• Home
 • »
 • News
 • »
 • hubballi-dharwad
 • »
 • Street Dog Problem: ಬೀದಿ ನಾಯಿ ಸಮಸ್ಯೆಗೆ ಸರಳ ಉಪಾಯ; ಧಾರವಾಡ ನಾಗರಿಕರ ಸಖತ್ ಐಡಿಯಾ

Street Dog Problem: ಬೀದಿ ನಾಯಿ ಸಮಸ್ಯೆಗೆ ಸರಳ ಉಪಾಯ; ಧಾರವಾಡ ನಾಗರಿಕರ ಸಖತ್ ಐಡಿಯಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಉಪಾಯವನ್ನು ಮೊದಲು ಕಂಡುಹಿಡಿದದ್ದು ಯಾರಂತ ಖಚಿತವಾಗಿ ತಿಳಿದಿರದಿದ್ದರೂ ಸಹ, ಈ ಐಡಿಯಾ ಸಖತ್ ಆಗಿ ವರ್ಕೌಟ್ ಆಗಿದೆಯಂತೆ.

 • News18 Kannada
 • Last Updated :
 • Dharwad, India
 • Share this:

  ಧಾರವಾಡ: ಬೀದಿ ನಾಯಿಗಳ ಕಾಟದಿಂದ ಬೇಸತ್ತಿದ್ದೀರೇ? ಯಾವ ಪ್ರಯತ್ನಕ್ಕೂ ಬೀದಿ ನಾಯಿಗಳು (Street Dog Problem) ಮಣಿಯುತ್ತಿಲ್ಲವೇ? ಮನೆ ಗೇಟ್ ಬಳಿಯೇ ಕಾದು ಕೂರುತ್ತಿವೆಯೇ? ಇನ್ಮುಂದೆ ನಿಮಗೆ ಬೀದಿ ನಾಯಿಗಳ ಸಮಸ್ಯೆ ನಿಮಗೆ ಇರಲ್ಲ ಬಿಡಿ, ಹೌದು, ಧಾರವಾಡದ (Dharwad News) ಜನರು ಅತ್ಯಂತ ಸುಲಭವಾಗಿ ಬೀದಿ ನಾಯಿಗಳ ಸಮಸ್ಯೆಗೆ ಸರಳ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ. ಧಾರವಾಡದಲ್ಲಿ ನಾಯಿ ಕಾಟ ಭಾರೀ ಹೆಚ್ಚಾಗಿತ್ತು. ಬೀದಿನಾಯಿಗಳ ಕಾಟಕ್ಕೆ ವಿದ್ಯಾಕಾಶಿ ಧಾರವಾಡ ಜನ ಬೇಸತ್ತಿದ್ರು. ಆದ್ರೆ ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎಂಬ ಗಾದೆಮಾತಿನಂತೆ, ಒಂದು ಚಿಕ್ಕ ಐಡಿಯಾವೊಂದು ಧಾರವಾಡದ ಮಂದಿಗೆ ಬೀದಿನಾಯಿ ಸಮಸ್ಯೆಯನ್ನು (Street Dog Problem Solution) ದೂರ ಮಾಡಿದೆ.


  ಹೌದು, ಧಾರವಾಡದ ಜನರು ಬೀದಿ ನಾಯಿಗಳ ಸಮಸ್ಯೆಗೆ ಕಂಡುಕೊಂಡಿರೋ ಆ ಸುಲಭ ಉಪಾಯ ಕೆಂಪು ನೀರು!. ಆಶ್ಚರ್ಯವಾದ್ರೂ ಇದು ನಿಜ, ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ಕೆಂಪು ಬಣ್ಣದ ನೀರನ್ನು ಹಾಕಿ ಅದನ್ನು ಗೇಟ್ ಬಳಿ ತೂಗಿಸಿಬಿಟ್ಟರಾಯ್ತು, ಬೀದಿನಾಯಿಗಳ ಸುಳಿವೇ ಇಲ್ಲ!


  ಈ ಉಪಾಯ ಕಂಡುಹಿಡಿದವರಾದ್ರೂ ಯಾರು?
  ಈ ಉಪಾಯವನ್ನು ಮೊದಲು ಕಂಡುಹಿಡಿದದ್ದು ಯಾರಂತ ಖಚಿತವಾಗಿ ತಿಳಿದಿರದಿದ್ದರೂ ಸಹ, ಈ ಐಡಿಯಾ ಸಖತ್ ಆಗಿ ವರ್ಕೌಟ್ ಆಗಿದೆಯಂತೆ. ಗೇಟ್ ಒಂದೇ ಅಲ್ಲದೇ, ಮನೆ ಹತ್ತಿರದ ಗಿಡ, ಮರಗಳಿಗೂ ನೀರಿಗೆ ಕೆಂಪು ಬಣ್ಣ ಬೆರೆಸಿ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿ ಕಟ್ಟಿ ಇಡಲಾಗುತ್ತದೆ.


  ಇದನ್ನೂ ಓದಿ: Kalaburagi Fair: ಭಕ್ತಿಯ ಶಕ್ತಿಗೆ ಸರಪಳಿಯೇ ತುಂಡು ತುಂಡಾಯ್ತು! ಇದು ಕಲಬುರಗಿ ವೀರಭದ್ರೇಶ್ವರ ರಥೋತ್ಸವದ ಝಲಕ್


  ಹತ್ತಿರಕ್ಕೂ ಸುಳಿಯಲ್ಲ ಬೀದಿ ನಾಯಿಗಳು!
  ಈ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿರುವ ಕೆಂಪು ಬಣ್ಣದ ನೀರನ್ನು ನೋಡಿ ಬೀದಿನಾಯಿಗಳು ಹೆದರುತ್ತವಂತೆ. ಅಲ್ಲದೇ ಕೆಂಪು ಬಣ್ಣದ ನೀರು ಇರುವ ಬಾಟಲಿ ತೂಗುಹಾಕಲಾದ ಪರಿಸರದ ಹತ್ತಿರಕ್ಕೂ ಸುಳಿಯುವುದಿಲ್ಲವಂತೆ.


  ಇದನ್ನೂ ಓದಿ: Hubballi News: ಉತ್ತರ ಕರ್ನಾಟಕಕ್ಕೆ ಉತ್ತರ ಭಾರತ ಇನ್ನಷ್ಟು ಹತ್ತಿರ! ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಆರಂಭ


  ಒಟ್ಟಾರೆ ಯಾವ ಪುಣ್ಯಾತ್ಮರು ಕಂಡುಹಿಡಿದದ್ದೋ ಏನೋ, ಬೀದಿನಾಯಿಗಳ ಸಮಸ್ಯೆಯಂತೂ ಈ ಪ್ಲಾಸ್ಟಿಕ್ ಬಾಟಲಿಯಲ್ಲಿ ಕೆಂಪು ಬಣ್ಣದ ನೀರನ್ನು ಹಾಕಿ ಅದನ್ನು ಗೇಟ್ ಬಳಿ ತೂಗಿಸಿಬಿಡುವ ಐಡಿಯಾದಿಂದ ದೂರವಾಗಿದೆ ಎಂದು ಧಾರವಾಡದ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: