Hubballi News: ವಿಶ್ವದಲ್ಲೇ ದಾಖಲೆ ನಿರ್ಮಿಸಲು ರೆಡಿಯಾಯ್ತು ಕರ್ನಾಟಕದ ವಾಣಿಜ್ಯ ನಗರ!

ಹುಬ್ಬಳ್ಳಿ ರೈಲು ನಿಲ್ದಾಣ

ಹುಬ್ಬಳ್ಳಿ ರೈಲು ನಿಲ್ದಾಣ

ಹುಬ್ಬಳ್ಳಿಯಲ್ಲಿ ಈ ಹೊಸ ರೈಲು ಪ್ಲಾಟ್​ಫಾರಂ ಲೋಕಾರ್ಪಣೆ ಮಾಡಿದ ನಂತರ 1,366 ಮೀಟರ್ ಉದ್ದದ ಗೋರಖ್‌ಪುರ ರೈಲು ನಿಲ್ದಾಣವನ್ನು ಹಿಂದಿಕ್ಕಲಿದೆ.

 • News18 Kannada
 • 4-MIN READ
 • Last Updated :
 • Hubli-Dharwad (Hubli), India
 • Share this:

  ಹುಬ್ಬಳ್ಳಿ: ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ (Sri Siddaroodha Swami Hubballi Railway Station) ಅಭಿವೃದ್ಧಿಪಡಿಸಿದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ನ (World’s Longest Platform ) ಅಧಿಕೃತ ಉದ್ಘಾಟನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ (PM Narendra Modi) ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಹುಬ್ಬಳ್ಳಿ-ಧಾರವಾಡಕ್ಕೆ (Hubballi Dharwad News) ಭೇಟಿ ನೀಡಿದಾಗಲೇ ಹುಬ್ಬಳ್ಳಿಯಲ್ಲಿರುವ (Hubballi News) ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ.‘


  ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇದಕ್ಕೂ ಮುನ್ನ 1ನೇ ಪ್ಲಾಟ್‌​ಫಾರಂ 550 ಮೀಟರ್‌ ಉದ್ದ ಹೊಂದಿತ್ತು. ಇದೀಗ ಈ ಪ್ಲಾಟ್​ಫಾರಂನ್ನು ವಿಸ್ತರಿಸಿ 10 ಮೀಟರ್‌ ಅಗಲದೊಂದಿಗೆ 1,505 ಮೀಟರ್​ಗೆ ವಿಸ್ತರಣೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಈ ಹೊಸ ರೈಲು ಪ್ಲಾಟ್​ಫಾರಂ ಲೋಕಾರ್ಪಣೆ ಮಾಡಿದ ನಂತರ 1,366 ಮೀಟರ್ ಉದ್ದದ ಗೋರಖ್‌ಪುರ ರೈಲು ನಿಲ್ದಾಣವನ್ನು ಹಿಂದಿಕ್ಕಲಿದೆ.


  ಧಾರವಾಡ ಐಐಟಿ ಉದ್ಘಾಟನೆ
  ಐಐಟಿ ಧಾರವಾಡದ ಖಾಯಂ ಕ್ಯಾಂಪಸ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಮಾರ್ಚ್ 12 ರಂದು ಆಗಮಿಸಲಿದ್ದಾರೆ.
  ಇದನ್ನೂ ಓದಿ: Indian Railways: ಹಂಪಿ ಮಾದರಿಯಲ್ಲಿ ಹೊಸಪೇಟೆ ರೈಲು ನಿಲ್ದಾಣ; ವಿಶ್ವದ ಅತಿ ಉದ್ದದ ರೈಲ್ವೆ Platform ಉದ್ಘಾಟನೆಗೆ ಕ್ಷಣಗಣನೆ


  ಐಐಟಿ ಕ್ಯಾಂಪಸ್​ನಿಂದಲೇ ಲೋಕಾರ್ಪಣೆ
  ಇದೇ ಕ್ಯಾಂಪಸ್​ನಿಂದ ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಲೋಕಾರ್ಪಣೆಯನ್ನು ಸಾಂಕೇತಿಕವಾಗಿ ಮಾಡಲಿದ್ದಾರೆ ಎನ್ನಲಾಗಿದೆ.


  ವಿಶ್ವದ ಅತಿ ಉದ್ದದ ವೇದಿಕೆ ಎರಡು ವರ್ಷಗಳ ಹಿಂದೆ ಉದ್ಘಾಟನೆಗೆ ಸಿದ್ಧವಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಭೇಟಿ ನೀಡಿದರೂ ಈ ಪ್ಲಾಟ್​ಫಾರಂ ಉದ್ಘಾಟನೆ ಮಾಡಿರಲಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈ ಪ್ಲಾಟ್​ಫಾರಂ ಉದ್ಘಾಟನೆ ಮಾಡಲಿದ್ದಾರೆ ಎಂದು ಈ ಮುನ್ನವೇ ತಿಳಿಸಲಾಗಿತ್ತು.

  Published by:ಗುರುಗಣೇಶ ಡಬ್ಗುಳಿ
  First published: