Hubballi: ಹೃದಯದ ಮೇಲೆ ಗಡ್ಡೆ ಬೆಳೆದು ಬಳಲುತ್ತಿದ್ದ 54 ವರ್ಷದ ಮಹಿಳೆಗೆ ಮರುಜೀವ ನೀಡಿದ ಕಿಮ್ಸ್ ವೈದ್ಯರು!

ಚಿಕಿತ್ಸೆ ಪಡೆದ ಮಹಿಳೆ

ಚಿಕಿತ್ಸೆ ಪಡೆದ ಮಹಿಳೆ

ಈ ಕಾಯಿಲೆ ಸಾಮಾನ್ಯವಾಗಿ 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಸಿಗುತ್ತೆ ಅನ್ನೋದು ವೈದ್ಯರ ಮಾತು. ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಕಿಮ್ಸ್ ವೈದ್ಯರು ಪುನರ್ಜನ್ಮ ನೀಡಿದ್ದಾರೆ.

  • News18 Kannada
  • 4-MIN READ
  • Last Updated :
  • Hubli-Dharwad (Hubli), India
  • Share this:

    ಹುಬ್ಬಳ್ಳಿ: ಕಿಮ್ಸ್ ವೈದ್ಯರು (KIMS Doctor) ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಮರುಜನ್ಮ ನೀಡಿದ್ದಾರೆ. ಹತ್ತು ಲಕ್ಷದಲ್ಲಿ ಒಬ್ಬರಿಗೆ ಕಾಣಿಸುವ ರೋಗದಿಂದ ಬಳಲುತ್ತಿದ್ದ ಮಹಿಳೆಗೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ (Successful Operation) ನಡೆಸಿದ್ದಾರೆ. ಅದು ಸಾಮಾನ್ಯ ಕಾಯಿಲೆ ಅಲ್ಲ. ಆ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವಿನ ಕದ ತಟ್ಟಿದ್ದರು. ಕೆಲ ಕ್ಷಣದಲ್ಲಿ ಉಸಿರಾಟವೇ ನಿಂತು ಹೋಗ್ತಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಖಾಯಿಲೆ ವಾಸಿ ಮಾಡಲು‌ ಲಕ್ಷ ಲಕ್ಷ ಕೇಳಿದ್ದರು. ಹಣ ಇಲ್ಲದೆ ಆ ಮಹಿಳೆ ಕಿಮ್ಸ್ ಆಸ್ಪತ್ರೆ (KIMS Hubballi) ದಾಖಲಾಗಿದ್ದರು.


    ಇದೀಗ 10 ಲಕ್ಷ ಜನರಲ್ಲಿ ಕಾಣಿಸುವ ಆ ಕಾಯಿಲೆಯನ್ನು ಕಿಮ್ಸ್ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಪ್ರಾಣ ಉಳಿಸಿದ್ದಾರೆ.  ಈ ಮಹಿಳೆಯ ಹೆಸರು ನೀಲವ್ವ ನಾಗರಳ್ಳಿ, ವಯಸ್ಸು 54. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ನಿವಾಸಿ.


    ಹೃದಯದ ಮೇಲೆ ಗಡ್ಡೆ ಬೆಳೆದಿತ್ತು!
    ನೀಲವ್ವ ಕಳೆದ ಒಂದು ವರ್ಷದಿಂದ ಪೆರಿಕಾರ್ಡಿಯಲ್ ಸಿಸ್ಟ್ (ಹೃದಯದ ಮೇಲೆ ಗಡ್ಡೆ) ಎಂಬ ಖಾಯಿಲೆಯಿಂದ ಬಳಲುತ್ತಿದ್ದರು. ಹೃದಯದ ಗಡ್ಡೆಯಾದ ಪರಿಣಾಮ ನೀಲವ್ವನಿಗೆ ಉಸಿರಾಟದ ತೊಂದರೆ ಆಗುತ್ತಿತ್ತು. ಇದರಿಂದ ನೀಲವ್ವ ಅವರಿಗೆ ಮುಖ ಬಾವು ಬರೋ ಸಮಸ್ಯೆ ಕಾಡ್ತಿತ್ತು. ಜೊತೆಗೆ ಕೆಲಕ್ಷಣ ಉಸಿರಾಟವೇ ನಿಂತು ಹೋದಂಗೆ ಆಗ್ತಿತ್ತು.




    10 ಲಕ್ಷ ಜನರಲ್ಲಿ ಒಬ್ಬರಿಗೆ ಈ ಖಾಯಿಲೆ!
    ಈ ಕಾಯಿಲೆ ಸಾಮಾನ್ಯವಾಗಿ 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಸಿಗುತ್ತೆ ಅನ್ನೋದು ವೈದ್ಯರ ಮಾತು. ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಕಿಮ್ಸ್ ವೈದ್ಯರು ಪುನರ್ಜನ್ಮ ನೀಡಿದ್ದಾರೆ. ವೈದ್ಯರ ಕಾರ್ಯಕ್ಕೆ ನೀಲವ್ವ ಮತ್ತು ಕುಟಮಬದ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.


    ಇದನ್ನೂ ಓದಿ:Siddaroodha Swami: ಇದೇ ನೋಡಿ ಸಿದ್ಧಾರೂಢರ ಮಹಿಮೆ! ಓಂ ನಮಃ ಶಿವಾಯ, ಹರ ಹರ ಮಹಾದೇವ!


    ಹೃದಯದ ಕವಚದ ಮೇಲೆ ದೊಡ್ಡ ಗಂಟಾಗಿ, ಉಸಿರಾಟದ ಸಮಸ್ಯೆ ಉಂಟು ‌ಮಾಡೋ‌ ಖಾಯಿಲೆಗೆ ಪೆರಿಕಾರ್ಡಿಯಲ್ ಸಿಸ್ಟ್ ಎಂದು‌ ಕರೆಯುತ್ತಾರೆ. ಆಪರೇಶನ್​ಗೆ ಹಣವಿಲ್ಲದೇ ಪರದಾಡುತ್ತಿದ್ದ ಕುಟುಂಬಕ್ಕೆ ಕಿಮ್ಸ್ ವೈದ್ಯರು ದೇವರಾಗಿದ್ದಾರೆ.


    ಇದನ್ನೂ ಓದಿ: Karnataka Budget 2023: ಹುಬ್ಬಳ್ಳಿ-ಧಾರವಾಡ 6 ಪಥಗಳ ಹೆದ್ದಾರಿಗೆ 1,200 ಕೋಟಿ ಘೋಷಣೆ


    ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ನೀಲವ್ವ ಇದೀಗ ಮತ್ತೆ ಎಂದಿನಂತೆ ಲವಲವಿಕೆಯಿಂದ ಓಡಾಡುತ್ತಿದ್ದಾರೆ‌. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗಲ್ಲ ಅನ್ನೋ ಮಾತು ಇತ್ತೀಚೆಗೆ ಕಾಮನ್. ಆದ್ರೆ ಕಿಮ್ಸ್ ಮಾತ್ರ ಇದಕ್ಕೆ ಅಪವಾದ ಎನ್ನುವಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಮಾತು ಕೇಳಿಬಂದಿದೆ.


    ವರದಿ: ಶಿವರಾಮ ಅಸುಂಡಿ, ನ್ಯೂಸ್ 18, ಹುಬ್ಬಳ್ಳಿ

    Published by:ಗುರುಗಣೇಶ ಡಬ್ಗುಳಿ
    First published: