• Home
  • »
  • News
  • »
  • hubballi-dharwad
  • »
  • Hubballi: ಕನ್ನಡದ ಆದಿಕವಿ ಪಂಪನ ಮನೆಲಿ ಈಗ ಯಾರಿದ್ದಾರೆ? ವಿಳಾಸ ಇಲ್ಲಿದೆ ನೋಡಿ!

Hubballi: ಕನ್ನಡದ ಆದಿಕವಿ ಪಂಪನ ಮನೆಲಿ ಈಗ ಯಾರಿದ್ದಾರೆ? ವಿಳಾಸ ಇಲ್ಲಿದೆ ನೋಡಿ!

ಪಂಪನ ಮನೆ ವಿಡಿಯೋ ನೋಡಿ

"ಪಂಪನ ಮನೆ ವಿಡಿಯೋ ನೋಡಿ"

ಪಂಪನ ಮನೆ ಎಲ್ಲಿದೆ? ಈಗ ಹೇಗಿದೆ?

  • News18 Kannada
  • Last Updated :
  • Hubli-Dharwad (Hubli), India
  • Share this:

    ಹುಬ್ಬಳ್ಳಿ: ಆಕಾರದಲ್ಲೇನೋ ಅರಮನೆ, ಆದ್ರೆ ನೋಡೋಕೆ ಭೂತ ಬಂಗಲೆ! ನಮ್ ಧಾರವಾಡದಲ್ಲೇ ಇರೋ ಈ ಬೃಹತ್ ಕಟ್ಟಡ ನೋಡ್ತಿದ್ರೆ ಇದ್ಯಾವ ಕಾಲದಲ್ಲಿ ಕಟ್ಟಿರೋದಪ್ಪಾ? ಯಾವ ಪುಣ್ಯಾತ್ಮರು ಇಲ್ಲಿ ವಾಸವಿದ್ರೋ ಅನ್ನೋ ಪ್ರಶ್ನೆ ಹುಟ್ಟುತ್ತೆ. ಸತ್ಯ ಕಣ್ರೀ..ಇದು ಪುಣ್ಯಾತ್ಮರೊಬ್ಬರ ಮನೆಯೇ. ಕನ್ನಡದ ಆದಿಕವಿ (Kannada Adikavi Pampa) ಪಂಪ ವಾಸವಿದ್ದ ಮನೆ. ಚಾಲುಕ್ಯ ದೊರೆ ಅರಿಕೇಸರಿಯ ಆಸ್ಥಾನದಲ್ಲಿದ್ದ ಪಂಪ ಜನಿಸಿದ್ದು ಕ್ರಿಸ್ತಶಕ 903 ರಲ್ಲಿ.. ಭೀಮಪ್ಪಯ್ಯ ಹಾಗೂ ಅಬ್ಬಣ್ಣಬ್ಬೆಗೆ ಮಗನಾಗಿ ಧಾರವಾಡದ ಅಣ್ಣಿಗೇರಿಯ (Annigeri) ಇದೇ ಮನೆಯಲ್ಲಿ ಹುಟ್ಟಿ ಬೆಳೆದಿದ್ದನಂತೆ. ಹಾಗಾಗಿ ಇದನ್ನು ಈಗಲೂ ಪಂಪನ ವಾಡೆ ಅಂತಲೇ ಕರೆಯುತ್ತಾರೆ ಅಂತಾರೆ ಸ್ಥಳೀಯರು.


    ಇದನ್ನೂ ಓದಿ: Dog Blood Donation: ನಾಯಿಯಿಂದ ರಕ್ತದಾನ! ಎರಡು ಜೀವ ಬಚಾವ್


    ಈ ಮನೆಯ ಬಹುಪಾಲು ಭಾಗ ಮಳೆಗೆ ಕುಸಿದಿದೆ. ದನದ ಕೊಟ್ಟಿಗೆ, ಹಜಾರ, ಪ್ರಾಂಗಣ, ವೀಕ್ಷಣಾ ಕೊಠಡಿ ಯಥಾಸ್ಥಿತಿಯಲ್ಲಿವೆ. ಪಂಪನ ಸಾಹಿತ್ಯದಷ್ಟೆ ಪ್ರಾಂಗಣ ಆಕರ್ಷಕವಾಗಿದ್ದು ಇದ್ದರೆ ಇಲ್ಲೇ ಇದ್ದು ಬಿಡಬೇಕು ಅನಿಸುತ್ತೆ.


    ಇಲ್ಲಿದೆ ಮನೆ ವಿಳಾಸ
    ಪಂಪ ವಾಸವಿದ್ದ ಮನೆಯನ್ನು ನೀವೂ ನೋಡುವುದಾದರೆ ಹೀಗೆ ಬನ್ನಿ ಜೈನದೇಶಪಾಂಡೆ ವಾಡೆ (ಪಂಪನ ಮನೆ/ಜನ್ಮ ಭೂಮಿ)


    CCFH+RXP ಜೈನದೇಶಪಾಂಡೆ ವಾಡೆ(ಪಂಪನ ಮನೆ/ಜನ್ಮ ಭೂಮಿ), Unnamed Road, Annigeri, Karnataka 582201
    ಆದಿಕವಿ ಪಂಪನ ಮನೆಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಇದನ್ನೂ ಓದಿ: Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ


    ಅಣ್ಣಿಗೇರಿಯಿಂದ ಕೇವಲ ಎರಡು ಕಿ.ಮೀ ದೂರದಲ್ಲೇ ಈ ಹಳೆಯ ವಾಡೆ ಕಾಣಸಿಗುತ್ತೆ. ನೀವು ಧಾರವಾಡ ಕಡೆ ಹೋದ್ರೆ ಕನ್ನಡದ ಆದಿಕವಿಯ ಮೂಲಮನೆ ನೋಡೋಕೆ ಮರೆಯಬೇಡಿ.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: