Hubballi News: ಹುಬ್ಬಳ್ಳಿಯಲ್ಲಿ ಕ್ಯಾನ್ಸರ್‌ ವಿನ್ನರ್ಸ್‌ ಟ್ಯಾಲೆಂಟ್‌ ಶೋ! ಖರೇ ಅಂದ್ರೂ ಇವರು ಬದುಕಿಗೆ ಸ್ಪೂರ್ತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Cancer Survivors Talent Show: ಈ ವಿಶೇಷ ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವವರೂ ಪಾಲ್ಗೊಳ್ಳಬಹುದಾಗಿದೆ. ಚಿಕಿತ್ಸೆ ಪಡೆಯುವ ವೈದ್ಯರ ಸಲಹೆ ಮೇರೆಗೆ, ಕುಟುಂಬದ ಓರ್ವ ಸದಸ್ಯರೊಂದಿಗೆ ಆಗಮಿಸಬಹುದಾಗಿದೆ.

  • News18 Kannada
  • 4-MIN READ
  • Last Updated :
  • Hubli-Dharwad (Hubli), India
  • Share this:

    ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿದ್ದು, ಸಾಮಾನ್ಯ ಕಾಯಿಲೆಯಂತಾಗಿದೆ. ಕ್ಯಾನ್ಸರ್‌ ಬಾಧಿತರು ಕ್ಯಾನ್ಸರನ್ನು ಸಾಮಾನ್ಯ ಕಾಯಿಲೆಯಂತೆ ಒಪ್ಪಿಕೊಂಡು, ಧೈರ್ಯದಿಂದ, ಸಕಾರಾತ್ಮಕವಾಗಿ ಎದುರಿಸಿದರೆ ಅದರಿಂದ ಗುಣಮುಖರಾಗಲು ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ಆತ್ಮವಿಶ್ವಾಸ ತುಂಬಿ, ಬದುಕಿನ ಭರವಸೆಯನ್ನು ಮೂಡಿಸಲು ವಿಶೇಷ ಕಾರ್ಯಕ್ರಮವೊಂದನ್ನು (Cancer Survivors Talent Show) ಹಮ್ಮಿಕೊಳ್ಳಲಾಗಿದೆ. ವೀರ್‌ ಪ್ರತಿಭಾ –2023 ಎಂಬ ವಿಶೇಷ ಕಾರ್ಯಕ್ರಮವನ್ನು ಫೆಬ್ರವರಿ 4ರಂದು ಹುಬ್ಬಳ್ಳಿಯಲ್ಲಿ (Hubballi News) ಮಧ್ಯಾಹ್ನ 4 ಗಂಟೆಗೆ ಆಯೋಜಿಸಲಾಗಿದೆ.


    ಚಿಲ್‌ ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ ಆಶ್ರಯದಲ್ಲಿ ಮಜೇಥಿಯಾ ಫೌಂಡೇಷನ್‌ ಹಾಸ್ಪೈಸ್‌, ಎಚ್‌ಸಿಜಿ–ಎನ್‌ಎಂಆರ್‌ ಹುಬ್ಬಳ್ಳಿ, ಎಂಡ್ಲ್ಯೂಬಿ ಗ್ರೂಪ್‌ನ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ. ಈ ವಿಶಿಷ್ಟ ಕಾರ್ಯಕ್ರಮ ಹುಬ್ಬಳ್ಳಿಯ ದಿ ಹಂಸ್‌ ಹೋಟೆಲ್‌ ಸಭಾಂಗಣದಲ್ಲಿ ನಡೆಯಲಿದೆ.


    ಕ್ಯಾನ್ಸರ್ ಗೆದ್ದ 20 ಮಹಿಳೆಯರು ಭಾಗಿ
    ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಕ್ಯಾನ್ಸರ್‌ ಗೆದ್ದ 20 ಮಹಿಳೆಯರು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ಕ್ಯಾನ್ಸರ್‌ ಹೇಗೆ ಗೆದ್ದರು? ಕ್ಯಾನ್ಸರ್‌ನಿಂದ ಹೊರಬಂದ ಮೇಲೆ ಹೇಗೆ ಸ್ಫೂರ್ತಿದಾಯಕ ಬದುಕು ನಡೆಸುತ್ತಿದ್ದಾರೆ? ಸಾಮಾಜಿಕವಾಗಿ ಹೇಗೆ ತೊಡಗಿಕೊಂಡಿದ್ದಾರೆ? ಎಂಬುದರ ಜೊತೆಗೆ ಅವರಲ್ಲಿರುವ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.


    ಗೆದ್ದವರಿಗೆ ಅತ್ಯುತ್ತಮ ಬಹುಮಾನ
    ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನ ₹ 15 ಸಾವಿರ, ಮೊದಲ ರನ್ನರ್‌ ಅಪ್‌ ₹ 10 ಸಾವಿರ, ದ್ವಿತೀಯ ರನ್ನರ್‌ ಅಪ್‌ ₹ 5 ಸಾವಿರ ನಗದು ನೀಡಲಾಗುತ್ತದೆ, ಎಲ್ಲ ಸ್ಪರ್ಧಿಗಳಿಗೂ ₹2 ಸಾವಿರ ನಗದು, ಮೊಮೆಂಟೊ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ. jಒತೆಗೆ ಹುಬ್ಬಳ್ಳಿಯ ಎರಡು ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ 30 ಮಂದಿ ನರ್ಸ್‌ ಹಾಗೂ ಆಯಾ ಅವರನ್ನು ಗೌರವಿಸಲಾಗುವುದು.


    ಇದನ್ನೂ ಓದಿ: Nirmala Sitharaman Saree: ಇಳಕಲ್ ರೇಷ್ಮೆ ಸೀರೆಗೆ ನವಲಗುಂದದ ಕಸೂತಿ, ಕರುನಾಡಿನ ಸೀರೆಯುಟ್ಟು ಬಜೆಟ್ ಮಂಡಿಸಿದ ನಿರ್ಮಲಾ




    ಇದೇ ಸಂದರ್ಭದಲ್ಲಿ ಕ್ಯಾನ್ಸರ್ ಗೆದ್ದು ಬಂದು ಸ್ಪೂರ್ತಿದಾಯಕ ಜೀವನ ನಡೆಸುತ್ತಿರುವ ಕೃಷ್ಣಿ ಶಿರೂರ ಅವರ ಉರಿ ಬಾನ ಬೆಳದಿಂಗಳು ಕೃತಿಯ ಇಂಗ್ಲಿಷ್‌ ಅನುವಾದ ಕೃತಿ ಬಿಡುಗಡೆಗೊಳ್ಳಲಿದೆ.  Second Chance ಹೆಸರಿನ ಈ ಕೃತಿಯನ್ನು ರಶ್ಮಿ ಎಸ್‌.ಎನ್‌ ಅವರು ಅನುವಾದ ಮಾಡಿದ್ದಾರೆ.


    ಇದನ್ನೂ ಓದಿ: Hubballi Vande Bharat Train: 5 ಗಂಟೆಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ- ಧಾರವಾಡ!


    ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರೂ ಭಾಗವಹಿಸಬಹುದು
    ಈ ವಿಶೇಷ ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವವರೂ ಪಾಲ್ಗೊಳ್ಳಬಹುದಾಗಿದೆ. ಚಿಕಿತ್ಸೆ ಪಡೆಯುವ ವೈದ್ಯರ ಸಲಹೆ ಮೇರೆಗೆ, ಕುಟುಂಬದ ಓರ್ವ ಸದಸ್ಯರೊಂದಿಗೆ ಆಗಮಿಸಬಹುದಾಗಿದೆ. ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮಕ್ಕೆ ಬರಲು ಇಚ್ಛಿಸುವ ಕ್ಯಾನ್ಸರ್‌ ರೋಗಿಗಳು ಶಾರದಾ ಜಿ.ಎಸ್‌ (7829782903) ಅಥವಾ ಶ್ವೇತಾ ಡೊಲಂಕಿಯಾ (9886313818) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: