಸೋಂಕು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.
Published by:HR Ramesh
First published: