ಧಾರವಾಡ: ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ (SWEEP Committee) ಸಮಿತಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಯುವ ಮತದಾರರನ್ನು ಸೆಳೆಯುವುದಕ್ಕಾಗಿ ವೀಡಿಯೋ ರೀಲ್ಸ್ ಸ್ಪರ್ಧೆಯನ್ನು (Video Reels Compilation) ಆಯೋಜಿಸಿದೆ. ಈ ಮೂಲಕ ಸಾರ್ವಜನಿಕರಿಗೆ ಅರ್ಧ ನಿಮಿಷದಲ್ಲಿ ಪರಿಣಾಮಕಾರಿಯಾಗಿ ಸಂದೇಶ ತಲುಪಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ವಿಶೇಷವಾಗಿ ಇದನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಸ್ಥಾಪಿಸಲಾಗಿರುವ ಇ.ಎಲ್.ಸಿ ಕ್ಯಾಂಪಸ್ ಅಂಬಾಸಿಡರ್ಗಳನ್ನು ಬಳಸಿಕೊಂಡು ಅಪ್ಲೋಡ್ (Video Upload) ಮಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನವನ್ನು ಸ್ವೀಪ್ ಸಮಿತಿ ನಡೆಸಿದೆ.
ಏನಿರಬೇಕು ವೀಡಿಯೋದಲ್ಲಿ?
ವಿಡಿಯೋ ತುಣುಕು 30 ರಿಂದ 40 ಸೆಕೆಂಡ್ಗಳಷ್ಟೇ ಹೊಂದಿರಬೇಕು. ವಿಶೇಷವಾಗಿ ಯುವ ಮತದಾರರು, 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಮತ್ತು ಸಾರ್ವಜನಿಕರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತಹ ವಿಷಯವನ್ನು ಹೊಂದಿರಬೇಕು.
ಯಾರಿಗೆ ಕಳುಹಿಸಬೇಕು?
ಸ್ಪರ್ಧಿಗಳು ತಾವು ತಯಾರಿಸಿದ ರೀಲ್ಸ್‌ಗಳನ್ನು 9986929286 ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು. ಈ ರೀಲ್ಸ್‌ಗಳನ್ನು ಧಾರವಾಡ ಜಿಲ್ಲಾ ಪಂಚಾಯತ YouTube Chanel ದಲ್ಲಿ ಅಪ್ಲೋಡ್ ಮಾಡಿಸಿ ಲಿಂಕ್‌ಗಳನ್ನು ಸಂಬಂಧಿಸಿದ ಕ್ಯಾಂಪಸ್ ಅಂಬಾಸಿಡರ್ ಮೂಲಕ ವಿದ್ಯಾರ್ಥಿ ಮತದಾರರು ಹಾಗೂ ಸಾರ್ವಜನಿಕರಿಗೆ ವ್ಯಾಟ್ಸ್ಆಪ್ ಮೂಲಕ ಪ್ರಚಾರ ಮಾಡಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Dharwad News: ಗಂಡ ಮೃತಪಟ್ಟು ಒಂದೇ ದಿನಕ್ಕೆ ಮತದಾನ ಮಾಡಿದ 80ರ ಅಜ್ಜಿ!
ಯಾವಾಗ ಕೊನೆ ದಿನ?
ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 5 ರಂದು ರೀಲ್ಸ್ ವೀಡಿಯೋಗಳನ್ನು ಕಳುಹಿಸಲು ಕೊನೆಯ ದಿನವಾಗಿರುತ್ತದೆ. ಉತ್ತಮ ವೀಡಿಯೋಗಳಿಗೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಬಹುಮಾನ ವಿತರಿಸಲಾಗುತ್ತದೆ.
ಇದನ್ನೂ ಓದಿ: Dharwad: ಧಾರವಾಡ ಪೇಡೆಯ ಟೇಸ್ಟ್ ಹಿಂದಿರೋದು ಈ ಎಮ್ಮೆ ಕಣ್ರೀ!
ಯಾರೆಲ್ಲ ಭಾಗವಹಿಸಬಹುದು?
ವಿಡಿಯೋ ರೀಲ್ಸ್ಗಳನ್ನ ಮಾಡುವ ಆಸಕ್ತರು ಕಡ್ಡಾಯವಾಗಿ ಧಾರವಾಡ ಜಿಲ್ಲೆಯ ಯಾವುದಾದರೂ ವಿಧಾನಸಭಾ ಕ್ಷೇತ್ರವನ್ನ ಪ್ರತಿನಿಧಿಸಬೇಕು. ಅದರ ಹೊರತು ಇತರರಿಗೆ ಅವಕಾಶವಿರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ