ಧಾರವಾಡ : ಮತದಾನ ನಮ್ಮಹಕ್ಕು. ಓರ್ವ ಅಭ್ಯರ್ಥಿ ಗೆಲ್ಲಬೇಕಾದರೆ ಒಂದು ಮತ ಸಹ ಅತ್ಯಮೂಲ್ಯ. ಪ್ರತಿಯೊಬ್ಬರೂ ಮತದಾನ (Karnataka Elections 2023) ಮಾಡಿ ಎಂದು ಮನವಿ ಮಾಡಲಾಗುತ್ತಿದೆ. ಪ್ರತಿ ಮತವೂ ಅಮೂಲ್ಯ ಅಮೂಲ್ಯವಾಗಿದೆ ಎಂದು ಅರಿತ 80 ವರ್ಷದ ಅಜ್ಜಿಯೊಬ್ಬರು ಗಂಡ ಮೃತರಾದರೂ ಸಹ ಮತದಾನ ಮಾಡುವ ಮೂಲಕ ಮತದಾನದ (Voting) ಮಹತ್ವ ಸಾರಿದ್ದಾರೆ.
ಹೌದು, ಧಾರವಾಡದ ಸಾರಸ್ವತಪುರ ನಗರದ ನಿವಾಸಿ ಜ್ಯೋತಿಬಾ ತಿಬೇಲಿ ಎಂಬ 95 ವರ್ಷದ ವೃದ್ಧೆಯೋರ್ವರು ಮೇ 1 ರಂದು ನಿಧನರಾಗಿದ್ದರು. ಮನೆ ಯಜಮಾನ ಮೃತಪಟ್ಟ ಸುದ್ದಿ ತಿಳಿದ ಕುಟುಂಬಸ್ಥರಿಗೆ ಆಘಾತವಾಗಿತ್ತು. ಅಲ್ಲದೇ ಮೃತ ವೃದ್ಧನ ಪತ್ನಿ ಶಾಂತಾಬಾಯಿ ತಿಬೇಲಿ ಅಜ್ಜಿಗೆ ಸಿಡಿಲು ಬಡಿದಂತಾಗಿತ್ತು.
ಇದನ್ನೂ ಓದಿ: Hubballi Dharwad Police: ಕೊಹ್ಲಿ-ಗಂಭೀರ್ ಗಲಾಟೆ, ಹೀಗೇನಾದ್ರೂ ಆದ್ರೆ 112ಕ್ಕೆ ಕರೆ ಮಾಡಿ!
ಇತ್ತ 80 ವರ್ಷ ದಾಟಿದ ವೃದ್ಧರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ತಿಬೇಲಿ ಅವರ ಮನೆಗೆ ಆಗಮಿಸುತ್ತಾರೆ.
ಆದರೆ ಮನೆಯ ಯಜಮಾನ ಹಿರಿಯ ಜೀವಿ ಮೃತಪಟ್ಟ ಸುದ್ದಿ ತಿಳಿದು ಚುನಾವಣಾ ಅಧಿಕಾರಿಗಳು ವಾಪಸ್ ಆಗಲು ಮುಂದಾಗುತ್ತಾರೆ. ಆದರೆ ಮೃತ ವೃದ್ಧನ ಮಕ್ಕಳು ಹಾಗೂ ಮೊಮ್ಮಕ್ಕಳು ಅಜ್ಜಿಯ ಬಳಿ ಮತದಾನ ಮಾಡುವಂತೆ ಕೇಳುತ್ತಾರೆ. ಆಗ ಚುನಾವಣಾ ಅಧಿಕಾರಿಗಳು ದುಃಖದ ಮಡುವಿನಲ್ಲಿದ್ದ ಅಜ್ಜಿಯನ್ನು ಕೇಳಿದಾಗ ಮತದಾನ ಮಾಡಲು ಒಪ್ಪಿ ಈ ವೃದ್ಧೆ ತಮ್ಮ ಅತ್ಯಮೂಲ್ಯ ಮತದಾನ ಮಾಡಿದ್ದಾರೆ.
ಇದನ್ನೂ ಓದಿ: Dharwad: ಧಾರವಾಡ ಪೇಡೆಯ ಟೇಸ್ಟ್ ಹಿಂದಿರೋದು ಈ ಎಮ್ಮೆ ಕಣ್ರೀ!
ಇಂತಹ ಪರಿಸ್ಥಿತಿಯಲ್ಲಿಯೂ ಸಹ ಅಜ್ಜಿ ಮತದಾನದ ಮಾಡಿದ್ದ ಎಲ್ಲರಿಗೂ ಮತದಾನದ ಮಹತ್ವ ತಿಳಿಸಿಕೊಟ್ಟಂತಾಗಿದೆ. ಆದರೆ ಮತದಾನ ಮಹತ್ವ ತಿಳಿಸಿದರೂ ಸಹ ಅದೆಷ್ಟೋ ಜನರು ತಮ್ಮ ಮತದಾನ ಮಾಡದೇ ಇರುತ್ತಾರೆ. ಅಂತಹ ಹಲವರಿಗೆ ಈ ಅಜ್ಜಿಗೆ ಸ್ಪೂರ್ತಿದಾಯಕ ಎಂಬ ಮಾತು ಕೇಳಿಬಂದಿದೆ.
ವರದಿ: ಮಂಜುನಾಥ ಯಡಳ್ಳಿ, ನ್ಯೂಸ್ 18 ಧಾರವಾಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ