Dharwad Krishna Temple: ಏಕಾಂತದಲ್ಲಿರುವ ಈ ಕೃಷ್ಣನನ್ನು ನೋಡೋದೇ ಒಂದು ಭಾಗ್ಯ!

ಸಾಮಾನ್ಯವಾಗಿ ದೇಗುಲಗಳಲ್ಲಿ ಪ್ರಶಾಂತತೆ, ನಿಶ್ಯಬ್ಧವನ್ನು ಬಯಸೋ ಭಕ್ತರೇ ಜಾಸ್ತಿ. ಅಂತಹ ಭಕ್ತರಿಗೆ, ಅದರಲ್ಲೂ ಕೃಷ್ಣ ಪ್ರಿಯರಿಗೆ ಧಾರವಾಡದ ಈ ದೇಗುಲ ಅತ್ಯಂತ ಇಷ್ಟವಾಗುವ ಕ್ಷೇತ್ರ ಆಗೋದರಲ್ಲಿ ಸಂಶಯವಿಲ್ಲ.

ಶ್ರೀಕೃಷ್ಣ

"ಶ್ರೀಕೃಷ್ಣ"

 • Share this:
  ಧಾರವಾಡದ ಕಲಘಟಗಿಯಲ್ಲಿರುವ ಇದು ಅಷ್ಟೇನೂ ಭವ್ಯವಲ್ಲದ ಪುರಾತನವಲ್ಲದ ಸಾದಾ ಸೀದಾ ದೇಗುಲ. ನಮಗೆ ಗೌಜಿ-ಗದ್ದಲ ರಹಿತವಾದ ಪರಿಸರದ ನಡುವೆ ಹಸಿರು ಬೆಟ್ಟಗಳ ಸೀಳಿಕೊಂಡು ಹರಿಯುವ ಬೇಡ್ತಿ ನದಿಯ (Bedti River)  ಪಕ್ಕದಲ್ಲೇ ಸಿಗುತ್ತದೆ. ಈಗ ಸುಮಾರು ಹನ್ನೆರೆಡು ವರ್ಷದ ಹಿಂದೆ ಗುಜರಾತಿನ ವ್ಯಾಪಾರಿಯಾಗಿದ್ದ ಚೌಧರಿ ಮನೆತನದವರು ಈ ದೇಗುಲದ ನಿರ್ಮಾತೃಗಳು, ಸದ್ಯ ಜೋಶಿ ಮನೆತನದಿಂದ ನಿತ್ಯ ಪೂಜೆಗೊಳ್ಳುವ ಕೃಷ್ಣನ ಮಂದಿರದಲ್ಲಿ ಕೃಷ್ಣನ ಗೋ ಸಮೇತ ಮೂರ್ತಿ (Krishna Temple In Dharwad) ಇದ್ದು ಕಪ್ಪು ಶಿಲೆಯಿಂದ ಮಾಡಿದ ಬಾಲಗೋಪಾಲ ಇವನಾಗಿದ್ದಾನೆ. ಕೈಯಲ್ಲಿ ಕೊಳಲು ಹಿಡಿದು ಗೋವಿಗೆ ಒರಗಿದ ಕೃಷ್ಣ ಇವನಾಗಿದ್ದು ತಲೆಯ ಮೇಲಿನ ಪೇಟಾ ಸೇರಿದಂತೆ ವಿಗ್ರಹ ಲಕ್ಷಣವೆಲ್ಲ ಉತ್ತರ ಭಾರತದ ಶಿಲ್ಪವನ್ನು ಹೋಲುತ್ತದೆ.

  ಏಕಾಂತದ ತಾಣ
  ಹೊರಗಡೆ ಪ್ರಾಂಗಣದಲ್ಲಿ ಗಣಪತಿ ಹಾಗೂ ನವಗ್ರಹದ ಸಾನಿಧ್ಯವಿದೆ. ಬೆಲವಂತರದ ಸೇತುವೆಯಿಂದ ಈ ದೇವಾಲಯವನ್ನು ನೋಡುವುದೇ ಸೌಭಾಗ್ಯ, ನಯನ ಮನೋಹರವಾದ ಬೇಡ್ತಿ ನದಿಯ ಪಕ್ಕದಲ್ಲಿ ಅಷ್ಟೇ ಶಾಂತವಾಗಿರುವ ಸುಂದರ ಮೂರ್ತಿಯನ್ನು ನೀವು ಕಣ್ತುಂಬಿಕೊಳ್ಳಬಹುದು.

  ಇದನ್ನೂ ಓದಿ: Uttara Kannada: ಶಾರದಜ್ಜಿಯ ಹಾಡು ಕೇಳಿ! ಇವರು ಹೊನ್ನಾವರದ ಜಾನಪದ ಗಾನಶಾರದೆ

  ಶ್ರೀ ದೇವರಿಗೆ ಭಕ್ತ ಸಮೂಹ ದೊಡ್ಡದಾಗಿದ್ದರೂ ಸಹ ಇದು ಯಾವಾಗಲೂ ಕೂಡ ಅತೀ ಏಕಾಂತ ಕೊಡಬಲ್ಲ ಧ್ಯಾನಕ್ಕೆ ಯೋಗ್ಯವಾದ ಶಾಂತ ದೇಗುಲ. ಎಂತಹುದೇ ದಿನಗಳಲ್ಲಿ ಕೂಡ ಇಲ್ಲಿ ಗದ್ದಲದ ವಾತಾವರಣವಿರುವುದಿಲ್ಲ, ಪ್ರಮುಖ ವೈಷ್ಣವ ದಿನಗಳೊಡನೆ, ಕಾರ್ತಿಕವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

  Shri Krishna Temple Kalaghatagi
  ಶ್ರೀಕೃಷ್ಣ ದೇವಸ್ಥಾನ ಕಲಘಟಗಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಇದನ್ನೂ ಓದಿ: Ghatiana Dwivarna: ಬಿಳಿ ಮೈ, ಕಾಲು ಚಾಕ್ಲೇಟ್ ಬಣ್ಣ! ಅಪರೂಪದ ಘಾಟಿಯಾನ ದ್ವಿವರ್ಣ ಏಡಿಯ ವಿಡಿಯೋ ನೋಡಿ

  ಕೃಷ್ಣನ ಕಾಣಲು ಹೀಗೆ ಬನ್ನಿ
  ಈ ಸ್ಥಳಕ್ಕೆ ಬರಬೇಕೆಂದರೆ ಬಸ್ಸುಗಳಿವೆ. ಕಲಘಟಗಿಯಿಂದ ಕೆಲವೇ ಕಿ.ಮೀ ಅಂತರದಲ್ಲಿ ಈ ದೇವಸ್ಥಾನವಿದ್ದು ರಸ್ತೆ ಮಾರ್ಗಗಳೂ ಸುಸ್ಥಿತಿಯಲ್ಲಿವೆ. ಒಟ್ಟಿನಲ್ಲಿ ಶ್ರೀಕೃಷ್ಣನ ಪುಣ್ಯಧಾಮ, ಶಾಂತ ದೇಗುಲವನ್ನು ಹಚ್ಚ ಹಸಿರ ಪ್ರಕೃತಿಯ ನಡುವೆ ಕಣ್ತುಂಬಿಕೊಳ್ಳುವುದೇ ಸೌಭಾಗ್ಯ.

  ವರದಿ: ಎ.ಬಿ.ನಿಖಿಲ್, ಮುಂಡಗೋಡು
  Published by:guruganesh bhat
  First published: