ಹುಬ್ಬಳ್ಳಿ: ಪಕೋಡಾ, ಸಮೋಸಾ, ಚಿಕನ್ ಮಂಚೂರಿ, ಡ್ರೈ ಚಿಕನ್, ಮಟನ್ ಕೈಮಾ, ಸಾಬುದಾನಿ ವಡಾ, ಉದ್ದಿನ ವಡಾ, ಲಸ್ಸಿ, ಶರಬತ್ ಹೀಗೆ ಮಾರ್ಕೆಟ್ ತುಂಬಾ ಜ್ಯೂಸ್ , ತಿಂಡಿಗಳದ್ದೇ (Mohabbat Sharbat) ಹವಾ! ಕಡಿಮೆ ರೇಟು, ಸಖತ್ ಟೇಸ್ಟಿಯಾಗಿರೋ ಈ ತಿಂಡಿಗಳಿಗೆ ಈ ಸೀಸನ್ನಲ್ಲಂತೂ ಸಖತ್ ಡಿಮ್ಯಾಂಡ್. ಹೌದು, ರಂಜಾನ್ ತಿಂಗಳಿಗಾಗಿ (Ramadan 2023) ತೆರೆದ ಸ್ಪೆಷಲ್ ಸ್ಟಾಲ್ಗಳ ಸ್ಪೆಷಲ್ ತಿನಿಸುಗಳಿವು.
ಯೆಸ್, ಸದ್ಯ ರಂಜಾನ್ ಉಪವಾಸ ಕೊನೆ ವಾರದಲ್ಲಿದೆ. ಒಂದು ತಿಂಗಳ ಕಾಲ ಪ್ರತಿದಿನ ಸರಿ ಸುಮಾರು 13 ರಿಂದ 14 ಗಂಟೆ ಕಾಲ ಉಪವಾಸವಿರುವವರಿಗೆ ಇಂತಹ ತಿಂಡಿ, ಜ್ಯೂಸ್ಗಳು ಹೆಚ್ಚು ಎನರ್ಜಿ ನೀಡಬಲ್ಲದು. ಜೊತೆಗೆ ಲಘು ಉಪಹಾರಗಳೇ ಹೆಚ್ಚಾಗಿ ನೆಚ್ಚಿಕೊಳ್ಳುವುದರಿಂದ ಈ ತಿನಿಸು, ಜ್ಯೂಸ್ಗಳು ಹೆಚ್ಚು ಹೆಚ್ಚಾಗಿ ಮಾರಾಟವಾಗುತ್ತೆ.
ಇದನ್ನೂ ಓದಿ: Viral Photo: ಈ ಅಭ್ಯರ್ಥಿ ನಿಮಗೆ ಮುಖ ತೋರಿಸದೇ ಪ್ರಚಾರ ಮಾಡ್ತಾರೆ!
ಹಾಗಾಗಿಯೇ ಹುಬ್ಬಳ್ಳಿಯ ವಿಕಾಸ ನಗರದ ಮಾರ್ಕೆಟ್ನಲ್ಲಿ ಈ ವಿಶೇಷ ರಂಜಾನ್ ಸ್ಪೆಷಲ್ ಸ್ಟಾಲ್ಗಳು ಕಂಡು ಬರುತ್ತವೆ. ಮುಂಜಾನೆ 5 ರಿಂದ ಸಾಯಂಕಾಲ ಆರೂವರೆ ಗಂಟೆ ದಾಟುವ ತನಕವೂ ಉಪವಾಸವಿರುವವರಿಗೆ ಈ ತಿಂಡಿ, ತಿನಿಸುಗಳೆಲ್ಲವೂ ಉಲ್ಲಾಸ ನೀಡುತ್ತೆ.
ಮೊಹಬ್ಬತ್ ಶರಬತ್
ಇನ್ನು ಮೊಹಬ್ಬತ್ ಶರಬತ್ ಈ ಬಾರಿ ಮಾರ್ಕೆಟ್ನ ಕೇಂದ್ರಬಿಂದು ಆಗಿದೆ. ಜೊತೆಗೆ ಮ್ಯಾಂಗೋ ಶರಬತ್, ಅನಾನಸ್ ಶರಬತ್ಗಳು ಇಲ್ಲಿವೆ. ಗುಲಾಬಿ ಬಣ್ಣದ ಮೊಹಬತ್ ಶರಬತ್ ಅಂತೂ ದಿಲ್ಲಿಯ ಗಲ್ಲಿ, ಆಗ್ರಾದ ಪೇಟೆಗಳನ್ನ ನೆನಪಿಸುತ್ತೆ.
ಇದನ್ನೂ ಓದಿ: Budget Record: ಸಾವಿರ ಕೋಟಿಯನ್ನು ಮೀರಿದ ಕರ್ನಾಟಕದ ಈ ನಗರದ ಬಜೆಟ್
ಚೂರು ಸ್ಟ್ರಾಬೆರಿ, ಜಾಸ್ತಿ ಕಲ್ಲಂಗಡಿ ಹಾಗೂ ಹಾಲು, ಸಕ್ಕರೆ ಜೊತೆ ಈ ಮೊಹಬತ್ ಶರಬತ್ ರೆಡಿ ಆಗ್ತವೆ. ಒಟ್ಟಿನಲ್ಲಿ ಉಪವಾಸದ ಸಮಯದಲ್ಲಿ ಮುಸ್ಲಿಮರು ಹೆಚ್ಚಿರುವ ಮಾರ್ಕೆಟ್ಗಳಲ್ಲಿ ಇಂತಹ ತಿಂಡಿ, ತಿನಿಸು, ಜ್ಯೂಸ್ಗಳು ಕಂಡುಬರುವುದು ಕಾಮನ್. ಮುಸ್ಲಿಮರ ಜೊತೆಗೆ ಇತರೆ ಧರ್ಮದವರೂ ಈ ಫುಡ್ ಟೇಸ್ಟ್ ಮಾಡೋದು ವಿಶೇಷವೇ ಸರಿ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ